ಪೊಲೀಸರ ಕರೆಸು ನನ್ನ ಏನೂ ಮಾಡಕ್ಕಾಗಲ್ಲ : ಜಸ್ಟ್ ಟಚ್ ಆಗಿದ್ದಕ್ಕೆ ರಾಯಲ್ ಎನ್‌ಫೀಲ್ಡ್‌ ಬುಲೆಟ್‌ಗೆ ಮಹಿಳೆಯಿಂದ ತೀವ್ರ ಹಾನಿ | Jaipur Woman Damaged Royal Enfield Bullet After Little Accident

ಪೊಲೀಸರ ಕರೆಸು ನನ್ನ ಏನೂ ಮಾಡಕ್ಕಾಗಲ್ಲ : ಜಸ್ಟ್ ಟಚ್ ಆಗಿದ್ದಕ್ಕೆ ರಾಯಲ್ ಎನ್‌ಫೀಲ್ಡ್‌ ಬುಲೆಟ್‌ಗೆ ಮಹಿಳೆಯಿಂದ ತೀವ್ರ ಹಾನಿ | Jaipur Woman Damaged Royal Enfield Bullet After Little Accident



ಪೊಲೀಸರ ಕರೆಸು ನನ್ನ ಏನೂ ಮಾಡಕ್ಕಾಗಲ್ಲ : ಜಸ್ಟ್ ಟಚ್ ಆಗಿದ್ದಕ್ಕೆ ರಾಯಲ್ ಎನ್‌ಫೀಲ್ಡ್‌ ಬುಲೆಟ್‌ಗೆ ಮಹಿಳೆಯಿಂದ ತೀವ್ರ ಹಾನಿ | Jaipur Woman Damaged Royal Enfield Bullet After Little Accident

ಟ್ರಾಫಿಕ್ ವೇಳೆ ತನ್ನ ಸ್ಕೂಟರ್‌ಗೆ ರಾಯಲ್ ಎನ್‌ಫೀಲ್ಡ್ ಬೈಕ್ ಸಣ್ಣದಾಗಿ ತಾಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯೊಬ್ಬಳು, ಹೆಲ್ಮೆಟ್ ಹಾಗೂ ಇಟ್ಟಿಗೆಯಿಂದ ಬೈಕನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾಳೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಮಹಿಳೆಯ ಸಿಟ್ಟಿನಿಂದ ರಾಯಲ್ ಎನ್ಫೀಲ್ಡ್‌ಗಾಯ್ತು ಲಕ್ಷಾಂತರ ರೂ ಹಾನಿ

ಜಸ್ಟ್ ಟಚ್ ಆಗಿದ್ದಕ್ಕೆ ಮಹಿಳೆಯೊಬ್ಬಳು ಸಿಟ್ಟಿಗೆದ್ದು ಯುವಕನೋರ್ವನ ರಾಯಲ್ ಎನ್‌ಫೀಲ್ಡ್ ಗಾಡಿಯನ್ನೆ ಹೆಲ್ಮೆಟ್ ಹಾಗೂ ಇಟ್ಟಿಗೆಯಿಂದ ಬಡಿದು ಬೈಕ್‌ಗೆ ಲಕ್ಷಾಂತರ ರೂಪಾಯಿ ಹಾನಿ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಟ್ರಾಫಿಕ್‌ನಲ್ಲಿ ಸಣ್ಣದಾಗಿ ವಾಹನಕ್ಕೆ ಟಚ್ ಅಗಿ ಸಮಸ್ಯೆ ಆಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆ, ಪೊಲೀಸರನ್ನು ಕರೆಯುತ್ತೇವೆ ಎಂದರೂ ಕೇಳದೇ ಬುಲೆಟ್‌ಗೆ ತೀವ್ರ ಹಾನಿ ಮಾಡಿದ್ದಾಳೆ. ಈ ಘಟನೆ ಸಂಪೂರ್ಣವಾಗಿ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲ್ಲು ಹಾಗೂ ಹೆಲ್ಮೆಟ್‌ನಿಂದ ಹೊಡೆದ ಮಹಿಳೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ದೃಶ್ಯಗಳ ಪ್ರಕಾರ, ಭಾರೀ ಸಂಚಾರ ದಟ್ಟಣೆಯ ನಡುವೆ ರಾಯಲ್ ಎನ್‌ಫೀಲ್ಡ್ ಬೈಕ್ ಮಹಿಳೆಯೊಬ್ಬರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ನಡೆದ ಈ ಸಣ್ಣ ಅಪಘಾತವು ಬೇಗನೆ ತೀವ್ರ ಘರ್ಷಣೆಗೆ ಕಾರಣವಾಯಿತು. ಮಹಿಳೆಯ ಉಗ್ರ ರೂಪವನ್ನು ಅಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಅದರಲ್ಲಿ ನೀಲಿ ಬಣ್ಣದ ಟೀಶರ್ಟ್ ಧರಿಸಿರುವ ಮಹಿಳೆ ಈ ರಾಯಲ್ ಎನ್‌ಫೀಲ್ಡ್ ಬುಲೆಟ್ ಗಾಡಿಗೆ ತನ್ನ ಹೆಲ್ಮೆಟ್ ಹಾಗೂ ಇಟ್ಟಿಗೆಯಿಂದ ಒಡೆಯುವುದನ್ನು ಕಾಣಬಹುದು. ಈ ಬುಲೆಟ್ ಗಾಡಿಯ ಹೆಡ್‌ಲೈಟ್ ಸ್ಪೀಡೋಮೀಟರ್ ನಂಬರ್ ಪ್ಲೇಟ್ ಹೀಗೆ ಪೆಟ್ರೋಲ್ ಟ್ಯಾಂಕ್ ಹೀಗೆ ಯಾವುದನ್ನು ಒಡೆಯಲು ಸಾಧ್ಯವೋ ಅದೆಲ್ಲವನ್ನು ಒಡೆದು ಹಾಕಿದ್ದಾಳೆ.

ವೀಡಿಯೋಗೆ ತೀವ್ರ ಆಕ್ರೋಶ:

ಬೈಕ್ ಸವಾರ ಸಂದರ್ಭವನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ಮಹಿಳೆ ತನ್ನ ಆಕ್ರೋಶವನ್ನು ಮುಂದುವರಿಸಿದಳು. ಪೊಲೀಸರಿಗೆ ಕರೆ ಮಾಡುವುದಾಗಿ ಬೈಕ್ ಸವಾರ ಎಚ್ಚರಿಸಿದಾಗ, ಅವಳು ತುಮ್ ಕುಚ್ ಭಿ ನಹಿ ಕರ್ ಸಕ್ತೇ ಮೇರಾ ಮತ್ತು ಬುಲಾಲೆ ಪೊಲೀಸ್ ವಾಲೋನ್ ಕೋ, ಕೊಯಿ ಫರಕ್ ನಹಿ ಪಡ್ತಾ ಎಂದು ಪ್ರತಿಕ್ರಿಯಿಸಿದ್ದಾಳೆ. ಅಂದರೆ ನಿಂಗೆ ನನ್ನನ್ನು ಏನು ಮಾಡಲಾಗದು ಪೊಲೀಸರನ್ನು ಕರೆಯಿಸು ಅದರಿಂದ ನಂಗೇನು ವ್ಯತ್ಯಾಸ ಆಗಲ್ಲ ಎಂದು ಮಹಿಳೆ ಹೇಳಿದ್ದಾಳೆ.

ಇದನ್ನೂ ಓದಿ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ನೇತ್ರದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮರೆದ ಪೋಷಕರು

ಅದೇ ವೀಡಿಯೊದಲ್ಲಿ, ಆ ವ್ಯಕ್ತಿ ತನ್ನ ಕ್ಯಾಮೆರಾವನ್ನು ಹತ್ತಿರದ ಸಂಚಾರ ಪೊಲೀಸ್ ಸಿಬ್ಬಂದಿಯತ್ತ ತಿರುಗಿಸಿ ಅವರಿಗೆ ಘಟನೆಯ ಬಗ್ಗೆ ತಿಳಿಸುತ್ತಿರುವುದನ್ನು ಕಾಣಬಹುದು. ಆದರೆ ಪೊಲೀಸ್ ಅಧಿಕಾರಿಗಳು ಮಾತ್ರ ನಿಷ್ಕ್ರಿಯರಾಗಿರುವಂತೆ ಕಂಡು ಬಂದಿದೆ. ಈ ವೀಡಿಯೋ ವೈರಲ್ ಆದ ಬಳಿಕ ಪೊಲೀಸರು ಸಡನ್ ಆಗಿ ಸ್ಪಂದಿಸದೇ ಇರೋದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ವೀಡಿಯೋ ವೈರಲ್ ಆದ ಬಳಿಕ ಜೈಪುರ ಪೊಲೀಸರು ಪ್ರತಿಕ್ರಿಯಿಸಿದ್ದು, ಯುವತಿ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಯಾವುದಾದರು ದೂರು ದಾಖಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಲ್ಲ.

ಇದನ್ನೂ ಓದಿ: ಬೆಳಗಾವಿ: ಬಸ್‌ನಲ್ಲಿ ಸೀಟಿಗಾಗಿ ಓಟ, ಚಕ್ರದಡಿ ಸಿಲುಕಿದ ಕಂದಮ್ಮ: ಅಮ್ಮನ ಕೈನಿಂದ ಕೆಳಗೆ ಬಿದ್ದು ದುರಂತ

ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮಹಿಳೆಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ, ಈ ಘಟನೆಯನ್ನು ಅನಿಯಂತ್ರಿತ ರಸ್ತೆ ಗಲಾಟೆಗೆ ಉದಾಹರಣೆ ಎಂದು ಕರೆದಿದ್ದಾರೆ. ಆ ಹುಡುಗನ ರಾಯಲ್ ಎನ್‌ಫೀಲ್ಡ್ ಬೈಕ್ ಆ ಮಹಿಳೆಯ ಸ್ಕೂಟಿಗೆ ಸ್ವಲ್ಪ ಡಿಕ್ಕಿ ಹೊಡೆದಿದೆ, ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಆ ಮಹಿಳೆ ಅವನ ಬೈಕನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹುಡುಗರಿಗೆ ಇಂಥಾ ಸ್ಥಿತಿಯಲ್ಲಿ ಏನು ಮಾಡಲಾಗುವುದಿಲ್ಲ, ಅವಳಂತೆಯೇ ಅವನೂ ಮಾಡಿದ್ದರೆ ಜೈಲಿಗೆ ಹೋಗುತ್ತಿದ್ದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *