'ಕೆನ್ನೆಗೆ ಕೊಟ್ಟು ಬರೋದು ಬಿಟ್ಟು ನೀವೇನು ಮಾಡ್ತಿದ್ರಿ..' ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಕೇಸ್‌ನಲ್ಲಿ ನಟಿ ಮಮತಾ ಕುಲಕರ್ಣಿ ಗರಂ!

'ಕೆನ್ನೆಗೆ ಕೊಟ್ಟು ಬರೋದು ಬಿಟ್ಟು ನೀವೇನು ಮಾಡ್ತಿದ್ರಿ..' ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಕೇಸ್‌ನಲ್ಲಿ ನಟಿ ಮಮತಾ ಕುಲಕರ್ಣಿ ಗರಂ!

'ಕೆನ್ನೆಗೆ ಕೊಟ್ಟು ಬರೋದು ಬಿಟ್ಟು ನೀವೇನು ಮಾಡ್ತಿದ್ರಿ..' ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಕೇಸ್‌ನಲ್ಲಿ ನಟಿ ಮಮತಾ ಕುಲಕರ್ಣಿ ಗರಂ!

ಮಹಾರಾಷ್ಟ್ರದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣದ ಬಗ್ಗೆ ನಟಿ ಮಮತಾ ಕುಲಕರ್ಣಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಖರಾತ್ ಓರ್ವ ವಂಚಕನಾಗಿದ್ದು, ತನ್ನನ್ನು ಶಿವನ ಅವತಾರ ಎಂದು ಹೇಳಿಕೊಳ್ಳುವುದು ಅವನ ಭ್ರಮೆ ಎಂದಿದ್ದಾರೆ.

ಪ್ರಸ್ತುತ ಮಹಾರಾಷ್ಟ್ರದಲ್ಲಿ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣವು ಸದ್ದು ಮಾಡುತ್ತಿದೆ. ಪ್ರತಿದಿನ ಈ ಪ್ರಕರಣದಲ್ಲಿ ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ವಿಡಿಯೋಗಳು ಹೊರಬಂದಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿವೆ. ಹಲವು ರಾಜಕೀಯ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಈಗ ನಟಿ ಮಮತಾ ಕುಲಕರ್ಣಿ ಕೂಡ ಈ ನಕಲಿ ಬಾಬಾನ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ.

ಆ ನಕಲಿ ಬಾಬಾನ ಬಳಿ ಹೋಗುತ್ತಿದ್ದ ಮಹಿಳೆಯರನ್ನು ಮಮತಾ ಕುಲಕರ್ಣಿ ಪ್ರಶ್ನಿಸಿದ್ದು ಹೀಗೆ, "ಒಂದು ವೇಳೆ ಅವನು ತನ್ನ ಮಿತಿ ಮೀರುತ್ತಿದ್ದ ಎಂದರೆ, ನೀವು ಅವನಿಗೆ ಒದ್ದು ಬರಬೇಕಿತ್ತು ಅಥವಾ ಸರಿಯಾಗಿ ಏಟು ಕೊಟ್ಟು ಬರಬೇಕಿತ್ತು. ನಾನು ಕೈ ತೋರಿಸಲು (ಜೋತಿಷ್ಯ ಕೇಳಲು) ಬಂದಿದ್ದೆ, ನೀವು ನನ್ನೊಂದಿಗೆ ಏನು ಮಾಡುತ್ತಿದ್ದೀರಿ ಎಂದು ಕೇಳಬೇಕಿತ್ತು’ ಎಂದಿದ್ದಾರೆ.

ಅಶೋಕ್ ಖರಾತ್ ತನ್ನನ್ನು ತಾನು ಶಿವನ ಅವತಾರ ಎಂದು ಕರೆದುಕೊಳ್ಳುತ್ತಿದ್ದ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಮತಾ, "ಅದು ಅವನ ಭ್ರಮೆ. ಅವನಿಗೆ ಭ್ರಮೆಯಾಗಿದೆ. ಒಬ್ಬ ವ್ಯಕ್ತಿ ಸಂಪೂರ್ಣ ಜಾಗೃತಾವಸ್ಥೆಗೆ ಬಂದಾಗ, ತಾನು ದೇವರ ಅವತಾರ ಎಂದು ಎಂದಿಗೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಜಾಗೃತಗೊಳ್ಳುವುದು ಎಂಬುದು ಪರಬ್ರಹ್ಮ ಸಿದ್ಧ ಅವಸ್ಥೆಯಾಗಿದೆ. 50 ಮಹಿಳೆಯರನ್ನು ಇಟ್ಟುಕೊಳ್ಳುವವನು ಆ ಅವಸ್ಥೆಗೆ ತಲುಪಲು ಸಾಧ್ಯವೇ ಇಲ್ಲ. ಅವನು ಆ ನೆಪದಲ್ಲಿ ಮುಗ್ಧ ಮಹಿಳೆಯರನ್ನು ವಂಚಿಸುತ್ತಿದ್ದಾನೆ. ಇಂತಹ ಮುಗ್ಧ ಮಹಿಳೆಯರ ಪತಿಯಂದಿರು ತಮ್ಮ ಹೆಂಡತಿಯರನ್ನು ಸಂಭಾಳಿಸಬೇಕು ಎಂದು ನಾನು ಹೇಳುತ್ತೇನೆ. ಇವರೆಲ್ಲ ನಾಲಾಯಕ್ ಜನರು’ ಎಂದಿದ್ದಾರೆ.

"ಇದರಲ್ಲಿ ಮಹಿಳೆಯರ ಪಾತ್ರವೂ ಇದೆಯೇ ಎಂದು ಅವರಿಗೇ ಕೇಳಬೇಕು. ನಾನಂತೂ ಅವರನ್ನು ದೋಷಿ ಎನ್ನುವುದಿಲ್ಲ. ಒಂದು ವೇಳೆ ಅವರು ನಿರ್ದೋಷಿಗಳಾಗಿದ್ದರೆ ಅವರ ಬಗ್ಗೆ ಕ್ಷಮೆ ಇರಲಿ. ಆದರೆ ನನಗೆ ತಿಳಿಯದ ವಿಚಾರವೆಂದರೆ, ನೀವು ಜ್ಯೋತಿಷಿಯ ಬಳಿ ಅಥವಾ ಸಾಧುವಿನ ಬಳಿ ಹೋಗೋದೇಕೆ? ನಿಮಗೆ ನಿಮ್ಮ ಮಿತಿಗಳು ತಿಳಿದಿಲ್ಲವೇ? ಅವನು ಮಿತಿ ಮೀರುತ್ತಿದ್ದಾನೆ ಎಂದರೆ ನೀವು ಅಲ್ಲೇ ಅವನಿಗೆ ಒದ್ದು ಬರಬೇಕಿತ್ತು" ಎಂದು ಮಮತಾ ಕುಲಕರ್ಣಿ ಕಿಡಿಕಾರಿದ್ದಾರೆ.

ಕೊನೆಯದಾಗಿ ಮಾತನಾಡಿದ ಅವರು, "ನಾನು ಬಂದಿದ್ದು ಜ್ಯೋತಿಷ್ಯ ಕೇಳಲು, ನೀವೇನು ಮಾಡುತ್ತಿದ್ದೀರಿ ಎಂದು ಕೇಳಬೇಕಿತ್ತು. ನಾವು ಮರಾಠಿ ಜನರು, ಇಂತಹವನಿಗೆ ಒಂದು ಕಪಾಳಮೋಕ್ಷ ಮಾಡಿ ಅಲ್ಲಿಂದ ಹೊರಬರಬೇಕು. ನೀನು ಮಹಾದೇವನಲ್ಲ, ನಾಲಾಯಕ್, ಹರಾಮ್‌ಖೋರ್ ಎಂದು ಅಲ್ಲೇ ಅವನಿಗೆ ಬೈದು ಬರಬೇಕು" ಎಂದು ಮಮತಾ ಕುಲಕರ್ಣಿ ಖಾರವಾಗಿ ನುಡಿದಿದ್ದಾರೆ.

Source link

Leave a Reply

Your email address will not be published. Required fields are marked *