
ಪ್ರಥಮ್ ಅವರು ನಟಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ (ದೇವ್ವನ ಜೊತೆ ಮೊದಲ ರಾತ್ರಿ) ಸಿನಿಮಾದಿಂದ ಬಿಡುಗಡೆ ಆಗಲಿದೆ. ಈ ಸಿನಿಮಾದ ಶೀರ್ಷಿಕೆಗೆ ‘ಸುಬ್ಬ ಸುಬ್ಬಿ ಹಾರರ್ ಸ್ಟೋರಿ’ ಎಂಬ ಟ್ಯಾಗ್ ಲೈನ್ ಇದೆ. ಈ ಕಥೆ ಯಾರಿಗಾದರೂ ಲಿಂಕ್ ಆಗುತ್ತಾ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ಪ್ರಥಮ್ ಅವರು ಉತ್ತರ ನೀಡಿದ್ದಾರೆ. ‘ಮೊದಲ ದೃಶ್ಯದಲ್ಲೇ ಮದುವೆ. ಮದುವೆ ಆಗಿ 10 ನಿಮಿಷದ ಬಳಿಕ ನನ್ನ ಹೆಂಡತಿ ಮೈ ಮೇಲೆ ದೆವ್ವ ಇದೆ ಎಂಬುದು ಗೊತ್ತಾಗುತ್ತದೆ. ಹನಿಮೂನ್ ಆಗುತ್ತಾ ಅಥವಾ ಆ ದೆವ್ವ ಸೇಡು ತೀರಿಸಿಕೊಳ್ಳುತ್ತಾ ಎಂಬುದೇ ಕಥೆ. ಕಥೆಗೆ ಸೂಕ್ತ ಎಂಬ ಕಾರಣಕ್ಕೆ ಸುಬ್ಬ ಸುಬ್ಬಿ ಅಂತ ಇಟ್ಟಿದ್ದೇವೆ. ಕರ್ನಾಟಕದಲ್ಲಿ 7 ಕೋಟಿ ಜನರು ಇದ್ದಾರೆ. ಒಬ್ಬರ ಕಥೆ, ಮಾತು ಇತರರಿಗೆ ಲಿಂಕ್ ಆಗುತ್ತದೆ’ ಎಂದು ಪ್ರಥಮ್ (ಪ್ರಥಮ್) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.