
ಮಂಗಳೂರು, (ಮಾರ್ಚ್ 26): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ, ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಇದರ ಮಧ್ಯೆ ಕತಾರ್ನಿಂದ ಎಲ್ಪಿಜಿ ಹೊತ್ತ ಹಡಗು ನವಮಂಗಳೂರು ಬಂದರಿಗೆ (ಹೊಸ ಮಂಗಳೂರು ಬಂದರು) ಆಗಮಿಸಿದೆ. 17 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ (LPG) ಇರುವ ಅಪೋಲೋ ಓಷನ್(ಅಪೊಲೊ ಓಷನ್) ಹೆಸರಿನ ಹಡಗು ಮಂಗಳೂರಿಗೆ ಆಗಮಿಸಿದೆ. ಇದರಿಂದ ಗ್ಯಾಸ್ ಸಿಲಿಂಡರ್ ಕೊರತೆ ನೀಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ