ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು: ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು | Hyderabad Exciting Twist In Woman Missing Case Only Daughter Killed Her With Lover

ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು: ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು | Hyderabad Exciting Twist In Woman Missing Case Only Daughter Killed Her With Lover



ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು: ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು | Hyderabad Exciting Twist In Woman Missing Case Only Daughter Killed Her With Lover

ಹೈದರಾಬಾದ್‌ನಲ್ಲಿ, ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನು ಮಗಳೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಒಂದು ವರ್ಷದ ಹಿಂದೆ ನಡೆದ ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಇಲ್ಲಿದೆ ಡಿಟೇಲ್ ಸ್ಟೋರಿ..

ತಾಯಿಯ ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಮಗಳು

ಹೈದರಾಬಾದ್‌: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಅಪರಾಧ ಘಟನೆಯೊಂದು ನಡೆದಿದೆ. ತನ್ನ ಪ್ರೀತಿಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಗಳೇ ತಾಯಿಯನ್ನು ಕೊಂದು ಶವವನ್ನು ಮನೆಯಲ್ಲೇ ಹೂತು ಹಾಕಿದ್ದಾಳೆ. ವರ್ಷದ ಹಿಂದೆ ನಡೆದ ಈ ಕೊಲೆ ಪ್ರಕರಣ ಈಗ ತಾಯಿಯ ದ್ವಿಚಕ್ರವಾಹನವನ್ನು ಮಾಡುವುದಕ್ಕೆ ಯತ್ನಿಸಿದಾಗ ಬೆಳಕಿಗೆ ಬಂದಿದೆ. ಹೈದರಾಬಾದ್‌ನ ಜವಾಹರನಗರದಲ್ಲಿ ಈ ಭಯಾನಕ ಘಟನೆ ನಡೆದಿದೆ.

ತಾಯಿ ಸ್ಕೂಟಿ ಸಮೇತ ನಾಪತ್ತೆಯಾಗಿದ್ದಾರೆ ಎಂದು ದೂರು

ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನು ಕೊಂದು ವಾಸವಿದ್ದ ಮನೆಯಲ್ಲೇ ಆತನ ಜೊತೆ ಸೇರಿ ಹೂತು ಹಾಕಿದ್ದಳು 2025ರ ಮೇ ತಿಂಗಳಿನಲ್ಲಿ ತಾಯಿ ಅಂಜು ತಮ್ಮ ಪ್ರೀತಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಗಳು ಅಂಜು ಹಾಗೂ ಆಕೆಯ ಪ್ರಿಯಕರ ಮೌಂಟಿ ರಾಜಪೂತ್, ಅಂಜುವನ್ನು ಕೊಲೆ ಮಾಡಿದ್ದರು. ನಂತರ ತಾಯಿ ಶವವನ್ನು ಮನೆಯಲ್ಲೇ ಹೂತು ಹಾಕಿದ್ದಾರೆ. ಬಳಿಕ ಅಂಜು ಅವರು ಬಳಸುತ್ತಿದ್ದ ದ್ವಿಚಕ್ರವಾಹನವನ್ನು ಅಡಗಿಸಿಟ್ಟು, ತಾಯಿ ಸ್ಕೂಟಿ ಸಹಿತ ನಾಪತ್ತೆಯಾಗಿದ್ದಾರೆ ಎಂದು ಇಶಿಕಾ ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೇ ತನಗೇನೂ ತಿಳಿಯದ ಅಮಾಯಕಳಂತೆ ಆಕೆ ವರ್ತಿಸಿದ್ದಳು. ಇತ್ತ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಜವಾಹರನಗರ ಪೊಲೀಸರು ತನಿಖೆ ಕೈಗೆತ್ತಿಕೊಂಡರೂ ಘಟನೆ ನಡೆದು ವರ್ಷ ಸಮೀಪಿಸುತ್ತಿದ್ದರು, ಈ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ ಮಗಳು ಇಶಿಕಾ ಇತ್ತೀಚೆಗೆ ತನ್ನ ತಾಯಿಯ ಸ್ಕೂಟಿಯನ್ನು ಮಾರುವುದಕ್ಕೆ ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವರ್ಷದ ಬಳಿಕ ಮಹಿಳೆಯ ಸ್ಕೂಟಿ ನೀಡಿತು ರೋಚಕ ಸುಳಿವು

ಇಶಿಕಾಳ ಗೆಳೆಯ ಮೌಂಟಿ ರಾಜಪೂತ್, ಅಂಜು ಅವರಿಗೆ ಸೇರಿದ ದ್ವಿಚಕ್ರ ವಾಹನ ಮಾರಾಟ ಮಾಡಲು ರಾಮಕೋಠಿಯಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದ. ಈ ವೇಳೆ ಆತ ಅನುಮಾನ ಬರುವಂತೆ ಮಾತನಾಡಿದ್ದು, ಈ ಹಿನ್ನೆಲೆ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಪ್ರವೇಶದ ಬಳಿಕ ಈ ಪ್ರಕರಣಕ್ಕೆ ರೋಚಕ ತಿರುವ ಸಿಕ್ಕಿದೆ. ಯುವತಿಯ ಗೆಳೆಯ ಕೂಡ ಕೊಲೆಗೆ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ.

ಇದನ್ನೂ ಓದಿ: 10ನೇ ಕ್ಲಾಸ್ ಕೂಡ ಓದಿಲ್ಲ, ಆದ್ರೂ ದಂತವೈದ್ಯ: 20 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ನಕಲಿ ಡೆಂಟಿಸ್ಟ್ ಅರೆಸ್ಟ್

ಇಶಿಕಾ, ಗೆಳೆಯ ಮೌಂಟಿ ರಜಪೂತ್ ಬಂಧನ

40 ವರ್ಷ ಪ್ರಾಯದ ಅಂಜು ತನ್ನ ಮಗಳು ಇಶಿಕಾ ಜೊತೆ ಜವಾಹರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತ್ ನಗರದಲ್ಲಿ ವಾಸಿಸುತ್ತಿದ್ದರು. ಮಗಳು ಇಶಿಕಾ ಮೇ 2025 ರಿಂದ ತನ್ನ ತಾಯಿ ಅಂಜು ಸ್ಕೂಟಿ ಸಮೇತ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ತನಿಖೆಗಿಳಿದ ಪೊಲೀಸರಿಗೆ ವರ್ಷ ಸಮೀಪಿಸುತ್ತಿದ್ದರೂ ಅಂಜುವಿನ ಸುಳಿವು ಸಿಕ್ಕಿರಲಿಲ್ಲ. ಆದರೆ ಈ ಪಾಪಿ ಮಗಳು ಯಾವಾಗ ತಾಯಿಯ ಸ್ಕೂಟಿಯನ್ನು ಮಾರುವುದಕ್ಕೆ ಯತ್ನಿಸಿದಳೋ ಆಗಲೇ ಅವರ ಗ್ರಹಚಾರ ಕೆಟ್ಟಿತ್ತು. ವಿಚಾರಣೆಯ ನಂತರ ಪೊಲೀಸರು ಇಶಿಕಾ ಹಾಗೂ ಆಕೆಯ ಪ್ರಿಯಕರ ಮೌಂಟಿ ರಾಜಪೂತ್‌ನನ್ನು ಬಂಧಿಸಿದ್ದಾರೆ. ತಾಯಿ ತಮ್ಮ ಪ್ರೀತಿಗೆ ಅಡ್ಡಿಪಡಿಸಿದ್ದರಿಂದ ಕೊಲೆ ಮಾಡಿರುವುದಾಗಿ ಆಕೆ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದ್ದು,ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಅಮ್ಮನ್ನೇ ಕೊಂದ ಪಾಪಿ ಮಗಳನ್ನು ಅಮ್ಮ ಖರೀದಿಸಿದ ಸ್ಕೂಟಿ ಪತ್ತೆ ಮಾಡಲು ಸಹಾಯ ಮಾಡುವಂತಾಗಿದೆ.

ಇದನ್ನೂ ಓದಿ: 2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು



Source link

Leave a Reply

Your email address will not be published. Required fields are marked *