
ಬೆಂಗಳೂರು/ದಾವಣಗೆರೆ, ಮಾರ್ಚ್ 27): ದಾವಣಗೆರೆ ಉಪ ಚುನಾವಣೆ (ದಾವಣಗೆರೆ ದಕ್ಷಿಣ ಉಪಚುನಾವಣೆ) ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಹಿರಿಯ ನಾಯಕರ ಸಂಧಾನದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದ್ದು, ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪೈಲ್ವಾನ್ ಘೋಷಿಸಿದ್ದಾರೆ.
ಸಾಧಿಕ್ ಪೈಲ್ವಾನ್ ಅವರು ರಿಜ್ವಾನ್ ಶದ್ ಹಾಗೂ ಸಲೀಂ ಅಹಮ್ಮದ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದು, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಂತರ ನೇರವಾಗಿ ಡಿಕೆಶಿ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ತೆರಳಿ ಬಂಡಾಯ ಸ್ಪರ್ಧೆಯಿಂದ ನಾನು ನಿವೃತ್ತಿ ಆಗಿದ್ದೇನೆ ಎಂದು ಶಿವಕುಮಾರ್ ಘೋಷಿಸಿದರು. ಈ ಮೂಲಕ ಕಾಂಗ್ರೆಸ್ಗೆ ಕಂಟಕವಾಯಿತು. ಹಾಗದ್ರೆ, ಪೈಲ್ವಾನ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.