
ಆನೇಕಲ್, ಮಾರ್ಚ್ 27: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯಲ್ಲಿ ಭಾವನೇ ಬಾಮೈದನ ಕೊಲೆ ಮಾಡಿರುವ ಘಟನೆ ಇದೀಗ ಮೃತ ರಂಜಿತ್ ತಾಯಿ ಹೇಳಿಕೆ ನೀಡಿದ್ದಾರೆ. ಅಳಿಯ ಶ್ರೀನಿವಾಸನೇ ಮಗ ರಂಜಿತ್ ಅವರನ್ನು ಕೊಲೆ ಮಾಡಿದ್ದಾನೆ ಎಂದಿರುವ ಅವರು, ‘ನಮ್ಮ ಮಗ 24 ವರ್ಷದವನು, ಆತನಿಗೆ ತಿಳಿದಿರಲಿಲ್ಲ. ಆದರೆ ಆಕೆಗೆ (ಶ್ರೀನಿವಾಸ್ ತಂಗಿ) ಇಬ್ಬರು ಮಕ್ಕಳಿದ್ದರೂ ಆತನ ಹಿಂದೆ ಓಡಿಬಂದಳು. ಬುದ್ಧಿಹೇಳಿದರೂ ಕೇಳಲಿಲ್ಲ. ಅವರು ಅವರ ಹುಡುಗಿಯನ್ನು ಹುಷಾರಾಗಿ ಇಟ್ಟುಕೊಳ್ಳಬೇಕಿತ್ತು’ ಎಂದು ಅಳಲು ತೊಡಿದ್ದರು.
ರಂಜಿತ್ನ ಅಕ್ಕ ಪವಿತ್ರಾಳನ್ನು ಶ್ರೀನಿವಾಸ್‌ಗೆ ಮದುವೆ ಮಾಡಿಕೊಡಲಾಗಿದೆ. ಆ ಬಳಿಕ ಶ್ರೀನಿವಾಸ್ ತಂಗಿ ಕೋಮಲ್ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್ ಬೇರೊಬ್ಬರೊಂದಿಗೆ ಮದುವೆಯಾಗಿ ಮಕ್ಕಳಿದ್ದರೂ, ಗಂಡನನ್ನು ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಅದು ಕೊಲೆಯಲ್ಲಿ ಪರ್ಯಾವಸಾನ ಹೋದ.
ಪೂರ್ಣ ವಿವರಗಳಿಗೆ ಓದಿ: ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ