Headlines

Video: ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತ ಶ್ವಾನ

Video: ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತ ಶ್ವಾನ


Video: ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತ ಶ್ವಾನ

ಶ್ವಾನಗಳು (ನಾಯಿ) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಇಲ್ಲ. ಮನೆಯ ಸದಸ್ಯರಂತೆ ಇರುವ ಶ್ವಾನ ಮನೆಗೆ (ಮಾಲೀಕ) ನಿಷ್ಠಾವಂತರ ಮನೆಯವರ ಮಾತನ್ನು ಚಾಚು ತಪ್ಪದಂತೆ ಕೇಳುತ್ತದೆ. ಈಗ ಈ ಮನೆ ಮಾಲಕಿ ಹೇಳಿದ ಮಾತನ್ನು ಚಾಚು ತಪ್ಪದಂತೆ ಈ ಶ್ವಾನವು ಪಾಲಿಸಿದೆ. ಮಾಲಕಿಯ ಮೊಬೈಲ್‌ ಯಾರು ಮುಟ್ಟದಂತೆ ಕಾವಲಿಗೆ ನಿಂತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈಶ್ವಾನದ ಕರ್ತವ್ಯ ನಿಷ್ಠೆಯನ್ನು ಮೆಚ್ಚಿದ್ದಾರೆ.

ರಶ್ಮಿ ಪ್ರಜಾಪತಿ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಶ್ವಾನದ ಸ್ವಾಮಿ ನಿಷ್ಠೆಯನ್ನು ಕಾಣಬಹುದು. ಶ್ವಾನವು ಮನೆ ಮಾಲಕಿಯ ಮೊಬೈಲ್ ಯಾರು ಮುಟ್ಟದಂತೆ ಕಾವಲಿಗೆ ನಿಂತಿರುವುದನ್ನು ನೀವು ಕಾಣುತ್ತೀರಿ. ಮನೆ ಮಾಲಕಿಯ ಮಗಳು ಮೊಬೈಲ್ ಮುಟ್ಟಲು ಪ್ರಯತ್ನಿಸುತ್ತಿರುವಾಗ ಜೋರಾಗಿ ಬೊಗಳಿ ಹೋಗುವಂತೆ ವಾರ್ನಿಂಗ್ ಕೊಟ್ಟಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಮೊಬೈಲ್ ಮುಟ್ಟಲು ಹೋಗಿ ನಾಯಿ ಕೈಯಲ್ಲಿ ಕಚ್ಚಿಕೊಳ್ಳುತ್ತೀರಾ ಎಂದು ಜೋಕೆ ಹೇಳಿದ್ದಾರೆ. ಅಧಿಕಾರಿಗಳು, ಇದು ಸರಿಯಾದ ಮಾರ್ಗವಲ್ಲ ಎಂದು ಕಾಮೆಂಟ್ ಮಾಡಿದೆ. ಮತ್ತೊಬ್ಬರು, ಆಹಾರ ಹಾಕಿ ಅದರ ಗಮನ ಬೇರೆಡೆ ಹರಿಸಿ ಮೊಬೈಲ್ ತೆಗೆದುಕೊಂಡಿದ್ದಾರೆ ಎಂದು ಸಲಹೆ ನೀಡಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *