
ಬೆಂಗಳೂರು, ಮಾರ್ಚ್ 26: ಇವತ್ತು ಎಲ್ಲಾ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಲ್ತ್ ಇನ್ಶೂರೆನ್ಸ್ (ಆರೋಗ್ಯ ವಿಮೆ) ಸೌಲಭ್ಯವನ್ನು ಒದಗಿಸುತ್ತವೆ. ಈ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಬಳಿ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಸೌಲಭ್ಯವಿದೆ ಎಂದು ಹೇಳಿ ವೈಯಕ್ತಿಕ ಇನ್ಶೂರೆನ್ಸ್ ಪಾಲಿಸಿ ಮಾಡುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು ಎಂದು ಹಣಕಾಸು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅನಿಸಿಕೆಗೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ಗೂಡಿಸಿದ್ದಾರೆ.
‘ಬಹಳ ಜನರು ತಮ್ಮ ಕಂಪನಿಯ ಗ್ರೂಪ್ ಇನ್ಷೂರೆನ್ಸ್ ಸಾಕಷ್ಟಾಯಿತು ಎಂದು ಭಾವಿಸಿ, ಪರ್ಸನಲ್ ಹೆಲ್ತ್ ಪಾಲಿಸಿಯೇ ಇಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಕಾರ್ಪೊರೇಟ್ ಯೋಜನೆಗಳು ಸಮಗ್ರ ಕವರೇಜ್ಗೆ ಒತ್ತು ಕೊಡುವುದಿಲ್ಲ. ಕಡಿಮೆ ಬೆಲೆಗೆ ಪಾಲಿಸಬೇಕು’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಿಎಂ ಎಸ್ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ
ಕಾರ್ಪೋರೇಟ್ ಹೆಲ್ತ್ ಇನ್ಷೂರೆನ್ಸ್ ಯಾಕೆ ಸಾಕಾಗಲ್ಲ?
ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಅನ್ನು ಕಡಿಮೆ ಬೆಲೆಗೆ ನೆಗೋಶಿಯೇಟ್ ಮಾಡಿ ಪಡೆಯಬೇಕು. ಇದರಲ್ಲಿ ಹಲವು ಪರಿಮಿತಿಗಳಿವೆ. ವಾರ್ಡ್ ಬಾಡಿಗೆ ಕವರೇಜ್ ನಲ್ಲಿ ಮಿತಿ ಇರುತ್ತದೆ. ಸರ್ಜನ್ ಫೀ, ಪ್ರೊಸೀಜರ್ ಶುಲ್ಕ, ಆಸ್ಪತ್ರೆ ವೆಚ್ಚ ಇತ್ಯಾದಿ ವೆಚ್ಚಗಳಿಗೆ ಪೂರ್ಣ ಕವರೇಜ್ ಸಿಗದೇ ಇರಬಹುದು. ಹೆಚ್ಚಿನ ಪಾಲಿಸಿಗಳಲ್ಲಿ ನಿಮ್ಮ ಒಟ್ಟೂ ಆಸ್ಪತ್ರೆಯ ವೆಚ್ಚದಲ್ಲಿ ಶೇ. 80ಕ್ಕಿಂತ ಕಡಿಮೆ ಮೊತ್ತವನ್ನು ಭರಿಸಬಹುದಾಗಿದೆ. ನಿತಿನ್ ಕಾಮತ್ ಈ ಅಂಶಗಳು ತಮ್ಮ ಟ್ವೀಟ್ ನಲ್ಲಿ ಎತ್ತಿ ತೋರಿಸಿದ್ದಾರೆ.
ಕಾರ್ಪೊರೇಟ್ ಹೆಲ್ತ್ ಪಾಲಿಸಿಗಳು ಸಾಮಾನ್ಯವಾಗಿ 5 ರಿಂದ 10 ರೂ ವಾರ್ಷಿಕ ಕವರೇಜ್ ಒದಗಿಸುತ್ತಾರೆ. ನೀವು ಆರೋಗ್ಯಯುತವಾಗಿದ್ದಾಗ ಈ ಕವರೇಜ್ ಬಹಳ ಹೆಚ್ಚಾಯಿತು ಎನಿಸಬಹುದು. ಆದರೆ, ಭಾರತದಲ್ಲಿ ವೈದ್ಯಕೀಯ ಹಣದುಬ್ಬರ ಶೇ. 14ರಷ್ಟು ಇದೆ. ಅಂದರೆ ವೈದ್ಯಕೀಯ ವೆಚ್ಚ ವರ್ಷಕ್ಕೆ ಶೇ. 14ರಷ್ಟು ಹೆಚ್ಚುತ್ತಲೇ ಇರಬಹುದು. ಹೀಗಾಗಿ, ಹೋಗುತ್ತಾ ಹೋಗುತ್ತಾ ಕಾರ್ಪೋರೇಟ್ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಸಾಕಾಗದೇ ಹೋಗಬಹುದು.
ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಯೋಜನೆ
ನಿತಿನ್ ಕಾಮತ್ ಸಲಹೆ ಇದು
ಕಾರ್ಪೊರೇಟ್ ಪಾಲಿಸಿ ಜೊತೆಯಲ್ಲಿ ಪರ್ಸನಲ್ ಪಾಲಿಸಿಯನ್ನೂ ಪಡೆದಿರಿ. ನೀವು ಆರೋಗ್ಯವಂತರಾಗಿದ್ದಾಗಲೇ ಪಾಲಿಸಿ ಪಡೆದರೆ ಕಡಿಮೆ ಬೆಲೆಗೆ ಸಿಗುತ್ತದೆ. ಕಾಯಿಲೆ ಬಂದ ಬಳಿಕ ಪಾಲಿಸಿ ಪಡೆಯಬೇಕೆಂದರೆ ದುಬಾರಿ ಪ್ರೀಮಿಯಂ ಕಟ್ಟಲಾಗುತ್ತದೆ. ಕಾರ್ಪೊರೇಟ್ ಪಾಲಿಸಿ ಮತ್ತು ಪರ್ಸನಲ್ ಎರಡನ್ನೂ ಪಾಲಿಸಿ ಇದ್ದಾಗ ನೀವು ಇನ್ಶೂರೆನ್ಸ್ ಕ್ಲೆಮ್‌ಗೆ ಕಾರ್ಪೊರೇಟ್ ಪಾಲಿಸಿ ಬಳಸಿರಿ. ಪರ್ಸನಲ್ ಪಾಲಿಸಿಯನ್ನು ಸಾಧ್ಯವಾದಷ್ಟೂ ಬಳಸದೆ ಉಳಿಸಿ, ನೋಕ್ಲೇಮ್ ಬೋನಸ್ ಅನ್ನು ಸೇರುವಂತೆ ನೋಡಿಕೊಳ್ಳಿ. ಇದರಿಂದ ಮುಂದ್ಯಾವತ್ತಾದರೂ ಪರ್ಸನಲ್ ಪಾಲಿಸಿಯ ಅಗತ್ಯ ಬಹಳ ಬರುತ್ತದೆ ಎಂಬುದು ನಿತಿನ್ ಕಾಮತ್ ಅವರ ಸಲಹೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ