
ಬೆಂಗಳೂರು, ಮಾರ್ಚ್ 26: ಚಿನ್ನದ ಬೆಲೆ ಸತತ ಎರಡನೇ ಬಾರಿ ಹೆಚ್ಚಿದೆ. ನಿನ್ನೆ ಭರ್ಜರಿಯಾಗಿ ಏರಿದ್ದ ಬಂಗಾರದ ದರ (ಚಿನ್ನದ ದರಗಳು) ಇವತ್ತು ಗುರುವಾರ ಸ್ವಲ್ಪ ಮಟ್ಟಿಗೆ ಹೆಚ್ಚಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆಯಲ್ಲಿ ಏರಿಕೆಯಾಗಿದೆ. ಕೆಲವೆಡೆ ಮಾತ್ರ ಬೆಲೆ ತುಸು ತಗ್ಗಿದೆ. ಇನ್ನು, ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ನಿನ್ನೆಯ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,34,650 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,46,890 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 25,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,34,650 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 25,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 26ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,689 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,465 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,017 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,689 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,465 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 13,465 ರೂ
- ಬೆಲೆ: 13,670 ರೂ
- ಮುಂಬೈ: 13,465 ರೂ
- ದೆಹಲಿ: 13,480 ರೂ
- ಕೋಲ್ಕತಾ: 13,465 ರೂ
- ಕೇರಳ: 13,465 ರೂ
- ಅಹ್ಮದಾಬಾದ್: 13,470 ರೂ
- ಜೈಪುರ: 13,480 ರೂ
- ಲಕ್ನೋ: 13,480 ರೂ
- ಭುವನೇಶ್ವರ್: 13,465 ರೂ
ಇದನ್ನೂ ಓದಿ: ಪಿಎಂ ಎಸ್ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 558 ರಿಂಗಿಟ್ (13,117 ರೂಪಾಯಿ)
- ದುಬೈ: 510 ಡಿರಾಮ್ (13,032 ರೂಪಾಯಿ)
- ಅಮೆರಿಕ: 142 ಡಾಲರ್ (13,328 ರೂಪಾಯಿ)
- ಸಿಂಗಾಪುರ: 180.90 ಸಿಂಗಾಪುರ ಡಾಲರ್ (13,244 ರೂಪಾಯಿ)
- ಕತಾರ್: 506.50 ಕತಾರಿ ರಿಯಾಲ್ (13,037 ರೂ)
- ಸೌದಿ ಅರೇಬಿಯಾ: 516 ಸೌದಿ ರಿಯಾಲ್ (12,910 ರೂಪಾಯಿ)
- ಓಮನ್: 54 ಒಮಾನಿ ರಿಯಾಲ್ (13,166 ರೂಪಾಯಿ)
- ಕುವೇತ್: 41.75 ಕುವೇತಿ ದಿನಾರ್ (12,779 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 250 ರೂ
- ಬೆಲೆ: 260 ರೂ
- ಮುಂಬೈ: 250 ರೂ
- ದೆಹಲಿ: 250 ರೂ
- ಕೋಲ್ಕತಾ: 250 ರೂ
- ಕೇರಳ: 260 ರೂ
- ಅಹ್ಮದಾಬಾದ್: 250 ರೂ
- ಜೈಪುರ: 250 ರೂ
- ಲಕ್ನೋ: 250 ರೂ
- ಭುವನೇಶ್ವರ್: 260 ರೂ
- ಪುಣೆ: 250
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ