ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ ಎಂದ ಹೈಕೋರ್ಟ್‌!

ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ ಎಂದ ಹೈಕೋರ್ಟ್‌!

ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ ಎಂದ ಹೈಕೋರ್ಟ್‌!

Allahabad High Court ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್‌ನಲ್ಲಿ ಇರುವುದೇ ಅಪರಾಧವೇ ಎಂಬ ಪ್ರಶ್ನೆಗೆ ಹೈಕೋರ್ಟ್ ಮಹತ್ವದ ಉತ್ತರ ನೀಡಿದ್ದು, ಈ ತೀರ್ಪು ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಮದುವೆಯಾದ ಪುರುಷನ ಜೊತೆ ಲಿವ್-ಇನ್ ರಿಲೇಶನ್‌ನಲ್ಲಿ ಇದ್ದರೆ ಅದು ಅಪರಾಧವೇ? ಈ ಪ್ರಶ್ನೆಗೆ ಇದೀಗ ಹೈಕೋರ್ಟ್ ಸ್ಪಷ್ಟ ಉತ್ತರ ಕೊಟ್ಟಿದೆ. ಈ ಪ್ರಕರಣದಲ್ಲಿ, ವಿವಾಹಿತ ಪುರುಷ ಮತ್ತು ಮಹಿಳೆ ಒಟ್ಟಿಗೆ ಲಿವ್-ಇನ್ ರಿಲೇಶನ್‌ನಲ್ಲಿ ವಾಸಿಸುತ್ತಿದ್ದರು. ಇವರಿಗೆ ಕುಟುಂಬದಿಂದ ಮತ್ತು ಸಮಾಜದಿಂದ ಬೆದರಿಕೆ ಎದುರಾಗುತ್ತಿದ್ದ ಹಿನ್ನೆಲೆ, ತಮ್ಮ ಜೀವಕ್ಕೆ ರಕ್ಷಣೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು— “ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್‌ನಲ್ಲಿ ಇರುವುದನ್ನು ಕಾನೂನು ಅಪರಾಧ ಎಂದು ಪರಿಗಣಿಸುವುದಿಲ್ಲ.” ಇಬ್ಬರೂ ಸ್ವಯಂ ಇಚ್ಛೆಯಿಂದ ಸಂಬಂಧದಲ್ಲಿ ಇದ್ದರೆ, ಅದು ಅವರ ವೈಯಕ್ತಿಕ ಆಯ್ಕೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಆದರೆ ಕೋರ್ಟ್ ಮತ್ತೊಂದು ಮುಖ್ಯ ವಿಚಾರವನ್ನು ಕೂಡ ಒತ್ತಿ ಹೇಳಿದೆ. ಇಂತಹ ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ಒಪ್ಪಿಗೆಯನ್ನು ಪಡೆಯದೇ ಇರಬಹುದು, ಆದರೆ ಕಾನೂನಿನ ದೃಷ್ಟಿಯಲ್ಲಿ ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವನ ಆಯ್ಕೆಯನ್ನು ಗೌರವಿಸುವುದು ಮುಖ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದರ ಜೊತೆಗೆ, ಜೋಡಿಯ ಜೀವಕ್ಕೆ ಯಾವುದೇ ಅಪಾಯ ಇದ್ದರೆ, ಅವರಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ ಎಂದು ಕೋರ್ಟ್ ಆದೇಶಿಸಿದೆ. ಇದು ವ್ಯಕ್ತಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವ ಮಹತ್ವದ ಸೂಚನೆ ಎಂದು ಹೇಳಲಾಗುತ್ತಿದೆ.

ಈ ತೀರ್ಪು ಹೊರಬಂದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು ಈ ತೀರ್ಪನ್ನು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಇದನ್ನು ಸಂಪ್ರದಾಯಗಳಿಗೆ ವಿರುದ್ಧ ಎಂದು ಟೀಕಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *