
ಪಾಕಿಸ್ತಾನ ಸೂಪರ್ ಕೂಟ (PSL) ಆರಂಭ ಆಗಿದೆ. ಮಾರ್ಚ್ 26 ರಂದು ಓಪನಿಂಗ್ ಮ್ಯಾಚ್ ನಡೆಯಿತು. ಆದರೆ, ಈ ಪಂದ್ಯವನ್ನು ನೋಡಲು ಒಬ್ಬನೇ ಒಬ್ಬರೂ ಬಂದಿರಲಿಲ್ಲ. ಹಾಗಂತ ಇದರ ಮೇಲೆ ಯಾರೊಬ್ಬರಿಗೂ ಆಸಕ್ತಿ ಇಲ್ಲ ಎಂದಲ್ಲ. ಇದಕ್ಕೆ ಕಾರಣ ಆಗಿದ್ದು ಇಸ್ರೇಲ್ -ಅಮೆರಿಕ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ. ಈ ಯುದ್ಧ ಪಿಎಸ್ಎಲ್ ಮೇಲೆ ನೇರ ಪರಿಣಾಮ ಬೀರಿದೆ.
ಪಾಕಿಸ್ತಾನ್ ಸೂಪರ್ ಕೂಟದಲ್ಲಿ ಒಟ್ಟು 8 ತಂಡಗಳು ಆಡುತ್ತಿವೆ. ಮಾರ್ಚ್ 26 ರಿಂದ ಆರಂಭವಾಗಿ ಮೇ 3 ರಂದು ಫೈನಲ್. ಯುದ್ಧದ ಪರಿಸ್ಥಿತಿಯಿಂದ ಇರಾನ್ ಹಾರ್ಮೂಜ್ ಜಲಸಂಧಿಯನ್ನು ನಿರ್ಬಂಧಿಸಲಾಗಿದೆ. ಹೀಗಾಗಿ, ತೈಲ ಹಾಗೂ ಗ್ಯಾಸ್ ಹಡಗು ಇಲ್ಲಿಂದ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪಾಕಿಸ್ತಾನದಲ್ಲಿ ತೈಲ ಕೊರತೆ ಉಂಟಾಗಿದೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಪಿಎಸ್‌ಎಲ್ ಅಭಿಮಾನಿಗಳಿಗೆ ಬರದಂತೆ ತಡೆ ಹಾಕಲಾಗಿದೆ. ಜೊತೆಗೆ, ಎಲ್ಲಾ ಪಂದ್ಯಗಳು ಕೇವಲ ಕರಾಚಿ ಮತ್ತು ಲಾಹೋರ್‌ನಲ್ಲಿ ಮಾತ್ರ ನಡೆಯಲಿವೆ. ಈ ಬಗ್ಗೆ ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಆರ್ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಅನನ್ಯ ಬಿರ್ಲಾ
ಒಂದೊಮ್ಮೆ ಮೇ 3ರ ಒಳಗೆ ಸದ್ಯದ ಪರಿಸ್ಥಿತಿ ಕೊನೆಯಾಗಿ ತೈಲ ಹಾಗೂ ಗ್ಯಾಸ್ ಮತ್ತೆ ಪೂರೈಕೆ ಆದರೆ, ಮತ್ತೆ ಫ್ಯಾನ್ಸ್ ಕರೆಸಿಕೊಳ್ಳಲು ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ. ಸದ್ಯ ಖಾಲಿ ಸ್ಟೇಡಿಯಂ ಹಾಗೂ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ‘ಪಾಕಿಸ್ತಾನಕ್ಕೆ ಅವಮಾನ. ಪಿಎಸ್‌ಎಲ್ ಪಂದ್ಯ ನೋಡಲು ಯಾರೊಬ್ಬರೂ ಬಂದಿಲ್ಲ’ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ ಎಂಬುದು ಕೆಲವರಿಗೆ ಗೊತ್ತಾಗಿದೆ.
ಪಾಕಿಸ್ತಾನಕ್ಕೆ ಮತ್ತೊಂದು ಜಾಗತಿಕ ಅವಮಾನ
– ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನದ ಮಾಜಿ ಆಟಗಾರರು ಎಲ್ಲರೂ ಪಿಎಸ್ಎಲ್ ಅನ್ನು ವಿಶ್ವದ ನಂಬರ್ ಒನ್ ಲೀಗ್ ಎಂದು ಕರೆಯುತ್ತಾರೆ ಮತ್ತು ಐಪಿಎಲ್ಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದ್ದಾರೆ. ಆದರೂ, ಅದೇ ಸಮಯದಲ್ಲಿ, ಸ್ಟ್ಯಾಂಡ್ಗಳಲ್ಲಿ ಯಾವುದೇ ಬ್ರ್ಯಾಂಡಿಂಗ್ ಇಲ್ಲ.
ಅದಕ್ಕಾಗಿಯೇ ನಿಖರವಾಗಿ… pic.twitter.com/b2oRYuhy3P
— lndian Sports Netwrk (@IS_Netwrk29) ಮಾರ್ಚ್ 26, 2026
ಮೊದಲ ಪಂದ್ಯದ ಫಲಿತಾಂಶ
ಲಾಹೋರ್ ಹಾಗೂ ಹೈದರಾಬಾದ್ ಮಧ್ಯೆ ಮೊದಲ ಪಂದ್ಯ. ಈ ಪ್ರದರ್ಶನ ಲಾಹೋರ್ 69 ರನ್ಗಳ ಗೆಲುವು ಕಂಡಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ಪಾಕಿಸ್ತಾನಕ್ಕೆ ಮತ್ತೊಂದು ಜಾಗತಿಕ ಅವಮಾನ