Kitchen Hacks: ಸಾಮಾನ್ಯವಾಗಿ ನಾವು ಬಳಸಿದ ಎಣ್ಣೆಯನ್ನು ಸೋಸುತ್ತೇವೆ (Filter). ಆದರೆ ಎಷ್ಟೇ ಸೋಸಿದರೂ ಅದರಲ್ಲಿರುವ ಅತೀ ಸಣ್ಣ ಕಣಗಳು ಹಾಗೆಯೇ ಉಳಿದುಬಿಡುತ್ತವೆ. ಇಂತಹ ಎಣ್ಣೆಯನ್ನು ಮತ್ತೆ ತಾಜಾ ಎಣ್ಣೆಯಂತೆ ಮಾಡಲು ಈ ಕೆಳಗಿನ ಹಂತಗಳನ್ನ ಅನುಸರಿಸಿ.

ನಮ್ಮ ಮನೆಗಳಲ್ಲಿ ವಡೆ, ಪೂರಿ ಅಥವಾ ಬಜ್ಜಿಗಳನ್ನು ಕರಿಯಲು ಬಳಸಿದ ಎಣ್ಣೆ ಉಳಿದಾಗ ಅದನ್ನು ಏನು ಮಾಡುವುದು ಎಂಬ ಗೊಂದಲ ಕಾಡುವುದು ಸಹಜ. ಕರಿದ ನಂತರ ಎಣ್ಣೆಯಲ್ಲಿ ಸಣ್ಣ ಸಣ್ಣ ಆಹಾರದ ಕಣಗಳು ಅಥವಾ ಮಲಿನಾಂಶಗಳು ಉಳಿದುಕೊಳ್ಳುತ್ತವೆ. ಇದನ್ನು ಹಾಗೆಯೇ ಬಿಟ್ಟರೆ ಎಣ್ಣೆ ಬೇಗ ಹಾಳಾಗುತ್ತದೆ ಮತ್ತು ಮತ್ತೆ ಬಳಸಲು ಅಸಹ್ಯವೆನಿಸುತ್ತದೆ. ಆದರೆ ಒಂದು ಸಣ್ಣ ಮನೆಮದ್ದಿನ ಮೂಲಕ ಬಳಸಿದ ಎಣ್ಣೆಯನ್ನು ಕೆಲವೇ ನಿಮಿಷಗಳಲ್ಲಿ ಮತ್ತೆ ಫ್ರೆಶ್ ಆಗಿ ಮಾಡಬಹುದು. ಆ ವಿವರ ಇಲ್ಲಿದೆ ನೋಡಿ.

ಮೊದಲು ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಕಾರ್ನ್ ಫ್ಲೋರ್ (Cornflour) ತೆಗೆದುಕೊಂಡು, ಅದಕ್ಕೆ ತಕ್ಕಷ್ಟು ನೀರು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ.

ಬಳಸಿದ ಹಳೆಯ ಎಣ್ಣೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಬಿಸಿ ಮಾಡಿ.

ಎಣ್ಣೆ ಬಿಸಿಯಾದ ನಂತರ, ನೀವು ಮೊದಲೇ ಸಿದ್ಧಪಡಿಸಿಟ್ಟುಕೊಂಡ ಕಾರ್ನ್ ಫ್ಲೋರ್ ಮಿಶ್ರಣವನ್ನು ಎಣ್ಣೆಗೆ ಹಾಕಿ.

ಕಾರ್ನ್ ಫ್ಲೋರ್ ಮಿಶ್ರಣವನ್ನು ಹಾಕಿದ ತಕ್ಷಣ, ಎಣ್ಣೆಯಲ್ಲಿರುವ ಎಲ್ಲಾ ಕಸ ಮತ್ತು ಮಲಿನಾಂಶಗಳು ಆ ಕಾರ್ನ್ ಫ್ಲೋರ್ ಜೊತೆ ಅಂಟಿಕೊಂಡು ಒಂದು ಉಂಡೆಯಂತಾಗುತ್ತದೆ.

ಆ ಕಾರ್ನ್ ಫ್ಲೋರ್ ಉಂಡೆಯನ್ನು ಎಣ್ಣೆಯಿಂದ ಹೊರತೆಗೆದರೆ, ಎಣ್ಣೆಯು ಯಾವುದೇ ಕಸವಿಲ್ಲದೆ ಸಂಪೂರ್ಣವಾಗಿ ಸ್ವಚ್ಛವಾಗಿ, ಹೊಸ ಎಣ್ಣೆಯಂತೆ ಕಾಣುತ್ತದೆ.

ಈ ಸರಳ ಪದ್ಧತಿಯಿಂದ ಅಡುಗೆ ಎಣ್ಣೆ ವ್ಯರ್ಥವಾಗುವುದನ್ನು ತಡೆಯಬಹುದು. ಕಾರ್ನ್ ಫ್ಲೋರ್ ಮ್ಯಾಗ್ನೆಟ್ನಂತೆ ಕೆಲಸ ಮಾಡಿ ಎಣ್ಣೆಯಲ್ಲಿರುವ ಕಸವನ್ನು ತನ್ನೆಡೆಗೆ ಎಳೆದುಕೊಳ್ಳುತ್ತದೆ, ಇದರಿಂದ ನಮಗೆ ಮತ್ತೆ ಬಳಸಲು ಯೋಗ್ಯವಾದ ಶುದ್ಧ ಎಣ್ಣೆ ಸಿಗುತ್ತದೆ. ಇದು ಹಣವನ್ನು ಉಳಿಸುವುದಲ್ಲದೆ ಅಡುಗೆ ಮನೆಯ ಕೆಲಸವನ್ನು ಸುಲಭಗೊಳಿಸುತ್ತದೆ.

"ಎಣ್ಣೆಯನ್ನು ಶುದ್ಧೀಕರಿಸಿದ ನಂತರ ಅದನ್ನು ಗಾಳಿಯಾಡದ ಡಬ್ಬದಲ್ಲಿ (Airtight container) ಶೇಖರಿಸಿಡಿ. ಇದರಿಂದ ಎಣ್ಣೆ ಹೆಚ್ಚು ದಿನಗಳ ಕಾಲ ಕೆಡದಂತೆ ಇರುತ್ತದೆ."

Source link