ಬೆಂಡೆಕಾಯಿ ಖಾದ್ಯ ಮಾಡ್ವಾಗ ಲೋಳೆ ಹೊರ ಬರ್ತಿದ್ಯಾ? ಈ ಸೀಕ್ರೆಟ್ ಟಿಪ್ಸ್ ಟ್ರೈ ಮಾಡಿ!

ಬೆಂಡೆಕಾಯಿ ಖಾದ್ಯ ಮಾಡ್ವಾಗ ಲೋಳೆ ಹೊರ ಬರ್ತಿದ್ಯಾ? ಈ ಸೀಕ್ರೆಟ್ ಟಿಪ್ಸ್ ಟ್ರೈ ಮಾಡಿ!

ಬೆಂಡೆಕಾಯಿ ಖಾದ್ಯ ಮಾಡ್ವಾಗ ಲೋಳೆ ಹೊರ ಬರ್ತಿದ್ಯಾ? ಈ ಸೀಕ್ರೆಟ್ ಟಿಪ್ಸ್ ಟ್ರೈ ಮಾಡಿ!

Kitchen hacks for okra: ಬೆಂಡೆಕಾಯಿ ಅಂದಾಕ್ಷಣ ನೆನಪಾಗುವುದೇ ಅದರ ಜಿಗುಟು! ಎಷ್ಟೇ ಚೆನ್ನಾಗಿ ಅಡುಗೆ ಮಾಡಿದ್ರೂ ಕೆಲವೊಮ್ಮೆ ಪಲ್ಯ ಮುದ್ದೆಯಾಗಿ ರುಚಿ ಕೆಡುತ್ತದೆ. ಆದರೆ ಹೋಟೆಲ್‌ಗಳಲ್ಲಿ  ಬೆಂಡೆಕಾಯಿ ಫ್ರೈ ಹೇಗೆ ಅಷ್ಟು ಗರಿಗರಿಯಾಗಿ, ಬಿಡಿಬಿಡಿಯಾಗಿ ಇರುತ್ತದೆಯೆಂದು ಎಂದಾದರೂ ಯೋಚಿಸಿದ್ದೀರಾ?.

ಬೆಂಡೆಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ, ಅದರ ಪಲ್ಯ ಅಥವಾ ಸಾಂಬಾರ್ ಎಂದರೆ ಅಷ್ಟೇ ಇಷ್ಟಪಡುವವರಿದ್ದಾರೆ. ಆದರೆ, ಬೆಂಡೆಕಾಯಿ ಅಡುಗೆ ಎಂದ ತಕ್ಷಣ ಅನೇಕರಿಗೆ ನೆನಪಾಗುವುದು ಅದರ ಜಿಗುಟು (Sliminess). ಬೆಂಡೆಕಾಯಿ ಕತ್ತರಿಸುವಾಗ ಮತ್ತು ಬೇಯಿಸುವಾಗ ಬರುವ ಈ ಜಿಗುಟು ಅಡುಗೆಯ ರುಚಿಯನ್ನು ಕೆಡಿಸುವುದಲ್ಲದೆ, ಒಂದಕ್ಕೊಂದು ಅಂಟಿಕೊಂಡು ಮುದ್ದೆಯಾಗುವಂತೆ ಮಾಡುತ್ತದೆ. ಆದರೆ ಇನ್ಮುಂದೆ ನಿಮಗೆ ಆ ಚಿಂತೆ ಬೇಡ! ನಿಮ್ಮ ಬೆಂಡೆಕಾಯಿ ಪಲ್ಯ ಹೋಟೆಲ್ ಶೈಲಿಯಲ್ಲಿ ಬಿಡಿಬಿಡಿಯಾಗಿ, ಗರಿಗರಿಯಾಗಿ ಬರಲು ಇಲ್ಲಿವೆ ಕೆಲವು ಅದ್ಭುತ ಸಲಹೆಗಳು.

ಬೆಂಡೆಕಾಯಿಗಳನ್ನು ತೊಳೆದ ತಕ್ಷಣ ಕತ್ತರಿಸಬೇಡಿ. ತೊಳೆದ ನಂತರ ಒಂದು ಒಣ ಬಟ್ಟೆಯಿಂದ ಒರೆಸಿ, ಸ್ವಲ್ಪ ಹೊತ್ತು ಫ್ಯಾನ್ ಕೆಳಗೆ ಒಣಗಲು ಬಿಡಿ. ನೀರಿನ ಅಂಶವಿದ್ದರೆ ಜಿಗುಟು ಹೆಚ್ಚಾಗುತ್ತದೆ. ಅಲ್ಲದೆ, ಬೆಂಡೆಕಾಯಿ ತುಂಡುಗಳು ಎಷ್ಟು ಚಿಕ್ಕದಾಗಿರುತ್ತವೆಯೋ ಅಷ್ಟು ಜಿಗುಟು ಹೊರಬರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ತುಂಡುಗಳನ್ನು ಸ್ವಲ್ಪ ದೊಡ್ಡ ಗಾತ್ರದಲ್ಲಿ ಕತ್ತರಿಸಿ.

ಅಡುಗೆ ಮಾಡುವಾಗ ಸ್ವಲ್ಪ ನಿಂಬೆ ರಸ, ಆಮ್‌ಚೂರ್ ಪೌಡರ್ ಅಥವಾ ಮೊಸರನ್ನು ಸೇರಿಸಿ. ಹೌದು. ಪಲ್ಯ ಬೇಯುತ್ತಿರುವಾಗ ಒಂದು ಟೀಚಮಚ ನಿಂಬೆ ರಸ ಅಥವಾ ಒಂದು ಚಮಚ ಮೊಸರು ಹಾಕುವುದರಿಂದ, ಅದರಲ್ಲಿರುವ ಆಸಿಡ್ ಗುಣವು ಬೆಂಡೆಕಾಯಿಯ ಜಿಗುಟನ್ನು ತಕ್ಷಣವೇ ಹೋಗಲಾಡಿಸುತ್ತದೆ.

ಅನೇಕರು ಅಡುಗೆ ಶುರು ಮಾಡಿದ ತಕ್ಷಣ ಉಪ್ಪು ಹಾಕುತ್ತಾರೆ. ಆದರೆ ಬೆಂಡೆಕಾಯಿ ವಿಷಯದಲ್ಲಿ ಉಪ್ಪು ಮೊದಲೇ ಹಾಕಿದರೆ ಅದು ತೇವಾಂಶವನ್ನು ಬಿಡುಗಡೆ ಮಾಡಿ ಜಿಗುಟು ಹೆಚ್ಚಾಗುವಂತೆ ಮಾಡುತ್ತದೆ. ಆದ್ದರಿಂದ ಪಲ್ಯ ಸುಮಾರು 90% ಬೆಂದ ನಂತರವಷ್ಟೇ ಉಪ್ಪು ಸೇರಿಸಿ. ಹಾಗೆಯೇ ಬಾಂಡ್ಲಿ ತುಂಬಾ ತುಂಡುಗಳನ್ನು ತುಂಬಬೇಡಿ (Overcrowding), ಗಾಳಿ ಆಡುವಷ್ಟು ಜಾಗವಿದ್ದರೆ ಪಲ್ಯ ಚೆನ್ನಾಗಿ ಬೇಯುತ್ತದೆ.

ಬೆಂಡೆಕಾಯಿ ಪಲ್ಯ ಮಾಡುವಾಗ ಬಾಂಡ್ಲಿಗೆ ಮುಚ್ಚಳ ಹಾಕಬಾರದು. ಮುಚ್ಚಳ ಹಾಕಿದರೆ ಹಬೆಯು ನೀರಾಗಿ ಪಲ್ಯಕ್ಕೆ ಬೀಳುತ್ತದೆ, ಇದರಿಂದ ತುಂಡುಗಳು ಮೆತ್ತಗಾಗಿ ಜಿಗುಟು ಉಂಟಾಗುತ್ತದೆ. ಆದ್ದರಿಂದ ಮುಚ್ಚಳ ತೆಗೆದೇ ಬೇಯಿಸಿ. ಬೆಂಡೆಕಾಯಿ ಹಾಕಿದ ನಂತರ ಪದೇ ಪದೇ ಸೌಟಿನಿಂದ ತಿರುಗಿಸಬೇಡಿ, ಹೆಚ್ಚು ತಿರುಗಿಸಿದರೆ ತುಂಡುಗಳು ಒಡೆದು ಬೀಜ ಮತ್ತು ಜಿಗುಟು ಹೊರಬರುತ್ತದೆ.

ನಿಮಗೆ ಹುಳಿ ಇಷ್ಟವಾಗುವುದಾದರೆ, ಅಡುಗೆಯ ಕೊನೆಯಲ್ಲಿ ಸ್ವಲ್ಪ ಆಮ್‌ಚೂರ್ (ಮಾವಿನಕಾಯಿ ಪುಡಿ) ಅಥವಾ ಸ್ವಲ್ಪ ವಿನೆಗರ್ ಬೆರೆಸಿದರೆ ಜಿಗುಟು ಮಾಯವಾಗುತ್ತದೆ. ಮಸಾಲೆಗಳನ್ನು ಸೇರಿಸುವ ಮೊದಲೇ ಬೆಂಡೆಕಾಯಿ ತುಂಡುಗಳನ್ನು ಪ್ರತ್ಯೇಕವಾಗಿ ಸ್ವಲ್ಪ ಎಣ್ಣೆಯಲ್ಲಿ 5 ನಿಮಿಷ ಹುರಿದು ಪಕ್ಕಕ್ಕೆ ಇಟ್ಟುಕೊಳ್ಳುವುದರಿಂದಲೂ ಜಿಗುಟು ಕಡಿಮೆಯಾಗುತ್ತದೆ.

ಬೆಂಡೆಕಾಯಿ ಕತ್ತರಿಸುವಾಗ ನಿಮ್ಮ ಕತ್ತಿಗೆ (Knife) ಸ್ವಲ್ಪ ನಿಂಬೆ ರಸ ಸವರಿಕೊಳ್ಳಿ. ಇದರಿಂದ ಕತ್ತರಿಸುವಾಗ ಕತ್ತಿಗೆ ಜಿಗುಟು ಅಂಟಿಕೊಳ್ಳುವುದಿಲ್ಲ ಮತ್ತು ಕೆಲಸ ‘ಸರಸರನೆ’ ಸಾಗುತ್ತದೆ!

Source link

Leave a Reply

Your email address will not be published. Required fields are marked *