
ಬೆಂಗಳೂರು, ಮಾರ್ಚ್ 26: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ಭದ್ರತೆ ಮತ್ತು ಪ್ರವೇಶ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು, ಪಿಡಬ್ಲ್ಯುಡಿ, ವೈದ್ಯಕೀಯ ಸೇವೆಗಳು, ಶಾಮಕ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ಹೊಸ ವ್ಯವಸ್ಥೆಗಳ ಕುರಿತು ಪೂರ್ವಭಾವಿ ತರಬೇತಿ ನೀಡುತ್ತಿದ್ದಾರೆ. ಭದ್ರತಾ ದೃಷ್ಟಿಯಿಂದ, ಹಿಂದಿನಂತೆ ಕ್ವೀನ್ಸ್ ರೋಡ್ ಬದಲಿಗೆ ಕಬ್ಬನ್ ರೋಡ್ ಮತ್ತು ಲಿಂಕ್ ರೋಡ್ ಮೂಲಕ ಗರಿಷ್ಠ ಸಂಖ್ಯೆಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಗೇಟ್‌ಗಳನ್ನು ವಿಸ್ತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಮೆಟ್ರೋ (ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ, ಎಂಜಿ ರೋಡ್ ನಿಲ್ದಾಣ) ಬಳಸುವಂತೆ ಮನವಿ ಮಾಡಲಾಗಿದೆ. ಟಿಕೆಟ್‌ಗಳ ಜೊತೆಗೆ ಕ್ಯೂಆರ್ ಕೋಡ್ ಮತ್ತು ಮೆಟ್ರೋ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಜೊತೆಗೆ, ಪಾರ್ಕಿಂಗ್ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ, ಅಲ್ಲಿಂದ ಶಾಟಲ್ ಬಸ್‌ಗಳ ಮೂಲಕ ಕ್ರೀಡಾಂಗಣಕ್ಕೆ ತಲುಪುವ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲರಿಗೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ