
ಜನವರಿ, ಮಾರ್ಚ್ 27: ಇರಾನ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ಕಚ್ಛಾ ತೈಲ, ಎಲ್ಪಿಜಿ, ಎಲ್ಎನ್ ಜಿಗಳ (LNG – ದ್ರವೀಕೃತ ನೈಸರ್ಗಿಕ ಅನಿಲ) ಪೂರೈಕೆ ವ್ಯತ್ಯಯವಾಗಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಆಪದ್ಬಾಂಧವ ಎನಿಸಿದೆ. ರಷ್ಯಾದಿಂದ ಕಚ್ಛಾ ತೈಲದ ಖರೀದಿಯನ್ನು ಭಾರತ ಪುನಾರಂಭಿಸಿದೆ. ಇದೇ ವೇಳೆ ಎಲ್ಎನ್ ಜಿಯನ್ನೂ ರಷ್ಯಾದಿಂದ ಪಡೆಯಲು ಭಾರತ ಯೋಜಿಸಿದೆ. ಅಮೆರಿಕದ ಅನುಮತಿ ಪಡೆದೇ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಈಗ ಎಲ್ಎನ್ ಜಿ ಖರೀದಿಗೂ ಅಮೆರಿಕದ ಅನುಮತಿ ಸಿಗುವ ನಿರೀಕ್ಷೆ ಇದೆ.
ರಷ್ಯಾದಿಂದ ಎಲ್ ಎನ್ ಜಿ ಸಿಕ್ಕರೆ ಭಾರತದ ಇಂಧನ ಬಿಕ್ಕಟ್ಟಿನ ಸಮಸ್ಯೆಗೆ ಒಂದು ಮಟ್ಟಕ್ಕೆ ಪರಿಹಾರ ಸಿಗಬಹುದು. ಉಕ್ರೇನ್ ಯುದ್ಧ ಆರಂಭವಾದ ರಷ್ಯಾದಿಂದ ಭಾರತಕ್ಕೆ ಎಲ್ ಎನ್ ಜಿ ಪೂರೈಕೆ ನಿಂತಿತ್ತು. ಕೇವಲ ಕಚ್ಛಾ ತೈಲದ ಪೂರೈಕೆ ಮಾತ್ರವೇ ನಡೆಯುವುದು. ಈಗ ಭಾರತಕ್ಕೆ ಎಲ್ಎನ್ಜಿ ಪೂರೈಕೆ ಪುನರಾರಂಭವಾಗುವುದು ಖಚಿತವಾಗಿದೆ. ಭಾರತವು ಎಲ್ಎನ್ಜಿ ಪಡೆಯಲು ಒಪ್ಪಿಕೊಂಡಿದ್ದೇ ಆದಲ್ಲಿ ಕೆಲವೇ ವಾರಗಳಲ್ಲಿ ವ್ಯವಸ್ಥೆ ಪೂರ್ಣವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?
ಏನಿದು ಎಲ್ಎನ್ಜಿ? ಎಲ್ಪಿಜಿಗೂ ಅದಕ್ಕೂ ಏನು ವ್ಯತ್ಯಾಸ?
ಎಲ್ಎನ್ಜಿ ಒಂದು ನೈಸರ್ಗಿಕ ಅನಿಲ. ಎಲ್ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎರಡೂ ಕೂಡ ಧ್ರವರೂಪಕ್ಕೆ ಇಳಿಸಿದ ಅನಿಲಗಳೇ ಆಗಿವೆ. ಎರಡೂ ಕೂಡ ಬೇರೆ ಬೇರೆ ಗುಣ ಇರುವ ಗ್ಯಾಸ್ ಆಗಿವೆ.
ತೈಲ ಸಂಸ್ಕರಣೆ ಪ್ರಕ್ರಿಯೆ ವೇಳೆ ಬರುವ ಪ್ರೊಪೇನ್, ಬ್ಯುಟೇನ್ ಇತ್ಯಾದಿ ಅನಿಲಗಳು ಪೆಟ್ರೋಲಿಯಂ ಗ್ಯಾಸ್ ಆಗುತ್ತವೆ. ಇದು ಗಾಳಿಗಿಂತ ಭಾರವಲ್ಲ. ಈ ಪ್ರೊಪೇನ್, ಬುಟೇನ್ ಅನ್ನು ಧ್ರವ ರೂಪಕ್ಕೆ ಇಳಿಸಿ ಸಾಗಿಸದಿದ್ದರೆ.
ಎಲ್ಎನ್ಜಿಯಲ್ಲಿ ನೈಸರ್ಗಿಕ ಅನಿಲವಾದ ಮೀಥೇನ್ ಇರುತ್ತದೆ. ಕ್ರಯೋಜೆನಿಕ್ ವಿಧಾನದಲ್ಲಿ ಮೈನಸ್ 162 ಡಿಗ್ರಿ ಸೆಲ್ಶಿಸ್ ಶೀತದಲ್ಲಿ ಇದನ್ನು ಧ್ರುವರೂಪಕ್ಕೆ ತರದಿದ್ದರೆ. ಈ ಅನಿಲವನ್ನು ಹಡಗುಗಳಲ್ಲಿ ಸಾಗಿಸಲು ಧ್ರವರೂಪಕ್ಕೆ ತರಲಾಯಿತು. ಅದಕ್ಕೆ ಇದನ್ನು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಎಂದು.
ಇದನ್ನೂ ಓದಿ: ಗೃಹೇತರ ಬಳಕೆಯ ಎಲ್ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ
ಪಿಎನ್ಜಿಗೂ ಎಲ್ಎನ್ಜಿಗೂ ಏನು ವ್ಯತ್ಯಾಸ?
ಪಿಎನ್ಜಿ ಮತ್ತು ಎಲ್ಎನ್ಜಿ ಎರಡೂ ಕೂಡ ಮೀಥೇನ್ ಯುಕ್ತ ನೈಸರ್ಗಿಕ ಅನಿಲಗಳೇ. ಒಂದೇ ವ್ಯತ್ಯಾಸ ಎಂದರೆ ಮೀಥೇನ್ ಅನ್ನು ಧ್ರುವರೂಪಕ್ಕೆ ತಂದರೆ ಅದು ಎಲ್ಎನ್ಜಿ ಆಗುತ್ತದೆ. ಈ ಎಲ್ಎನ್ಜಿಯನ್ನು ಬಳಸಬೇಕಾದರೆ ಮತ್ತೆ ಗ್ಯಾಸ್ ರೂಪಕ್ಕೆ ತರಬೇಕು. ಈ ಗ್ಯಾಸ್ ಅನ್ನು ಪೈಪ್ಗಳ ಮೂಲಕ ಸರಬರಾಜು ಮಾಡಿದರೆ ಅದು ಪಿಎನ್ಜಿ ಎನಿಸುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ