ಈ ರಾಶಿಯವರಿಗೆ ಎಪ್ರಿಲ್​​ ತಿಂಗಳು ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ

ಈ ರಾಶಿಯವರಿಗೆ ಎಪ್ರಿಲ್​​ ತಿಂಗಳು ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ


ಈ ರಾಶಿಯವರಿಗೆ ಏಪ್ರಿಲ್ ತಿಂಗಳಿನ ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ

2026 ರ ಏಪ್ರಿಲ್ ತಿಂಗಳಿನಲ್ಲಿ ಗ್ರಹಗತಿಗಳ ಬದಲಾವಣೆ ಮತ್ತು ಗೋಚಾರ ಫಲಗಳ ಆಧಾರದ ಮೇಲೆ ವೃಷಭ ರಾಶಿಯವರಿಗೆ ತಿಂಗಳಿನಲ್ಲಿ ಯೋಜನೆಗೆ ಅನುಕೂಲಕರವಾಗಿದೆ. ಈ ರಾಶಿಗೆ ಕೃತ್ತಿಕಾದ ಮೂರು ಪಾದ, ರೋಹಿಣಿಯ ನಾಲ್ಕು ಪಾದ ಹಾಗೂ ಮೃಗಶಿರಾದ ಎರಡು ಪಾದಗಳು ಬರಲಿವೆ. ರೋಹಿಣೀ ನಕ್ಷತ್ರಕ್ಕೆ ವೃಷಭ ರಾಶಿಗೆ ಹೇಳಿದ ಪೂರ್ಣ ಫಲ ಸಿಗಲಿದೆ.

ಉದ್ಯೋಗ ಮತ್ತು ವೃತ್ತಿ ಜೀವನ

ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರ ಬೆಳವಣಿಗೆಗಳಾಗಬಹುದು. ಹತ್ತನೇ ಮನೆಯ ಮೇಲೆ ಗ್ರಹಗಳ ದೃಷ್ಟಿ ಕೆಲಸದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಿನಾಕಾರಣ ವಾದ ಮಾಡಬೇಡಿ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ಸಿಗಬಹುದು.

ವಿದ್ಯಾಭ್ಯಾಸ

ವಿದ್ಯಾಾರ್ಥಿಗಳಿಗೆ ಇದು ಅತ್ಯುತ್ತಮ ಸಮಯ. ಪಂಚಮ ಸ್ಥಾನದ ಮೇಲೆ ಗುರುವಿನ ಶುಭ ದೃಷ್ಟಿ ಏಕಾಗ್ರತೆ ಹೆಚ್ಚುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಈ ತಿಂಗಳ ವಿಷಯಗಳನ್ನು ಆಳವಾಗಿ ನಿರ್ಧರಿಸಲು ಸಹಕಾರಿಯಾಗಿದೆ. ಸಂಸ್ಕೃತ ಅಥವಾ ಸಾಂಪ್ರದಾಯಿಕ ವಿಷಯಗಳನ್ನು ಕಲಿಯುವವರಿಗೆ ವಿಶೇಷ ಯಶಸ್ಸು ಸಿಗಲಿದೆ.

ಹಣಕಾಸು ಸ್ಥಿತಿ

ಹಣಕಾಸಿನ ವಿಚಾರದಲ್ಲಿ ಏರಿಳಿತಗಳಿವೆ. ಆದಾಯಕ್ಕಿಂತ ಹೆಚ್ಚು ಖರ್ಚು ಸಾಧ್ಯತೆ ಇದೆ. ಅಡಿಕೆ ಅಥವಾ ಇತರ ತೋಟಗಾರಿಕಾ ಬೆಳೆಗಳಿಂದ ನಿರೀಕ್ಷಿತ ಲಾಭ ಬರುವ ಸಾಧ್ಯತೆಯಿದೆ. ಹೂಡಿಕೆ ಮಾಡುವ ಮೊದಲು ನುರಿತವರ ಸಲಹೆ ಪಡೆಯುವುದು ಉತ್ತಮ.

ವಿವಾಹ ಮತ್ತು ಕೌಟುಂಬಿಕ ಜೀವನ

ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಅವು ಬೇಗನೆ ಬಗೆಹರಿಯುತ್ತವೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವಿದೇಶ ಪ್ರವಾಸ

ಈ ತಿಂಗಳು ವಿದೇಶ ಪ್ರವಾಸದ ಯೋಗವು ಸ್ವಲ್ಪ ದುರ್ಬಲವಾಗಿದೆ. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ವೀಸಾ ಅಥವಾ ಪಾಸ್‌ಪೋರ್ಟ್ ತಾಂತ್ರಿಕ ತೊಂದರೆಗಳು ಎದುರಾಗಬಹುದು. ಅನಿವಾರ್ಯವಲ್ಲದಿದ್ದರೆ ವಿದೇಶ ಪ್ರವಾಸವನ್ನು ಮುಂದೂಡುವುದು ಸೂಕ್ತ.

ಸಾಲ ಮತ್ತು ಆರೋಗ್ಯ

ಹೊಸದಾಗಿ ಸಾಲ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ಹಳೆಯ ಸಾಲಗಳನ್ನು ತೀರಿಸಲು ಈ ಸಮಯ ಪೂರಕವಾಗಿದೆ. ಕೆಲಸದ ಒತ್ತಡದಿಂದಾಗಿ ಮಾನಸಿಕ ಆಯಾಸವಾಗಬಹುದು. ಪಾದ ಅಥವಾ ಬೆನ್ನಿನ ನೋವಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಿನಲ್ಲಿ ಶುಭ ದಿನಾಂಕಗಳು – 4, 13, 22 ಮತ್ತು 30. ಅಶುಭ ದಿನಗಳಿವು 8, 9 ಮತ್ತು 18.
ದೋಷಕ್ಕೆ ಪರಿಹಾರವಾಗಿ ಪ್ರತಿದಿನ ಮಹಾಲಕ್ಷ್ಮಿ ಅಷ್ಟಕವನ್ನು ಅಥವಾ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.

– ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *