Varun Dhawan: ಮಗಳಿಗೆ ಗಂಭೀರ ಕಾಯಿಲೆ! ಮಗುವಿನ ಈಗಿನ ಸ್ಥಿತಿ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು? | Varun Dhawan Reveals Daughter Lara Had Ddh Disease Shares Health Update Gvd

Varun Dhawan: ಮಗಳಿಗೆ ಗಂಭೀರ ಕಾಯಿಲೆ! ಮಗುವಿನ ಈಗಿನ ಸ್ಥಿತಿ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು? | Varun Dhawan Reveals Daughter Lara Had Ddh Disease Shares Health Update Gvd



Varun Dhawan: ಮಗಳಿಗೆ ಗಂಭೀರ ಕಾಯಿಲೆ! ಮಗುವಿನ ಈಗಿನ ಸ್ಥಿತಿ ಬಗ್ಗೆ ನಟ ವರುಣ್ ಧವನ್ ಹೇಳಿದ್ದೇನು? | Varun Dhawan Reveals Daughter Lara Had Ddh Disease Shares Health Update Gvd

ನನ್ನ ಮಗಳಿಗೆ ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್ ಇತ್ತು. ಇದರಲ್ಲಿ ಸೊಂಟದ ಮೂಳೆ ಜಾರಿಕೊಳ್ಳುತ್ತದೆ. ಒಂದು ಕಾಲು ಉದ್ದ, ಇನ್ನೊಂದು ಗಿಡ್ಡ ಆಗಿ ನಡಿಗೆಯಲ್ಲಿ ವ್ಯತ್ಯಾಸವಾಗುತ್ತದೆ ಎಂದು ವರುಣ್ ಹೇಳಿದ್ದಾರೆ.

ನಟ ವರುಣ್ ಧವನ್ ತಮ್ಮ ಮಗಳು ಲಾರಾ ಆರೋಗ್ಯದ ಬಗ್ಗೆ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗೆ DDH ಎಂಬ ಕಾಯಿಲೆ ಇದ್ದು, ಇದರಿಂದಾಗಿ ಅವಳಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆದರೆ ಈಗ ಚಿಕಿತ್ಸೆ ಬಳಿಕ ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರುಣ್ ಹೇಳಿದ್ದಾರೆ.

‘ಬೀ ಅ ಮ್ಯಾನ್’ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ವರುಣ್ ಧವನ್ ಈ ವಿಷಯ ತಿಳಿಸಿದ್ದಾರೆ. “ನನ್ನ ಮಗಳಿಗೆ DDH (ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್) ಇತ್ತು. ಇದರಲ್ಲಿ ಸೊಂಟದ ಮೂಳೆ ಜಾರಿಕೊಳ್ಳುತ್ತದೆ. ಒಂದು ಕಾಲು ಉದ್ದ, ಇನ್ನೊಂದು ಗಿಡ್ಡ ಆಗಿ ನಡಿಗೆಯಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದಾಗಿ ಸರಿಯಾಗಿ ನಡೆಯಲು ಅಥವಾ ಓಡಲು ಸಾಧ್ಯವಾಗುವುದಿಲ್ಲ” ಎಂದು ವಿವರಿಸಿದ್ದಾರೆ.

ವರುಣ್ ಧವನ್ ಮುಂದುವರಿಸಿ, “ಈ ಕಾಯಿಲೆಯಿಂದ ಬೇಗನೆ ಆರ್ಥ್ರೈಟಿಸ್ ಮತ್ತು ಸ್ಲಿಪ್ ಡಿಸ್ಕ್ ಬರುವ ಸಾಧ್ಯತೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹುಟ್ಟಿನಿಂದಲೇ ಇದಕ್ಕೆ ಉತ್ತಮ ಚಿಕಿತ್ಸೆ ಸಿಗುತ್ತದೆ. ಭಾರತದಲ್ಲಿ ಎಲ್ಲ ಕಡೆ ಅಷ್ಟು ಸೌಲಭ್ಯ ಇಲ್ಲದಿರಬಹುದು, ಆದರೆ ಇಲ್ಲಿಯೂ ಉತ್ತಮ ವೈದ್ಯರಿದ್ದು, ಇದಕ್ಕೆ ಚಿಕಿತ್ಸೆ ನೀಡುತ್ತಾರೆ” ಎಂದರು.

ವರುಣ್ ಈ ಬಗ್ಗೆ ವಿವರಿಸುತ್ತಾ, “ಅವಳಿಗೆ ಸರ್ಜರಿ ಬೇಕಾಗಲಿಲ್ಲ. ಒಂದು ಪ್ರೊಸೀಜರ್ ಮೂಲಕ ಸೊಂಟದ ಮೂಳೆಯನ್ನು ಸರಿಯಾದ ಜಾಗಕ್ಕೆ ಕೂರಿಸಲಾಯಿತು. ಆದರೆ ಅವಳು 2.5 ತಿಂಗಳು ಸ್ಪೈಕಾ ಕಾಸ್ಟ್‌ನಲ್ಲಿ ಇರಬೇಕಾಯಿತು. ಅರಿವಳಿಕೆ ನೀಡಿ ಕಾಸ್ಟ್ ಹಾಕುವುದು ತುಂಬಾ ಕಷ್ಟಕರವಾಗಿತ್ತು. ಈಗ ಕಾಸ್ಟ್ ತೆಗೆಯಲಾಗಿದೆ” ಎಂದು ಹೇಳಿದರು.

ಯಾರ ಸಹಾನುಭೂತಿಯೂ ಬೇಡ

ಎಲ್ಲಾ ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ಗಮನ ಹರಿಸಬೇಕು. ಆರಂಭಿಕ ವರ್ಷಗಳಲ್ಲಿ ಏನಾದರೂ ಅಸಹಜತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾಕೆಂದರೆ ಈ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿದರೆ ಗುಣಪಡಿಸಬಹುದು ಎಂದು ವರುಣ್ ಧವನ್ ಸಲಹೆ ನೀಡಿದ್ದಾರೆ. ವರುಣ್ ಧವನ್ ಸ್ಪಷ್ಟವಾಗಿ ಹೇಳಿದ್ದಾರೆ, “ನನಗೆ ಯಾರ ಸಹಾನುಭೂತಿಯೂ ಬೇಡ. ಭಾರತದಲ್ಲಿ ಈ ಕಾಯಿಲೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅದಕ್ಕಾಗಿಯೇ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ಈ ಬಗ್ಗೆ ಜಾಗೃತಿ ಮೂಡಿಸುವುದೇ ನನ್ನ ಉದ್ದೇಶ”.

ವರುಣ್ 2021ರಲ್ಲಿ ನತಾಶಾ ದಲಾಲ್ ಅವರನ್ನು ಮದುವೆಯಾಗಿದ್ದರು. ಜೂನ್ 3, 2024 ರಂದು ಇವರಿಗೆ ಹೆಣ್ಣು ಮಗು ಜನಿಸಿತು. ಮಗಳ ಜನನದ ಖುಷಿಯನ್ನು ಹಂಚಿಕೊಳ್ಳುತ್ತಾ, “ನಮ್ಮ ಮಗಳು ಬಂದಿದ್ದಾಳೆ, ತಾಯಿ ಮತ್ತು ಮಗುವಿಗೆ ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದರು. ಮಗಳು ಬಂದ ನಂತರ ತಾನು ಹೆಚ್ಚು ಭಾವುಕನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *