ಬಿಗ್ಬಾಸ್ 12ರಲ್ಲಿ ಅತಿ ಹೆಚ್ಚು ಜಗಳವಾಡಿದ್ದ ಅಶ್ವಿನಿ ಗೌಡ ಮತ್ತು ಮ್ಯೂಟಂಟ್ ರಘು, ಶೋನಿಂದ ಹೊರಬಂದ ನಂತರ ತಮ್ಮ ವೈರತ್ವ ಮರೆತಿದ್ದಾರೆ. ಗಿಚ್ಚಿ ಗಿಲಿಗಿಲಿ ಷೋನಲ್ಲಿ ಒಂದಾದ ಇವರಿಬ್ಬರು, ಪರಸ್ಪರ ಹೊಗಳಿಕೊಂಡು, ಅಶ್ವಿನಿ ಅವರು ರಘುಗೆ ಲವ್ ಮಾರ್ಕ್ ತೋರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಿಗ್ಬಾಸ್ 12 (Bigg Boss 12)ನಲ್ಲಿ ಅತಿ ಹೆಚ್ಚು ಜಗಳ ಮಾಡಿದ್ದು ಯಾರು ಎಂದು ವೀಕ್ಷಕರನ್ನು ಕೇಳಿದರೆ ಮೊದಲಿಗೆ ಬರುವ ಹೆಸರು ಅಶ್ವಿನಿ ಗೌಡ. 2ನೇ ರನ್ನರ್ ಅಪ್ ಆಗಿ ಜಯಗಳಿಸಿದ ಅಶ್ವಿನಿ ಅವರು, ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೂ ಸಾಕಷ್ಟು ಸೌಂಡ್ ಮಾಡಿದ್ದರು. ತಮ್ಮಂಥ ಸ್ಪರ್ಧಿ ಹಿಂದೆ ಬಂದಿಲ್ಲ, ಮುಂದೆ ಬರೋದಾದ್ರೆ ನನ್ನನ್ನು ಮೀರಿ ಹೋಗಬೇಕು ಎನ್ನುವ ಮೂಲಕ ವಿನ್ನರ್, ಮೊದಲ ರನ್ನರ್ ಅಪ್ ಬಗ್ಗೆ ಸಿಕ್ಕಾಪಟ್ಟೆ ಅಸಮಾಧಾನ ಹೊರಹಾಕಿದ್ದರು.

ಬಿಗ್ಬಾಸ್ ಮನೆಯಲ್ಲಿ ಇದ್ದಾಗ, ಇವರು ಬಹುತೇಕ ಎಲ್ಲರ ಜೊತೆಯಲ್ಲಿಯೂ ಜಗಳ ಮಾಡಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಮ್ಯೂಟಂಟ್ ರಘು. ಇವರಿಬ್ಬರ ಜಗಳ ಒಂದು ಹಂತಕ್ಕೆ ಹೋದಾಗ ಹೋಗಲೇ, ಹೋಗೆ ಎನ್ನುವಂಥ ಏಕವಚನಕ್ಕೂ ಹೋಗಿತ್ತು.

ಅಷ್ಟಕ್ಕೂ ಬಿಗ್ಬಾಸ್ ಎನ್ನುವುದು ಒಂದು ಆಟ. ಆಟ, ಆಟಗಾರರು, ಸ್ಪರ್ಧೆ ಎಂದು ಬಂದಾಗ ಎಲ್ಲರಿಗೂ ಗೆಲ್ಲಬೇಕು ಎಂದು ಇರುತ್ತದೆ. ಆದ್ದರಿಂದ ಜಗಳ, ಪ್ರೀತಿ, ಪ್ರೇಮ, ಕೆಲವೊಮ್ಮೆ ನಾಟಕಗಳು, ಸ್ಕ್ರಿಪ್ಟೆಡ್ ಮಾತುಗಳು ಎಲ್ಲವೂ ಮಾಮೂಲು ಎನ್ನುವುದು ಸ್ಪರ್ಧಿಗಳ ಮಾತು ಅನ್ನಿ.

ಇದೇ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಒಂದಷ್ಟು ದಿನ ಬಿಗ್ಬಾಸ್ ಮನೆಯಲ್ಲಿನ ಸಿಟ್ಟು ಇದ್ದರೂ, ದಿನಗಳೆದಂತೆ, ಆ ಕೋಪ ತಣ್ಣಗಾಗುತ್ತದೆ. ಸ್ಪರ್ಧಿಗಳೆಲ್ಲಾ ಒಂದಾಗುತ್ತಾರೆ. ಅದಕ್ಕೆ ಸಾಕ್ಷಿಯಾದದ್ದು ಗಿಚ್ಚಿ ಗಿಲಿಗಿಲಿ ಷೋ.

ಈ ಷೋನಲ್ಲಿ ಅಶ್ವಿನಿ ಗೌಡ (Bigg Boss Ashwini Gowda) ಮತ್ತು ಮ್ಯೂಟಂಟ್ ರಘು ಅವರನ್ನು ಕರೆಸಲಾಗಿದೆ. ಬಿಗ್ಬಾಸ್ನ ಕರೆಕ್ಷನ್ ಇಲ್ಲಿ ಮಾಡಬೇಕು ಎಂದು ಆ್ಯಂಕರ್ ಅನುಪಮಾ ಗೌಡ ಹೇಳಿದಾಗ, ಇಬ್ಬರೂ ಅತ್ಯಂತ ಪ್ರೀತಿಯಿಂದ ಮಾತನಾಡಿದ್ದಾರೆ.

ಅಶ್ವಿನಿ ಅವರೇ ನೀವು ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದೀರಾ ಎಂದು ರಘು ಹೇಳಿದ್ರೆ, ಅಶ್ವಿನಿ ಅವ್ರು ನೀವು ತುಂಬಾ ಚೆನ್ನಾಗಿ ಕಾಣಿಸ್ತೀರಾ ಎಂದಿದ್ದಾರೆ. ಬಿಗ್ಬಾಸ್ ಇರೋದೇ ನಿಮಗೋಸ್ಕರ ಎಂದು ರಘು ಹೇಳಿದ್ರೆ, ಅಶ್ವಿನಿ ಇಲ್ಲಿ ತುಂಬಾ ಜನ ಜಗಳ ಆಡ್ತಾರೆ, ಜಗಳ ಎಂದ್ರೆ ನನಗೆ ಇಷ್ಟನೇ ಆಗಲ್ಲ ಎಂದಿದ್ದಾರೆ. ಅದಕ್ಕೆ ರಘು ನಾನು ಈಗ ಬಂದಿದ್ದೇನಲ್ಲ, ಎಲ್ಲಾ ಸರಿ ಆಗತ್ತೆ ಎಂದಾಗ ಅಶ್ವಿನಿ ಗೌಡ ಲವ್ ಮಾರ್ಕ್ ತೋರಿಸಿದ್ದಾರೆ.

Source link
Bigg Boss ಮ್ಯೂಟಂಟ್ ರಘುಗೆ ಹಾರ್ಟ್ ಕೊಟ್ಟ ಅಶ್ವಿನಿ ಗೌಡ! ಅಲ್ಲಿ ಹಾವು-ಮುಂಗುಸಿ, ಇಲ್ಲಿ ನೋಡಿ ಮಜಾ