Headlines

‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ


'ಸ್ವಸ್ತಿಕ್' ಕನ್ನಡದ 'ಧುರಂಧರ'; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

‘ಧುರಂಧರ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು.

ಪಾರ್ವತಮ್ಮ ರಾಜ್ ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ವಿಜಯಲಕ್ಷ್ಮೀ, ಶ್ರೀನಾಥ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿ ಮೂರು ದಶಕ ಕಳೆಯುತ್ತಾ ಬಂದಿದೆ. ಈ ಸಿನಿಮಾ ಸಂಪೂರ್ಣವಾಗಿ ಭಯೋತ್ಪಾದನೆಯ ಮೇಲೆ ಇದೆ. ಈ ದೃಶ್ಯವೊಂದು ಈಗ ವೈರಲ್ ಆಗಿದೆ.

ಅಧ್ಯಕ್ಷ (ಶ್ರೀನಾಥ್) ಗುರು (ರಾಘವೇಂದ್ರ ರಾಜ್ ಕುಮಾರ್) ಬಳಿ ಬಂದು ಭಯೋತ್ಪಾದಕ ಜೊತೆ ಸೇರುವಂತೆ ಕೋರಿದರು. ಭಯೋತ್ಪಾದಕರ ಜೊತೆ ಸೇರಿ ಅವರಲ್ಲಿ ಒಬ್ಬರಾಗಿ ಭಯೋತ್ಪಾದಕ ಪ್ಲ್ಯಾನ್ ನಾಶ ಮಾಡುವಂತೆ ಅಧ್ಯಕ್ಷರ ಕೋರಿಕೆ ಇಡುತ್ತಾನೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಅನೇಕರು ‘ಧುರಂಧರ’ ಚಿತ್ರಕ್ಕೆ ಹೋಲಿಕೆ ಮಾಡಲಾಗಿದೆ.

ಧುರಂಧರ ಸಿನಿಮಾದಲ್ಲೂ ರಣವೀರ್ ಸಿಂಗ್ ಬಳಿ ಬರುವ ಆರ್ ಮಾಧವನ್ ಇದೇ ರೀತಿಯ ಬೇಡಿಕೆ ಇಡುತ್ತಾರೆ. ಈ ದೃಶ್ಯಕ್ಕೆ ಹೋಲಿಕೆ ಅನೇಕರು ‘ಸ್ವಸ್ತಿಕ್’ ಚಿತ್ರವನ್ನು ‘ಧುರಂಧರ’ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ‘ಸ್ವಸ್ತಿಕ್’ ಚಿತ್ರದ ಸೇನಾ ಮುಖ್ಯಸ್ಥನೇ ವಿಲನ್ ಆಗಿದ್ದಾನೆ. ಉಗ್ರರ ಜೊತೆ ಸೇರಿ ಆತನೇ ಕೆಟ್ಟ ಕೆಲಸ ಮಾಡುತ್ತಾ ಇರುತ್ತಾನೆ. ಆದರೆ,’ಧುರಂಧರ 2′ ಚಿತ್ರದಲ್ಲಿ ಆ ರೀತಿ ಆಗುವುದಿಲ್ಲ.

ಇದನ್ನೂ ಓದಿ: ‘ಧುರಂಧರ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್

ಈಗ ಧುರಂಧರ ರಿಲೀಸ್ ಬೆನ್ನಲ್ಲೇ ಈ ಸಿನಿಮಾದ ಕ್ಲಿಪ್ ವೈರಲ್ ಆಗುತ್ತಿದೆ. ಸುಮಾರು 30 ವರ್ಷಗಳ ಹಿಂದೆಯೇ ಉಪೇಂದ್ರ ಅವರು ಬ್ರಿಲಿಯಂಟ್ ಆಗಿ ಸಿನಿಮಾ ಮಾಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *