Headlines

ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು

ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು


ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್ ನತ್ತ ಸುಳಿಯದ ವಾಹನ ಸವಾರರು

ರಾಯಚೂರು, ಮಾರ್ಚ್ 27: ನಯಾರಾ ಕಂಪನಿಯ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಆ ಕಂಪನಿಯ ಬ್ಯಾಂಕ್‌ಗಳ ಗ್ರಾಹಕರು ಸುಳಿಯುತ್ತಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆಯಾಗಿದೆ. ಈ ಏಕಾಏಕಿ ದರ ಪೆಟ್ರೋಲ್ ಬೈಕ್ ಸವಾರರು ನಯಾರಾ ಬಂಕ್‌ಗಳಿಂದ ದೂರ ಸರಿಯುತ್ತಿದ್ದಾರೆ. ಬಂಕ್ನತ್ತ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ನಯಾರಾ ಪೆಟ್ರೋಲ್ ಬಂಕ್‌ಗಳಿಗೆ ರಸ್ತೆ ಮಾರ್ಗವಾಗಿ ಹೋಗುವವರು ಮಾತ್ರ ಭೇಟಿ ನೀಡುತ್ತಿದ್ದಾರೆ. ಉಳಿದ ಬೈಕ್ ಸವಾರರು ನಗರದೊಳಗಿನ ಇತರ ಪೆಟ್ರೋಲ್ ಬಂಕ್‌ಗಳ ಕಡೆಗೆ ಮುಖ ಮಾಡಿದ್ದು, ಅಲ್ಲಿ ಸಂದಣಿ ಇದೆ. 300 ರೂಪಾಯಿಗೆ 3 ಲೀಟರ್ ಪೆಟ್ರೋಲ್ ಸಿಗುತ್ತಿದ್ದ ಜಾಗದಲ್ಲಿ, ಈಗ 315 ರೂಪಾಯಿಗೆ ಕೇವಲ 2.8 ಲೀಟರ್ ಸಿಗುತ್ತಿದೆ ಎಂದು ಬೈಕ್ ಸವಾರರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *