Headlines

IPL 2026: Can Teams Cross 300 Runs for the First Time ಈ ಸಲ ಐಪಿಎಲ್‌ನಲ್ಲಿ 300+ ರನ್‌ ದಾಖಲೆ? | Will Ipl 2026 Witness First Ever 300 Plus Score Big Hitting Trend Raises Hopes Kvn

IPL 2026: Can Teams Cross 300 Runs for the First Time ಈ ಸಲ ಐಪಿಎಲ್‌ನಲ್ಲಿ 300+ ರನ್‌ ದಾಖಲೆ? | Will Ipl 2026 Witness First Ever 300 Plus Score Big Hitting Trend Raises Hopes Kvn



IPL 2026: Can Teams Cross 300 Runs for the First Time ಈ ಸಲ ಐಪಿಎಲ್‌ನಲ್ಲಿ 300+ ರನ್‌ ದಾಖಲೆ? | Will Ipl 2026 Witness First Ever 300 Plus Score Big Hitting Trend Raises Hopes Kvn

ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ರನ್‌ಗಳ ಹೊಳೆ ಹರಿದಿದ್ದು, ತಂಡವೊಂದು 300 ರನ್ ಗಳಿಸುವ ಸನಿಹಕ್ಕೆ ಬಂದಿದೆ. ಇಂಪ್ಯಾಕ್ಟ್‌ ಆಟಗಾರ ನಿಯಮ, ಸ್ಫೋಟಕ ಬ್ಯಾಟಿಂಗ್ ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಂತಹ ಕಾರಣಗಳಿಂದ 2026ರ ಐಪಿಎಲ್‌ನಲ್ಲಿ ಈ ಬೃಹತ್ ಮೊತ್ತ ದಾಖಲಾಗುವ ನಿರೀಕ್ಷೆ ಹೆಚ್ಚಾಗಿದೆ.

ಬೆಂಗಳೂರು: ಆರ್‌ಸಿಬಿ ಸತತ 2ನೇ ಬಾರಿ ಟ್ರೋಫಿ ಗೆಲ್ಲಲಿದೆಯೇ? ಪ್ಲೇ-ಆಫ್‌ಗೆ ಯಾರು ಪ್ರವೇಶ ಪಡೆಯುತ್ತಾರೆ? ಯಾವ ಆಟಗಾರ ಗರಿಷ್ಠ ರನ್‌ ಬಾರಿಸುತ್ತಾರೆ? ಎಂಬ ಪುನರಾವರ್ತಿತ ಪ್ರಶ್ನೆಗಳನ್ನು ಬದಿಗಿಟ್ಟು 2026ರ ಐಪಿಎಲ್‌ನಲ್ಲಿ ಹೊಸ ಪ್ರಶ್ನೆ ಕೇಳೋಣ: ತಂಡವೊಂದು ಮೊದಲ ಬಾರಿಗೆ 300 ರನ್ ಗಳಿಸುತ್ತದೆಯೇ?

ಕಳೆದೆರಡು ವರ್ಷಗಳ ಐಪಿಎಲ್‌ ಪಂದ್ಯಗಳನ್ನು ಗಮನಿಸಿದರೆ, ಆಕ್ರಮಣಕಾರಿ ಆಟವನ್ನು ನೋಡಿದರೆ 19ನೇ ಆವೃತ್ತಿಯ ಐಪಿಎಲ್‌ನಲ್ಲಿ 300+ ರನ್‌ ಅಸಾಧ್ಯವೇನಲ್ಲ ಎಂಬುದು ಸ್ಪಷ್ಟ. ಕಳೆದ ಆವೃತ್ತಿಯಲ್ಲೇ ನಿರೀಕ್ಷಿಸಲಾಗಿದ್ದ ಈ ಬೃಹತ್‌ ಮೊತ್ತ ಈ ಬಾರಿ ಐಪಿಎಲ್‌ನಲ್ಲಾದರೂ ದಾಖಲಾಗಲಿದೆಯೇ ಎಂಬ ನಿರೀಕ್ಷೆ, ಕುತೂಹಲ ಎಲ್ಲರಲ್ಲಿದೆ. ಅದಕ್ಕೆ ಕಾರಣಗಳೂ ಹಲವಿದೆ.

ಸನಿಹದಲ್ಲಿದೆ 300ರ ಗಡಿ:

2024ರ ಐಪಿಎಲ್‌ಗೂ ಮುನ್ನ ಟೂರ್ನಿಯ ಗರಿಷ್ಠ ಸ್ಕೋರ್‌ ಆರ್‌ಸಿಬಿಯ 263/6. ಅದು ದಾಖಲಾಗಿದ್ದು 2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ. ಈಗ ಗರಿಷ್ಠ ಸ್ಕೋರ್‌ ಪಟ್ಟಿ ಗಮನಿಸಿದರೆ ಅಗ್ರ-10ರ ಪೈಕಿ 9 ಗರಿಷ್ಠ ಸ್ಕೋರ್‌ ಪಂದ್ಯಗಳು ನಡೆದಿದ್ದು 2024, 2025ರಲ್ಲಿ. ಅಂದರೆ, ಕಳೆದೆರಡು ವರ್ಷಗಳಲ್ಲಿ ರನ್‌ ಹೊಳೆಯೇ ಹರಿದಿದ್ದು, ದಾಖಲೆಗಳ ಸುರಿಮಳೆಯೇ ಸುರಿದಿದೆ. ಒಟ್ಟಾರೆ, ಐಪಿಎಲ್‌ನಲ್ಲಿ ಈವರೆಗಿನ ಗರಿಷ್ಠ ಸ್ಕೋರ್‌ 287 ರನ್‌. 2024ರಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್‌ ತಂಡ 3 ವಿಕೆಟ್‌ ನಷ್ಟದಲ್ಲಿ 287 ರನ್‌ ಗಳಿಸಿತ್ತು. ಕಳೆದ ವರ್ಷ ರಾಜಸ್ಥಾನ ವಿರುದ್ಧ ಸನ್‌ರೈಸರ್ಸ್‌ ತಂಡ 6 ವಿಕೆಟ್‌ ನಷ್ಟದಲ್ಲಿ 286 ರನ್‌ ಕಲೆಹಾಕಿತ್ತು. ಇದೆಲ್ಲವನ್ನೂ ಗಮನಿಸಿದರೆ ಈ ಬಾರಿ ಐಪಿಎಲ್‌ನಲ್ಲಿ 300+ ರನ್‌ ದಾಖಲಾಗುವ ನಿರೀಕ್ಷೆ ಹೆಚ್ಚಿದೆ.

ಇಂಪ್ಯಾಕ್ಟ್‌ ನಿಯಮದ ಇಂಪ್ಯಾಕ್ಟ್‌:

ಕಳೆದ 3 ವರ್ಷಗಳಲ್ಲಿ ಐಪಿಎಲ್‌ನಲ್ಲಿ ಗರಿಷ್ಠ ರನ್‌ಗಳ ಪಂದ್ಯ ದಾಖಲಾಗಲು ಪ್ರಮುಖ ಕಾರಣ ಇಂಪ್ಯಾಕ್ಟ್‌ ಆಟಗಾರ ನಿಯಮ. 12ನೇ ಆಟಗಾರನಾಗಿ ತಂಡದ ನಿರ್ಣಾಯಕ ಘಟ್ಟದಲ್ಲಿ ಆಡಲು ಬರುವ ಆಟಗಾರನಿಂದಾಗಿ ದೊಡ್ಡ ಮೊತ್ತಗಳು ದಾಖಲಾಗುತ್ತಿವೆ. 2008ರಿಂದ 2022ರ ವರೆಗೆ ಈ ನಿಯಮ ಇಲ್ಲದಿದ್ದಾಗ ತಂಡಗಳ ರನ್‌ರೇಟ್‌ಗೂ 2023ರಲ್ಲಿ ಈ ನಿಯಮ ಜಾರಿಯಾದ ಬಳಿಕದ ರನ್‌ರೇಟ್‌ಗೂ ತುಂಬಾ ವ್ಯತ್ಯಾಸವಿದೆ.

ಇನ್ನು, ಫೀಲ್ಡಿಂಗ್‌ ನಿರ್ಬಂಧ, ಸಣ್ಣ ಬೌಂಡರಿ, ಬ್ಯಾಟಿಂಗ್‌ ಸ್ನೇಹಿ ಪಿಚ್‌ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಬಾರಿ ಐಪಿಎಲ್‌ನಲ್ಲಿ 300+ ರನ್‌ ದಾಖಲಾಗುವುದು ಸಾಧ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ.

300+ ನಿರೀಕ್ಷೆಗೆ ಏನು ಕಾರಣ?

1. ಹೆಚ್ಚುತ್ತಿರುವ ಹೈ ಸ್ಕೋರ್‌ ಟ್ರೆಂಡ್‌

ಟಿ20ಯಲ್ಲಿ ಅದರಲ್ಲೂ ಐಪಿಎಲ್‌ ಅಂದರೆ ಈಗ ಹೈಸ್ಕೋರ್‌ ಎಂಬ ಟ್ರೆಂಡ್‌ ಇದೆ. ಕಡಿಮೆ ಮೊತ್ತದ ಪಂದ್ಯಗಳು ಈಗ ಅಪರೂಪಕ್ಕೆ ಮಾತ್ರ ಕಾಣಸಿಗುತ್ತದೆ. ತಂಡಗಳು ಹೈಸ್ಕೋರ್‌ ಪಂದ್ಯಗಳ ಮನಸ್ಥಿತಿಯಲ್ಲೇ ಆಡುತ್ತಿವೆ.

2. ಸ್ಫೋಟಕ ಆಟಕ್ಕೆ ಬ್ಯಾಟರ್ಸ್‌ ಒತ್ತು

ಮನಬಂದಂತೆ ದಂಡಿಸುವುದು, ಸಿಕ್ಸರ್‌ ಸಿಡಿಸುವುದು ಈಗಿನ ಬ್ಯಾಟರ್‌ಗಳಿಗೆ ಒಂದು ಮಜಾ. ಸಾಧಾರಣ ಆಟ ಕೈಬಿಟ್ಟು ಸ್ಫೋಟಕ ಆಟಕ್ಕೇ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಸಿಕ್ಸರ್‌, ಬೌಂಡರಿಗಳ ಮೂಲಕವೇ ರನ್‌ ಗಳಿಸುತ್ತಿದ್ದಾರೆ.

3. ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳೇ ಹೆಚ್ಚು

ಈಗ ಯಾವುದೇ ಟಿ20 ಟೂರ್ನಿಗಳಲ್ಲೂ ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳೇ ಹೆಚ್ಚಿನ ಪ್ರಮಾಣದಲ್ಲಿವೆ. ಐಪಿಎಲ್‌ನಲ್ಲೂ ಬೌಲಿಂಗ್‌ ಸ್ನೇಹಿ ಅಥವಾ ಸ್ಪರ್ಧಾತ್ಮಕ ಪಿಚ್‌ಗಳಿಗಿಂತ ಬಿಸಿಸಿಐ ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳನ್ನೇ ತಯಾರಿಸುತ್ತಿವೆ.

4. ಇಂಪ್ಯಾಕ್ಟ್‌ ಆಟಗಾರ ನಿಯಮ

ಐಪಿಎಲ್‌ನಲ್ಲಿ ಗರಿಷ್ಠ ಮೊತ್ತಕ್ಕೆ ಇಂಪ್ಯಾಕ್ಟ್‌ ಆಟಗಾರ ನಿಯಮದ ಕೊಡುಗೆ ದೊಡ್ಡದು. ಕೆಲ ಸ್ಫೋಟಕ ಬ್ಯಾಟರ್‌ಗಳನ್ನೇ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿಸುವ ತಂಡ, ದೊಡ್ಡ ಮೊತ್ತಗಳನ್ನು ಸುಲಭದಲ್ಲಿ ಕಲೆಹಾಕುತ್ತಿವೆ.

5. ಚಿಕ್ಕ ಕ್ರೀಡಾಂಗಣ, ಸಣ್ಣ ಬೌಂಡರಿ

ಐಪಿಎಲ್‌ ನಡೆಯುವ ಬೆಂಗಳೂರು ಸೇರಿದಂತೆ ಬಹುತೇಕ ಕ್ರೀಡಾಂಗಣಗಳ ಬೌಂಡರಿ ಲೈನ್‌ ಸುತ್ತಳತೆ ಸಣ್ಣದಿದೆ. ಫೀಲ್ಡಿಂಗ್‌ ನಿರ್ಬಂಧ ಸೇರಿದಂತೆ ಇನ್ನೂ ಕೆಲ ನಿಯಮಗಳಿಂದಾಗಿ ರನ್‌ ಗಳಿಸುವುದು ಮತ್ತಷ್ಟು ಸುಲಭವಾಗುತ್ತಿದೆ.

ಟಿ20ಯಲ್ಲಿ 5 ಬಾರಿ ದಾಖಲಾಗಿದೆ 300+ ರನ್

ಐಪಿಎಲ್‌ನಲ್ಲಿ 300+ ರನ್‌ ದಾಖಲಾಗದಿದ್ದರೂ ಒಟ್ಟಾರೆ ಟಿ20 ಕ್ರಿಕೆಟ್‌ಗೆ 300+ ಅಪರಿಚತವೇನಲ್ಲ. ಈ ಮಾದರಿಯಲ್ಲಿ ಇಲ್ಲಿವರೆಗೆ 5 ಬಾರಿ ತಂಡಗಳು 300+ ರನ್‌ ಗಳಿಸಿವೆ. 2024ರಲ್ಲಿ ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20ಯಲ್ಲಿ ಸಿಕ್ಕಿಂ ವಿರುದ್ಧ ಬರೋಡಾ ತಂಡ 5 ವಿಕೆಟ್‌ಗೆ 349 ರನ್‌ ಗಳಿಸಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, 2024ರಲ್ಲಿ ಗಾಂಬಿಯಾ ವಿರುದ್ಧ ಜಿಂಬಾಬ್ವೆ ತಂಡ 4 ವಿಕೆಟ್‌ಗೆ 344 ರನ್‌ ಕಲೆಹಾಕಿತ್ತು.

ಕಳೆದ ವರ್ಷ 6 ಬಾರಿ 240+ ರನ್, 2 ಬಾರಿ 275+ ರನ್

ಕಳೆದ ಐಪಿಎಲ್‌ನಲ್ಲೇ 300+ ರನ್‌ ನಿರೀಕ್ಷಿಸಲಾಗಿತ್ತು. ಅದು ಸಾಧ್ಯವಾಗಿದಿದ್ದರೂ ತಂಡಗಳು ಅದರ ಸನಿಹಕ್ಕೆ ತಲುಪಿದ್ದವು. 2025ರಲ್ಲಿ ಒಟ್ಟು 6 ಬಾರಿ 240+ ರನ್‌ ದಾಖಲಾಗಿವೆ. 2 ಬಾರಿ 275+ ರನ್‌ ಕಲೆಹಾಕಿವೆ. ಸನ್‌ರೈಸರ್ಸ್‌ ತಂಡ ರಾಜಸ್ಥಾನ ವಿರುದ್ಧ 286, ಕೆಕೆಆರ್‌ ವಿರುದ್ಧ 278 ರನ್‌ ಗಳಿಸಿತ್ತು.



Source link

Leave a Reply

Your email address will not be published. Required fields are marked *