Headlines

ಇರಾನ್-ಇಸ್ರೇಲ್ ಯುದ್ಧ: ರಷ್ಯಾ, ಚೀನಾದಿಂದ ಇರಾನ್‌ಗೆ ಬೆಂಬಲ, ಹೆಜ್ಜೆ ಹಿಂದೆ ಇಟ್ಟ ಅಮೆರಿಕ | Middle East Conflict S Iran Backed By Russia And China Global Tensions Rise Gdp Videoshow

ಇರಾನ್-ಇಸ್ರೇಲ್ ಯುದ್ಧ: ರಷ್ಯಾ, ಚೀನಾದಿಂದ ಇರಾನ್‌ಗೆ ಬೆಂಬಲ, ಹೆಜ್ಜೆ ಹಿಂದೆ ಇಟ್ಟ ಅಮೆರಿಕ | Middle East Conflict S Iran Backed By Russia And China Global Tensions Rise Gdp Videoshow


ಜಾಗತಿಕ ಮಟ್ಟದಲ್ಲಿ ನೋಡಿದಾಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಕೇವಲ ಮೂರು ರಾಷ್ಟ್ರಗಳ ಮಧ್ಯೆ ಮಾತ್ರವೇ ನಡೆಯುತ್ತಿದೆ ಅನಿಸುತ್ತದೆ. ಆದ್ರೆ, ಅಮೆರಿಕ ಈ ಯುದ್ಧದಿಂದ ಇಷ್ಟು ಬೇಗ ಹಿಂದೆ ಸರಿದಿದ್ದನ್ನು ನೋಡಿದಾಗ, ಇರಾನ್​​​ ಬೆನ್ನೆಗೆ ಮತ್ಯಾವುದೋ ಬಲ ಇರೋದು ಗೊತ್ತಾಗುತ್ತದೆ. ಹೌದು, ಆ ಬಲ ಬೇರ್ಯಾವುದು ಅಲ್ಲ ರಷ್ಯಾ ಹಾಗೂ ಚೀನಾ ರಾಷ್ಟ್ರಗಳು ಇರಾನ್​​ ಬೆನ್ನಿಗೆ ನಿಂತು ಸಪೂರ್ಟ್​​​ ಮಾಡಿವೆ.. ಇದ್ರ ಅಂದಾಜೇ ಇಲ್ಲದ ಅಮೆರಿಕ ಹಾಗೂ ಇಸ್ರೇಲ್​​​ ಯುದ್ಧದಲ್ಲಿ ಇರಾನ್​​​ನಷ್ಟೆ ನಷ್ಟವನ್ನು ಅನುಭವಿಸಿದೆ.. ಅಮೆರಿಕ ದುಬಾರಿ ಯುದ್ಧದಿಂದ ಕಂಗಾಲಾಗಿದ್ದು, ಕದನ ವಿರಾಮವನ್ನು ಘೋಷಣೆ ಮಾಡಿಕೊಂಡಿದೆ.

ರಷ್ಯಾ ಹಾಗೂ ಚೀನಾ ಟೊಂಕ ಕಟ್ಟಿ ಇರಾನ್​​​ನ ಯುದ್ಧಕ್ಕೆ ನೆರಾವಗ್ತಿದೆ.. ಕೇವಲ ಯುದ್ಧ ರಂಗಕ್ಕೆ ಮಾತ್ರವೇ ಈ ನೆರವು ಸೀಮಿತವಾಗಿಲ್ಲ.. ಇರಾನ್​​​ನ ಆರ್ಥಿಕತೆಯನ್ನ ಹಾಗೂ ಅಲ್ಲಿನ ತೈಲೋಧ್ಯಮವನ್ನು ಕುಸಿಯದಂತೆ ನೋಡಿಕೊಳ್ಳುವುದಕ್ಕೆ ನೆರವಾಗ್ತಿದೆ. ಅದಕ್ಕಿಂತಲೂ ಹೆಚ್ಚಿನದಾಗಿ ಮಾನವೀಯ ನೆರವುಗಳನ್ನು ಕೂಡ ಈ ರಾಷ್ಟಗಳು ಮಾಡುತ್ತಿವೆ.

ಮೇಲ್ನೋಟಕ್ಕೆ ಈ ಯುದ್ಧ ನಡೆಯುತ್ತಿರೋದು ಕೇವಲ ಮೂರು ರಾಷ್ಟ್ರಗಳ ನಡ್ವೆ ಮಾತ್ರವೇ.. ಆದ್ರೆ, ಒಳಗಿಂದೊಳಗೆ ರಷ್ಯಾ ಹಾಗೂ ಚೀನಾದಂತಹ ಬಲಾಢ್ಯ ರಾಷ್ಟ್ರಗಳು ಇರಾನ್​​​​​ ನೆರವಿಗೆ ನಿಂತಿವೆ.. ಇನ್ನು ಯುದ್ಧದ ಪರಿಣಾಮವನ್ನು ಜಾಗತಿಕವಾಗಿ ಎಲ್ಲರೂ ಅನುಭವಿಸುವಂತಾಗಿದೆ.. ಈ ಎಲ್ಲಾ ಕಾರಣದಿಂದಾಗಿ ಅದಾಗಲೇ ವಿಶ್ವದ ಹಲವು ರಾಷ್ಟ್ರಗಳು ಎರಡು ಬಣವಾಗಿ ನಿಂತಿರೋದು ಸುಳ್ಳಲ್ಲ



Source link

Leave a Reply

Your email address will not be published. Required fields are marked *