
ಚಿಕ್ಕಬಳ್ಳಾಪುರ, ಮಾರ್ಚ್ 26: ಗಂಡು ದೆವ್ವವೊಂದು ಕೊಡಬಾರದ ಕಾಟ ಕೊಡುತ್ತಿದೆ ಅಂತ ಭಯಗೊಂಡಿದ್ದ ಮಹಿಳೆ ಕೊನೆಗೂ ವಿಚಿತ್ರವಾಗಿ ನಟಿಸಿರುವಂತಹ (ಸಾವು) ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜುಳಾ(36) ಮೃತ ಮಹಿಳೆ. ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಮಂಜುಳಾರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದ ರಮೇಶ್ ಅವರ ಮದುವೆಯಾಗಿ 16 ವರ್ಷವಾಗಿದೆ. ದಂಪತಿ ಮಧ್ಯೆ ಯಾವುದೇ ಸಮಸ್ಯೆ ಇಲ್ಲವಂತೆ. ಆದರೆ ಇತ್ತೀಚೆಗೆ ತವರು ಮನೆಗೆ ಹೋಗಿದ್ದು, ಮಾವನ ತಿಥಿ ಕಾರ್ಯದಲ್ಲಿ ಭಾಗವಹಿಸಿದ್ದರಂತೆ.
ಇದನ್ನೂ ಓದಿ: ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು
ವಾಪಸ್ ಗಂಡನ ಮನೆಗೆ ಬರುತ್ತಿದ್ದಂತೆ ವಿಚಿತ್ರವಾಗಿ ವರ್ತಿಸುವುದು, ಕುಂತ್ರು ನಿಂತ್ರು ಯಾರೋ ಎದುರುಗಡೆ ಬಂದು ಕಾಟ ಕೊಡುತ್ತಿರುವ ಅನುಭವ ಆಗುತ್ತಿದೆ. ಹೀಗಾಗಿ ಪತಿ ರಮೇಶ್ ಕೆಲಸ ಬಿಟ್ಟು ಒಂದು ವಾರದಿಂದ ದೇವರು ದಿಂಡಿರು, ಮಂತ್ರವಾದಿ ಎಂದು ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಮಂತ್ರವಾದಿ ಬಳಿ ಹೋಗಿ ತಾಯತ ಕಟ್ಟಿಸಿದ್ದರು. ಆದರೂ ವಾಸಿಯಾಗಿರಲಿಲ್ಲ. ಬಳಿಕ ವೈದ್ಯರ ಬಳಿ ತೋರಿಸಿದರೂ ಏನೂ ಪ್ರಯೋಜನವಾಗಿಲ್ಲ. ವಿಚಿತ್ರವಾಗಿ ವರ್ತಿಸಿ ಕೊನೆಗೆ ಪ್ರಾಣವನ್ನೇ ಬಿಟ್ಟಿದ್ದಾರೆ.
ಮೃತಳ ತಾಯಿ ಆಕ್ರೋಶ
ಯಾರೋ ದೊಡ್ಡಬಳ್ಳಾಪುರದ ಸುನಿಲ್ ಎನ್ನುವವರ ದೃಶ್ಯ ಕಣ್ಮುಂದೆ ಬರುತ್ತೆ. ತಾಳುವುದಕ್ಕೆ ಆಗುತ್ತಿಲ್ಲ ಅಂತ ಚಡಪಡಿಸುತ್ತಿದ್ದಾರೆಂದು ರಮೇಶ್ ಹೇಳಿದ್ದಾರೆ. ಇತ್ತ ಮಂಜಳಾ ತವರು ಮನೆಯವರು ಏಕೆ ನಮಗೆ ಮೊದಲೇ ಹೇಳಲಿಲ್ಲ. ಸತ್ತ ಮೇಲೆ ಹೇಳಿದ್ದಾರೆ ಅಂತ ಮೃತ ತಾಯಿ ಗಂಗಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಾಟ-ಮಂತ್ರ ಮಾಡುತ್ತಿರುವ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು
ಮಂಜುಳಾರಿಗೆ ದೆವ್ವ, ಭೂತದ ಕಾಟನೋ ಇಲ್ಲಾ ಯಾರದ್ದಾದರೂ ಭಯನೋ ಗೊತ್ತಿಲ್ಲ. ಮನೋರೋಗ ಚಿಕಿತ್ಸೆ ಚಿಕಿತ್ಸೆ ಕೊಡಿಸಿದ್ದರೆ ಮಂಜುಳಾ ಬದುಕುತ್ತಿದ್ದರೋ ಏನೋ, ಮಂತ್ರವಾದಿಗಳ ಮಾತು ಕೇಳಿ, ದೆವ್ವದ ಭೀತಿಯಿಂದ ಆಚೆ ಬರದೆ ಇರುವುದು ಮಾತ್ರ ವಿಪರ್ಯಾಸ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.