‘ಧುರಂಧರ್ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್

‘ಧುರಂಧರ್ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್


'ಧುರಂಧರ 2' ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್

ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯೂಸಿ ಅವರ ಸಿನಿಮಾ ಅಭಿಮಾನಿಗಳಿಗೆ ಅಷ್ಟು ಸಂತೋಷ ಸಿಗುತ್ತಿಲ್ಲ. ಅವರು ಮೂರು ಸಿನಿಮಾಗಳನ್ನು ಹೇಗೋ ಮುಗಿಸಿಕೊಟ್ಟರು. ಆದರೆ, ಯಾವ ಸಿನಿಮಾದಲ್ಲೂ ಬದ್ಧತೆ ಕಾಣಿಸುವುದಿಲ್ಲ. ಕಾಟಾಚಾರಕ್ಕೆ ಅವರ ಸಿನಿಮಾ ಶೂಟ್ ಮುಗಿಸಿಕೊಟ್ಟರು. ‘ಓಜಿ’, ‘ಹರಿ ಹರ ವೀರ ಮಲ್ಲು’ ಸಿನಿಮಾ ಸಾಧಾರಣ ಪ್ರದರ್ಶನ ನೀಡಿದ ಬಳಿಕ ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವು ‘ಧುರಂಧರ 2’ (ಧುರಂಧರ 2) ಅಬ್ಬರದಿಂದ ತತ್ತರಿಸಿದೆ.

‘ಧುರಂಧರ 2’ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ಗುರುವಾರ (ಮಾರ್ಚ್ 26) 49 ಕೋಟಿ ರೂಪಾಯಿ ಗಳಿಸಿದೆ. ವಾರದ ದಿನವೂ ಇಷ್ಟು ಅಬ್ಬರದ ಗಳಿಕೆ ಆಗುತ್ತಿರುವುದು ನಿಜಕ್ಕೂ ಶಾಕಿಂಗ್ ಎನಿಸಿದೆ. ಈ ಸಿನಿಮಾಗೆ ಗುರುವಾರ ಬರೋಬ್ಬರಿ 19,493 ಶೋಗಳನ್ನು ನೀಡಲಾಗಿದೆ. ಈ ಭಾರತದ ನೆಟ್ ಕಲೆಕ್ಷನ್ 674 ಕೋಟಿ ರೂಪಾಯಿ ಆಗಿದೆ. ಭಾರತದ ಗ್ರಾಸ್ ಕಲೆಕ್ಷನ್ 805 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾಗೆ ವಿಶ್ವ ಮಟ್ಟದಲ್ಲಿ 1067 ಕೋಟಿ ರೂಪಾಯಿ ಗಳಿಕೆ ಆಗಿದೆ.

ಗುರುವಾರ ‘ಧುರಂಧರ 2’ ಸಿನಿಮಾದ ತೆಲುಗು ವರ್ಷನ್‌ಗೆ 2.50 ಕೋಟಿ ರೂಪಾಯಿ ಆಗಿದೆ. ಆದರೆ, ಇದೇ ದಿನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾಡಿದ್ದು ಕೇವಲ 1 ಕೋಟಿ ರೂಪಾಯಿ ಮಾತ್ರ. ಇದು ಚಿತ್ರಕ್ಕೆ ಭಾರೀ ಹಿನ್ನಡೆ ತಂದಿದೆ.

ಪವನ್ ಕಲ್ಯಾಣ್ ಸಿನಿಮಾ ಭಾರತದಲ್ಲಿ 66 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಅರ್ಧದಷ್ಟು ಗಳಿಗೆ ಮೊದಲ ದಿನವೇ ಬಂದಿತ್ತು. ಆ ಬಳಿಕ ಸಿನಿಮಾದ ಗಳಿಕೆ ಸಂಪೂರ್ಣವಾಗಿ ತಗ್ಗಿ ಹೋಗಿದೆ. ಮುಂದಿನ ದಿನಗಳಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಬಹುದು.

ಇದನ್ನೂ ಓದಿ: ಕೇವಲ ಒಂದು ಕೋಟಿ ಗಳಿಸಿದ ಪವನ್ ಕಲ್ಯಾಣ್ ಸಿನಿಮಾ; ‘ಧುರಂಧರ 2’ ಎದುರು ಮಂಕಾದ ಉಸ್ತಾದ್

ಪವನ್ ಕಲ್ಯಾಣ್ ಅವರು ಸದ್ಯಕ್ಕಂತೂ ಸಿನಿಮಾ ಮಾಡುತ್ತಿಲ್ಲ. ಅವರು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆಗಿದ್ದು, ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಅವರು ಸಿನಿಮಾ ರಂಗದಿಂದಲೇ ದೂರ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *