Headlines

Ram Navami 2026: ರಾಮ ನವಮಿ ಬಳಿಕ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ

Ram Navami 2026: ರಾಮ ನವಮಿ ಬಳಿಕ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ


ರಾಮ ನವಮಿ 2026: ರಾಮ ನವಮಿ ನಂತರ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ

ಇಂದು ದೇಶಾದ್ಯಂತ ಶ್ರೀ ರಾಮ ನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದಂದು ಒಂದು ಅಪರೂಪದ ಗ್ರಹಗಳ ಸಂಯೋಗ ಸಂಭವಿಸುತ್ತಿದೆ. ಈ ಜ್ಯೋತಿಷ್ಯ ವಿದ್ಯಮಾನವು 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ವಿಶೇಷವಾಗಿ ಎರಡು ರಾಶಿಚಕ್ರದವರಿಗೆ ಇದು ಸುವರ್ಣ ಕಾಲವನ್ನು ತರಲಿದೆ. ಕಳೆದ ಕೆಲವು ಸಮಯದಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದ ಈ ರಾಶಿಗಳು ಜನರಿಗೆ ಶ್ರೀರಾಮನ ಆಶೀರ್ವಾದದಿಂದ ಇಂದಿನಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಅದೃಷ್ಟವಂತ ರಾಶಿಗಳು ಇಲ್ಲಿವೆ ಎಂಬುದನ್ನು ತಿಳಿದುಕೊಳ್ಳಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಈ ರಾಮ ನವಮಿಯು ಜೀವನದ ಹೊಸ ಅಧ್ಯಾಯಕ್ಕೆ ದಾರಿಯಾಗಲಿದೆ. ಎಷ್ಟು ಕಷ್ಟ ಬಂದರೂ ಎದೆಗುಂದದ ನಿಮ್ಮ ಸ್ವಭಾವಕ್ಕೆ ಈಗ ತಕ್ಕ ಪ್ರತಿಫಲ ಸಿಗಲಿದೆ. ದಂಪತಿಗಳ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿ, ಪ್ರೀತಿ ಮತ್ತು ವಿಶ್ವಾಸ ಚಿಗುರಲಿದೆ.ದೀರ್ಘಕಾಲದ ಆರ್ಥಿಕ ಬಿಕ್ಕಟ್ಟುಗಳು ಬಗೆಹರಿಯಲಿವೆ. ಸಾಲದ ಬಾಧೆಯಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿವೆ, ನಿರೀಕ್ಷೆಗೂ ಮೀರಿ ಲಾಭ ಗಳಿಸುವಿರಿ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಬೇಕು ಯಾಕೆ ಗೊತ್ತಾ?

ಮೇಷ ರಾಶಿ:

ಶ್ರೀರಾಮನ ಕೃಪಾಕಟಾಕ್ಷದಿಂದ ಮೇಷ ರಾಶಿಯವರ ಸ್ಥಗಿತಗೊಂಡಿರುವ ಕೆಲಸಗಳು ವೇಗವಾಗಿ ಪಡೆದುಕೊಳ್ಳಲಿವೆ. ನಿಮ್ಮ ವಿಶ್ವಾಸ ದುಪ್ಪಟ್ಟಾಗಲಿದೆ. ವಿದೇಶಕ್ಕೆ ಹೋಗುವ ಹಂಬಲವಿದ್ದವರಿಗೆ ವೀಸಾ ಸಮಸ್ಯೆಗಳು ಬಗೆಹರಿದು ಶುಭ ಸುದ್ದಿ ಸಿಗಲಿದೆ. ಹಳೆಯ ಆಸ್ತಿ ಅಥವಾ ಜಮೀನಿನ ಮಾರಾಟದಿಂದ ನಿರೀಕ್ಷಿತ ಬೆಲೆಯು ಹಠಾತ್ ಹಣದ ಹರಿವು ಹೆಚ್ಚಾಗಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮನ್ನಣೆ ಸಿಗಲಿದೆ, ಕೀರ್ತಿ ಹೆಚ್ಚಾಗಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *