Headlines

ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn

ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn



ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಸಣ್ಣ ಹೂಡಿಕೆಯಿಂದಾಗಿ ಇಂದು ಅವರ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ! | Shane Warne Smart Ipl Contract Earns Family 450 Rupees Crore From Rajasthan Royals Deal Kvn

ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆ ಮಾಡಿಕೊಂಡಿದ್ದ ವಿಶೇಷ ಷೇರು ಒಪ್ಪಂದದಿಂದಾಗಿ ಅವರ ಕುಟುಂಬಕ್ಕೆ ಈಗ ಕೋಟ್ಯಂತರ ರೂಪಾಯಿ ಲಭಿಸಲಿದೆ. ತಂಡದಲ್ಲಿ 3% ಷೇರುಗಳನ್ನು ಹೊಂದಿದ್ದ ವಾರ್ನ್, ತಂಡದ ಹೊಸ ಮೌಲ್ಯಮಾಪನದ ಪ್ರಕಾರ ಸುಮಾರು 450 ಕೋಟಿ ರೂಪಾಯಿಗಳಷ್ಟು ಹಣವನ್ನು ತಮ್ಮ ಕುಟುಂಬಕ್ಕೆ ಆಸ್ತಿಯಾಗಿ ಬಿಟ್ಟುಹೋಗಿದ್ದಾರೆ. 

ಜೈಪುರ: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರ ದೂರದೃಷ್ಟಿ, ಇಂದು ಅವರ ಕುಟುಂಬಕ್ಕೆ ಕೋಟಿಗಟ್ಟಲೆ ಹಣ ತಂದುಕೊಡುತ್ತಿದೆ. ಅಮೆರಿಕದ ಕಲ್ ಸೋಮನಿ ನೇತೃತ್ವದ ಜಂಟಿ ಉದ್ಯಮವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬರೋಬ್ಬರಿ 15,290 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಡೀಲ್‌ನಿಂದಾಗಿ, ವಾರ್ನ್ ಕುಟುಂಬಕ್ಕೆ ತಂಡದಲ್ಲಿದ್ದ ಅವರ ಷೇರುಗಳ ಮೂಲಕ ಸುಮಾರು 450 ಕೋಟಿ ರೂಪಾಯಿ ಸಿಗಲಿದೆ ಎಂದು ವರದಿಯಾಗಿದೆ.

ಶೇನ್ ವಾರ್ನ್ ಮಾಸ್ಟರ್ ಸ್ಟ್ರೋಕ್

2008ರಲ್ಲಿ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದಾಗ ವಾರ್ನ್ ತಮ್ಮ ಕಾಂಟ್ರ್ಯಾಕ್ಟ್‌ನಲ್ಲಿ ಒಂದು ವಿಶೇಷ ಷರತ್ತು ಹಾಕಿದ್ದರು. ತಾನು ತಂಡಕ್ಕಾಗಿ ಆಡುವ ಪ್ರತಿ ವರ್ಷಕ್ಕೆ, ತಂಡದ ಮಾಲೀಕತ್ವದಲ್ಲಿ 0.75% ಷೇರು ತನಗೆ ನೀಡಬೇಕು ಎನ್ನುವುದೇ ಆ ಒಪ್ಪಂದವಾಗಿತ್ತು. ಮೊದಲ ಸೀಸನ್‌ನಲ್ಲೇ ತಂಡವನ್ನು ಚಾಂಪಿಯನ್ ಮಾಡಿದ ವಾರ್ನ್, ನಂತರ ಇನ್ನೂ ನಾಲ್ಕು ಸೀಸನ್‌ಗಳನ್ನು ರಾಜಸ್ಥಾನ ಪರ ಆಡಿದರು. ಇದರಿಂದ ತಂಡದಲ್ಲಿ ಅವರ ಒಟ್ಟು ಷೇರು 3%ಗೆ ಏರಿತು. ಈಗ ರಾಜಸ್ಥಾನ ರಾಯಲ್ಸ್ ತಂಡ 15,290 ಕೋಟಿ ರೂಪಾಯಿಗೆ ಮಾರಾಟವಾಗುತ್ತಿರುವುದರಿಂದ, ವಾರ್ನ್ ಹೊಂದಿರುವ ಈ 3% ಷೇರಿನ ಮೌಲ್ಯ ಸುಮಾರು 450 ರಿಂದ 460 ಕೋಟಿ ರೂಪಾಯಿ ಆಗಲಿದೆ.

2008ರಲ್ಲಿ ಮನೋಜ್ ಬದಾಲೆ ನೇತೃತ್ವದ ಎಮರ್ಜಿಂಗ್ ಮೀಡಿಯಾ ಸಂಸ್ಥೆ ರಾಜಸ್ಥಾನ ತಂಡವನ್ನು ಕೇವಲ 67 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆಗ ವಾರ್ನ್ ಅವರೇ ತಂಡದ ಕ್ಯಾಪ್ಟನ್, ಕೋಚ್ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ತಮ್ಮ ಕಠಿಣ ಪರಿಶ್ರಮಕ್ಕೆ ಸಂಬಳದ ಜೊತೆಗೆ ಷೇರುಗಳನ್ನೂ ನೀಡಬೇಕೆಂದು ವಾರ್ನ್ ಕೇಳಿದ್ದರು. ಅವರ ಈ ಬುದ್ಧಿವಂತಿಕೆಯ ನಡೆ, ಅವರ ಮರಣದ ನಂತರ ಕುಟುಂಬಕ್ಕೆ ದೊಡ್ಡ ಆಸ್ತಿಯಾಗಿ ಪರಿಣಮಿಸಿದೆ.

ಶೇನ್ ವಾರ್ನ್ ಕುಟುಂಬಕ್ಕೆ ದೊಡ್ಡ ಆಸ್ತಿ

2022ರಲ್ಲಿ ನಿಧನರಾದ ವಾರ್ನ್ ಅವರ ಕುಟುಂಬಕ್ಕೆ ಈ ಹಣ ಸಿಗಲಿದೆ. ಬಿಸಿಸಿಐ ಅನುಮೋದನೆ ಪಡೆದ ನಂತರ, 2026ರ ಐಪಿಎಲ್ ಸೀಸನ್ ಬಳಿಕ ಈ ಷೇರುಗಳನ್ನು ಮಾರಾಟ ಮಾಡಿ ಹಣ ಪಡೆಯುವ ಹಕ್ಕು ಅವರ ಕುಟುಂಬಕ್ಕೆ ಇರುತ್ತದೆ. ತಾನು ಕಟ್ಟಿ ಬೆಳೆಸಿದ ತಂಡವು ಜಗತ್ತಿನ ಅತ್ಯಂತ ಮೌಲ್ಯಯುತ ತಂಡಗಳಲ್ಲಿ ಒಂದಾಗುವುದನ್ನು ನೋಡಲು ಇಂದು ವಾರ್ನ್ ನಮ್ಮೊಂದಿಗಿಲ್ಲ. ಆದರೆ, ಅಂದು ಅವರು ಸಹಿ ಹಾಕಿದ್ದ ಆ ಒಂದು ಕಾಂಟ್ರ್ಯಾಕ್ಟ್, ಅವರ ಕುಟುಂಬದ ಭವಿಷ್ಯವನ್ನು ಭದ್ರಪಡಿಸಿದೆ.



Source link

Leave a Reply

Your email address will not be published. Required fields are marked *