
ಬೆಂಗಳೂರು, (ಮಾರ್ಚ್ 27): ಕೇಂದ್ರ ಸರ್ಕಾರ ಪೆಟ್ರೋಲ್(ಪೆಟ್ರೋಲ್) ಮತ್ತು ಡೀಸೆಲ್(ಡೀಸೆಲ್) ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಆದರೆ, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕ್ಷನ್ಗಾಗಿ ತೈಲ ಬೆಲೆಯ ಅಬಕಾರಿ ಸುಂಕ ಕಡಿಮೆ ಮಾಡಲಾಗಿದೆ. ತೈಲ ಬೆಲೆ ಜಾಸ್ತಿ ಮಾಡಿಬಿಟ್ಟು ನಮ್ಮನ್ನು ಕೊಲೆ ಮಾಡುತ್ತಿದೆ.ಕಂಪನಿಯವರು ಕೂಡ ಜಾಸ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು.