’ಅಮೃತಧಾರೆ’ ಸೀರಿಯಲ್ ಖ್ಯಾತಿಯ ರಾಣವ್ ಗೌಡ ಮತ್ತು ‘ಭಾರ್ಗವಿ ಎಲ್ಎಲ್ಬಿ’ ನಟಿ ರಾಧಾ ಭಗವತಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಸೀರಿಯಲ್ ಸೆಟ್ನಲ್ಲಿ ಪ್ರೀತಿಸಿ, ಕುಟುಂಬದ ಒಪ್ಪಿಗೆಯೊಂದಿಗೆ ಒಂದಾಗುತ್ತಿರುವ ಈ ಜೋಡಿಯ ವಿಶೇಷವೆಂದರೆ, ಪತಿ ರಾಣವ್ಗಾಗಿ ರಾಧಾ ಅವರು ನಾನ್ವೆಜ್ ಅಡುಗೆ ಕಲಿಯುತ್ತಿದ್ದಾರೆ

ಭಾರ್ಗವಿ ಎಲ್ಎಲ್ಬಿ ನಟಿ ರಾಧಾ ಭಗವತಿ ಅವರು ಅಮೃತಧಾರೆ ಸೀರಿಯಲ್ ಜೈದೇವ್ ರಾಣವ್ ಗೌಡ ಅವರ ಜೊತೆ ಮದುವೆಯಾಗ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಶೀಘ್ರದಲ್ಲಿಯೇ ಇವರ ಮದುವೆ ನೆರವೇರಲಿದ್ದು, ಡೇಟ್ ಇನ್ನೂ ಫಿಕ್ಸ್ ಆಗಬೇಕಿದೆ.

ಅಮೃತಧಾರೆ ಸೀರಿಯಲ್ನಲ್ಲಿ ಮಲ್ಲಿ ಪಾತ್ರ ಮಾಡುತ್ತಿದ್ದ ವೇಳೆ ವಿಲನ್ ಜೈದೇವ್ ಜೊತೆ ಪ್ರೇಮಾಂಕುರವಾಗಿತ್ತು ಮಲ್ಲಿಗೆ. ಸೀರಿಯಲ್ನಲ್ಲಿ ಅಲ್ಲದೇ ರಿಯಲ್ ಆಗಿಯೂ ಲವ್ ಮಾಡೋಕೆ ಶುರು ಮಾಡಿದ್ರು. ಅದೇ ರೀತಿ, ರಾಧಾ ಅವರ ಒಳ್ಳೆಯತನ ರಾಣವ್ಗೂ ಇಷ್ಟವಾಗಿತ್ತು.

ಪರಸ್ಪರ ಬಾಯಿ ಬಿಟ್ಟಿರಲಿಲ್ಲ ಇಬ್ಬರೂ. ಆದರೆ ರಾಣವ್ ಪ್ರೀತಿಯ ವಿಷಯವನ್ನು ಅವರ ಅಮ್ಮನಬಳಿ ಹೇಳಿ, ಅವರ ಅಮ್ಮನೇ ರಾಧಾ ಅವರ ಜಾತಕ ನೋಡಿ ಮ್ಯಾಚ್ ಆದ ಬಳಿಕ ನೇರವಾಗಿ ಕಾಲ್ ಮಾಡಿ ಮದುವೆಯಾಗ್ತಿಯಾ ಎಂದು ಕೇಳಿರುವುದಾಗಿ ಸಂದರ್ಶನದಲ್ಲಿ ರಾಧಾ ಹೇಳಿಕೊಂಡಿದ್ದರು.

ಇದೀಗ ಭಾವಿ ಪತಿ ರಾಣವ್ಗಾಗಿ ತಾವು ಚಿಕನ್ ರೆಸಿಪಿ ಕಲಿತಿರುವುದಾಗಿ ರಾಧಾ ಹೇಳಿದ್ದಾರೆ. ನಾನು ವೆಜ್ಜು. ಆದರೆ, ನಾನ್ವೆಜ್ ತಿಂತೀನಿ. ಆದರೆ ಮಾಡಲು ಬರ್ತಿರಲಿಲ್ಲ. ರಾಣವ್ ಅವರಿಗೆ ನಾನ್ವೆಜ್ ಇಷ್ಟ ಎಂದು ಎರಡು ಅಡುಗೆ ಕಲಿತಿದ್ದೇನೆ ಎಂದಿದ್ದಾರೆ.

ಅವರಿಗೆ ನಾನು ಏನು ಮಾಡಿದ್ರೂ ಇಷ್ಟವಾಗುತ್ತೆ ಎನ್ನುವುದು ಗೊತ್ತಿದೆ. ಸದ್ಯ ಎರಡೇ ನಾನ್ವೆಜ್ ರೆಸಿಪಿ ಕಲಿತಿದ್ದೇನೆ. ವೆಜ್ ಅಡುಗೆ ಎಲ್ಲಾ ಚೆನ್ನಾಗಿ ಮಾಡ್ತೇನೆ. ನಾನ್ವೆಜ್ ಇನ್ನೂ ಹೆಚ್ಚಿನದ್ದು ಕಲಿಯುತ್ತೇನೆ ಎಂದಿದ್ದಾರೆ.

Source link
Amruthadhaare ಜೈದೇವ್ಗಾಗಿ ನಾನ್ವೆಜ್ ಮಾಡೋದ ಕಲಿತೆ: ನಾಚುತ್ತಲೇ ನಟಿ ರಾಧಾ ಭಗವತಿ ಹೇಳಿದ್ದೇನು?