
ಏಪ್ರಿಲ್ 2026 ರಲ್ಲಿ ಮೇಷ ರಾಶಿಯಲ್ಲಿ ಉಚ್ಚನಾದ ಸೂರ್ಯ, ಬುಧ, ಸ್ವಸ್ಥಾನವಾದ ವೃಷಭದಲ್ಲಿ ಶುಕ್ರ, ಮಿತ್ರನ ಸ್ಥಾನವಾದ ಮೀನದಲ್ಲಿ ಕುಜ ಈ ಮೂರೂ ಗ್ರಹರೂ ಉತ್ತಮಸ್ಥಾನದಲ್ಲಿ ಇರುತ್ತಾರೆ. ಯಾವುದೇ ಶುಭ ಫಲವನ್ನು ಪಡೆಯುವ ಅವಕಾಶ ಈ ತಿಂಗಳು ಅಧಿಕವಾಗಿದೆ. ಅವಕಾಶಗಳನ್ನು ವಂಚಿಸುವ ಕಾರ್ಯ ಬೇಡ.
ಮೇಷ:
ಈ ತಿಂಗಳು ನಿಮಗೆ ಮಿಶ್ರಫಲ ನೀಡಲಿದೆ. ರಾಶಿಯಲ್ಲಿ ರವಿಯ ಸಂಚಾರವಿರುವ ಕಾರ್ಯಕ್ಷೇತ್ರದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗಲಿದೆ. ಆದರೆ, ಕುಜನ ಪ್ರಭಾವದಿಂದ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕುಟುಂಬದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ.
ವೃಷಭ:
ಆರ್ಥಿಕವಾಗಿ ಈ ತಿಂಗಳ ಉತ್ತಮ ಪ್ರಗತಿ ಕಾಣುವಿರಿ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಸಕಾಲ. ಶುಕ್ರನ ಶುಭ ದೃಷ್ಟಿಯಿಂದ ದಾಂಪತ್ಯ ಜೀವನ ಸುಖಮಯ. ದೂರದ ಪ್ರಯಾಣದ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಹೊಸ ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆಯಿದೆ.
ಮಿಥುನ:
ಬುಧನ ಸಂಚಾರವು ನಿಮ್ಮ ಸಂವಹನ ಕಲೆಗೆ ಬಲ ನೀಡಲಿದೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಉತ್ತಮ ಸಮಯ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರೇಮ ಕೆಲವು ಜೀವನದಲ್ಲಿ ಗೊಂದಲಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ.
ಕರ್ಕಟಕ:
ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಮಾನಸಿಕವಾಗಿ ಸ್ವಲ್ಪ ಒತ್ತಡ ಅನುಭವಿಸಿದರೂ, ಕಾರ್ಯಜಯ ಲಭಿಸಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಶಿವನ ಆರಾಧನೆಯು ನಿಮಗೆ ಹೆಚ್ಚಿನ ಶಾಂತಿ ನೀಡಲಿದೆ. ಮಕ್ಕಳ ಪ್ರಗತಿಯು ಮನಸ್ಸಿಗೆ ಸಂತೋಷ ತರಲಿದೆ.
ಸಿಂಹ:
ಭಾಗ್ಯಸ್ಥಾನದಲ್ಲಿ ರವಿಯ ಸಂಚಾರವಿದ್ದರೆ ಅದೃಷ್ಟ ನಿಮ್ಮ ಕಡೆ ಇರಲಿದೆ. ಸ್ಥಗಿತಗೊಂಡ ಕೆಲಸಗಳು ಪುನರಾರಂಭಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ತಂದೆಯ ಕಡೆಯಿಂದ ಆಸ್ತಿ ಅಥವಾ ಸಹಾಯ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿಯ ಯೋಗವಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕನ್ಯಾ:
ಈ ತಿಂಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಸಮಯ. ಆರೋಗ್ಯದಲ್ಲಿ ಏರುಪೇರಾಗಬಹುದು, ಆಹಾರ ಕ್ರಮದ ಬಗ್ಗೆ ಗಮನವಿರಲಿ. ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು, ಆದರೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸಾಲ ನೀಡುವ ಮುನ್ನ ಯೋಚಿಸಿ. ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಶಕ್ತಿಯಾಗಲಿದೆ.
ತುಲಾ:
ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ ಇದೆ. ಶುಕ್ರನ ಅನುಗ್ರಹದಿಂದ ಭೋಗ ಜೀವನದತ್ತ ಆಸಕ್ತಿ ಹೆಚ್ಚಾಗಲಿದೆ. ಹೊಸ ಪರಿಚಯಗಳು ವ್ಯವಹಾರದಲ್ಲಿ ಲಾಭ ತರಲಿವೆ. ಹಣಕಾಸಿನ ಹರಿವು ಸಾಧಾರಣವಾಗಿರುತ್ತದೆ. ಕಾನೂನು ವಿಚಾರಗಳಲ್ಲಿ ಜಯ ಸಿಗುವ ಸಾಧ್ಯತೆಯಿದೆ.
ವೃಶ್ಚಿಕ:
ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದ ಸಮಸ್ಯೆಗಳು ಹತೋಟಿಗೆ ಬರಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಸಾಲದ ಹೊರೆ ಇಳಿಸಲು ಇದು ಸೂಕ್ತ ಸಮಯ. ಮಾತು ಮಿತವಾಗಿರಲಿ.
ಧನು:
ಸಂತಾನ ಭಾಗ್ಯದ ನಿರೀಕ್ಷೆಯಲ್ಲಿರುವವರಿಗೆ ಶುಭ ವಾರ್ತೆ ಇರುತ್ತದೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗುವ ಸಾಧ್ಯತೆಯಿದೆ. ಧಾರ್ಮಿಕ ಪ್ರವಾಸ ಮಾಡುವ ಯೋಗವಿದೆ. ಗುರು ಬಲವಿದ್ದರೂ ಕಠಿಣ ಕೆಲಸಗಳೂ ಸುಲಭವಾಗಿ ಪೂರ್ಣಗೊಳ್ಳಲಿವೆ.
ಮಕರ:
ಶನಿ ಮತ್ತು ಕುಜನ ಪ್ರಭಾವದಿಂದ ಸ್ವಲ್ಪ ಅಸ್ಥಿರತೆ ಇರಬಹುದು. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ಶಾಂತಿಯಿಂದಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಜಮೀನು ಅಥವಾ ಮನೆ ಖರೀದಿಯ ವಿಚಾರದಲ್ಲಿ ಪ್ರಗತಿ ಇದೆ.
ಕುಂಭ:
ನಿಮ್ಮ ಪರಾಕ್ರಮ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಹೋದರ ಸಹೋದರಿಯರಿಂದ ಬೆಂಬಲ ದೊರೆಯಲಿದೆ. ಚಿಕ್ಕ ಪ್ರವಾಸಗಳು ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹತ್ತಿರದ ಸಂಬಂಧಿಗಳೊಂದಿಗೆ ಸಂಬಂಧ ವೃದ್ಧಿಯಾಗಲಿದೆ.
ಮೀನ:
ಧನ ದಾಯದಲ್ಲಿ ಹೆಚ್ಚಲಿದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಮಾತಿನ ಪ್ರಭಾವದಿಂದ ಕಠಿಣ ಕೆಲಸಗಳನ್ನು ಸಾಧಿಸುವಿರಿ. ಉಳಿತಾಯದ ಕಡೆ ಗಮನ ನೀಡುವುದು ಉತ್ತಮ. ಕಣ್ಣಿನ ಅಥವಾ ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾತ್ವಿಕ ಆಹಾರ ಸೇವನೆಗೆ ಒತ್ತು ನೀಡಿ.
– ಲೋಹಿತ ಹೆಬ್ಬಾರ್