
ಬೆಂಗಳೂರು, ಮಾರ್ಚ್ 27: ಆರ್ಬಿಐ ಕ್ಯಾಲೆಂಡರ್ ಪ್ರಕಾರ 2026ರ ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ (ಬ್ಯಾಂಕ್ ರಜಾದಿನಗಳು) ಇದೆ. ಕೆಲ ರಜೆಗಳು ಪ್ರಾದೇಶಿಕವಾಗಿ, ಆಯಾ ಪ್ರದೇಶಕ್ಕೆ ಸೀಮಿತವಾಗಿದೆ. ಮಾರ್ಚ್ ತಿಂಗಳಿಗೆ ಏಪ್ರಿಲ್ ನಲ್ಲಿ ಹಬ್ಬ ಹರಿದಿನಗಳು ಕಡಿಮೆ. ಕ್ರೈಸ್ತರ ಗುಡ್ ಫ್ರೈಡೆ, ಈಸ್ಟರ್ ಹಬ್ಬಗಳು ಏಪ್ರಿಲ್ನಲ್ಲಿ ಇವೆ. ಈಸ್ಟರ್ ಹಬ್ಬ ಭಾನುವಾರ ಬಂದಿಲ್ಲ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಕೂಡ ಏಪ್ರಿಲ್ ನಲ್ಲೇ ಇವೆ. ನಾಲ್ಕು ಭಾನುವಾರ ಮತ್ತು ಎರಡು ಶನಿವಾರಗಳ ರಜೆಗಳು ಏಪ್ರಿಲ್ ತಿಂಗಳಿನಲ್ಲಿ.
ಏಪ್ರಿಲ್ 2026 ರಲ್ಲಿ ಬ್ಯಾಂಕ್ ರಜಾದಿನಗಳು
- ಏಪ್ರಿಲ್ 1, ಬುಧವಾರ: ಆಯನುಯಲ್ ಅಕೌಂಟ್ ಕ್ಲೋಸಿಂಗ್ ಪ್ರಯುಕ್ತ ರಜೆ
- ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ಹೆಚ್ಚಿನ ಕಡೆ ರಜೆ
- ಏಪ್ರಿಲ್ 5: ಭಾನುವಾರದ ರಜೆ
- ಏಪ್ರಿಲ್ 11: ಎರಡನೇ ಶನಿವಾರದ ರಜೆ
- ಏಪ್ರಿಲ್ 12: ಭಾನುವಾರದ ರಜೆ
- ಏಪ್ರಿಲ್ 14, ಮಂಗಳವಾರ: ವೈಶಾಖಿ / ಬೋಹಾಗ್ ಬಿಹು / ವಿಶು / ತಮಿಳು ಹೊಸ ವರ್ಷ / ಅಂಬೇಡ್ಕರ್ ಜಯಂತಿ (ಹಲವು ರಾಜ್ಯಗಳಿಗೆ ರಜೆ)
- ಏಪ್ರಿಲ್ 15, ಬುಧವಾರ: ಬೋಹಗ್ ಬಿಹು / ಹಿಮಾಚಲ ದಿನ / ಬಂಗಾಳ ದಿನ (ಅರುಣಾಚಲ, ಹಿಮಾಚಲ, ಬಂಗಾಳ ಮುಂತಾದೆಡೆ ರಜೆ)
- ಏಪ್ರಿಲ್ 19: ಭಾನುವಾರದ ರಜೆ
- ಏಪ್ರಿಲ್ 20, ಸೋಮವಾರ: ಬಸವ ಜಯಂತಿ
- ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
- ಏಪ್ರಿಲ್ 26: ಭಾನುವಾರದ ರಜೆ
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?
ಕರ್ನಾಟಕದಲ್ಲಿ ಗುಡ್ ಫ್ರೈಡೆಗೆ ರಜೆ ಇರುತ್ತದೆ. ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿಗೂ ರಾಜ್ಯದಲ್ಲಿ ಬ್ಯಾಂಕುಗಳು ಬಂದ್ ಆಗಿವೆ. ಶನಿವಾರ ಮತ್ತು ಭಾನುವಾರದ ರಜೆಗಳು ಏಪ್ರಿಲ್ನಲ್ಲಿ ಒಟ್ಟು 10 ದಿನ ಬ್ಯಾಂಕುಗಳು ಬಾಗಿಲು ಮುಚ್ಚುತ್ತವೆ.
ಕರ್ನಾಟಕದಲ್ಲಿ ಏಪ್ರಿಲ್ನಲ್ಲಿ ಬ್ಯಾಂಕ್ ರಜಾದಿನಗಳು
- ಏಪ್ರಿಲ್ 1, ಬುಧವಾರ: ಆಯನುಯಲ್ ಅಕೌಂಟ್ ಕ್ಲೋಸಿಂಗ್
- ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ರಜೆ
- ಏಪ್ರಿಲ್ 5: ಭಾನುವಾರದ ರಜೆ
- ಏಪ್ರಿಲ್ 11: ಎರಡನೇ ಶನಿವಾರದ ರಜೆ
- ಏಪ್ರಿಲ್ 12: ಭಾನುವಾರದ ರಜೆ
- ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
- ಏಪ್ರಿಲ್ 19: ಭಾನುವಾರದ ರಜೆ
- ಏಪ್ರಿಲ್ 20, ಸೋಮವಾರ: ಬಸವ ಜಯಂತಿ
- ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
- ಏಪ್ರಿಲ್ 26: ಭಾನುವಾರದ ರಜೆ
ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?
ಬ್ಯಾಂಕ್ ಕಚೇರಿಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್‌ಲೈನ್‌ನಲ್ಲಿ ಅವಿಘ್ನವಾಗಿ ನಡೆಯುತ್ತಿರುತ್ತವೆ. ಎಟಿಎಂಗಳು ದಿನದ 24 ಗಂಟೆಯೂ ತೆರೆದಿರುತ್ತದೆ. ಆನ್‌ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಚಾಲನೆಯಲ್ಲಿರುವುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ