ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು
ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ, ಕಮೋಲ್ವಾನ್ ಚಾನಾಗೊ ಎಂಬ ಸ್ಪರ್ಧಿ ಕ್ಯಾಟ್‌ವಾಕ್‌ ಮಾಡುವಾಗ ಮುಗುಳ್ನಕ್ಕರು. ಆ ಕ್ಷಣದಲ್ಲಿ ಅವರ ಹಲ್ಲುಸೆಟ್ಟು ಬಾಯಿಂದ ಜಾರಿ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಥಮ ಚುಂಬನೇ ದಂತ ಭಗ್ನಃ ಎನ್ನುವ ಮಾತಿದೆ. ಇದರ ಅರ್ಥ ಮೊದಲ ಬಾರಿಗೆ ಚುಂಬನ ಮಾಡುವಾಗಲೇ ಹಲ್ಲು ಮುರಿದೇ ಹೋಯ್ತು ಎನ್ನುವುದು. ಆದರೆ ಇಲ್ಲಿ ಆಗಿದ್ದು ಮಾತ್ರ ಅಯ್ಯೋ ಪಾಪ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸುಂದರಿಯೊಬ್ಬಳ ಹಲ್ಲುಸೆಟ್ಟೇ ಬಿದ್ದೋಯ್ತು. ಅದೂ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವೇಳೆ.

ಘಟಾನುಘಟಿ ತೀರ್ಪುಗಾರರು ಹತ್ತಾರು ದೇಶಗಳ ಬ್ಯೂಟಿಗಳು, ಇವರೆಲ್ಲರ ಮುಂದೆ ತಾನೇ ಬ್ಯೂಟಿ ಕಿರೀಟ ತೊಡಗಬೇಕು ಎಂದು ಪಣತೊಟ್ಟು ಬಂದಿದ್ದ ಚೆಲುವೆ ವೇದಿಕೆಗೆ ಕ್ಯಾಟ್‌ವಾಕ್‌ ಮಾಡುತ್ತಾ ಬಂದು ನಗುತ್ತಿದ್ದಂತೆಯೇ ಹಲ್ಲುಸೆಟ್ಟೇ ಬಿದ್ದೋಯ್ತು.

ಒಂದು ಕ್ಷಣ ವಿಚಲಿತವಾದ ಬ್ಯೂಟಿ, ಕೂಡಲೇ ಅತ್ತ ಕಡೆ ಸರಿದು ಹಲ್ಲನ್ನು ಸರಿ ಮಾಡಿಕೊಂಡು ಕೊನೆಗೆ ಮತ್ತೆ ಮುಗುಳ್ನಕ್ಕಳು. ಆದರೂ ಇದರ ವಿಡಿಯೋ ವೈರಲ್‌ ಆಗಿದ್ದೇ ಆಗಿದ್ದು, ಪಾಪ ಇಷ್ಟು ಸಣ್ಣ ವಯಸ್ಸಿನಲ್ಲಿ ಈ ಹಲ್ಲುಸೆಟ್ಟು ಬೇಕಿತ್ತೇ ಎಂದು ಕೇಳುತ್ತಿದ್ದಾರೆ ಎಲ್ಲರೂ.

ಅಂದಹಾಗೆ ಇದು ಆಗಿದ್ದು, ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯ ಸಮಯದಲ್ಲಿ. ಸ್ಪರ್ಧಿಯೊಬ್ಬರು ಪ್ರಾಥಮಿಕ ಸುತ್ತಿನಲ್ಲಿ ಕ್ಯಾಟ್‌ವಾಕ್‌ ಮಾಡುತ್ತಾ ಬಂದು ಮುಗುಳ್ನಗುವ ವೇಳೆ ಹೀಗೆ ಆಗೋಗಿದೆ!

ಕಮೋಲ್ವಾನ್ ಚಾನಾಗೊ ಎನ್ನುವ ಚೆಲುವೆಗೆ ಈ ಸ್ಥಿತಿ ಬಂದಿದೆ. ಆಕೆ ತನ್ನ ಪರಿಚಯವನ್ನು ನೀಡುತ್ತಿದ್ದಾಗ, ಹಲ್ಲು ಸೆಟ್ಟೇ ಕಳಚಿ ಹೋಯಿತು. ಅಲ್ಲಿದ್ದ ತೀರ್ಪುಗಾರರ ಎದುರೇ ಈ ಘಟನೆ ನಡೆಯಿತು.

ಕೊನೆಗೆ ಆಕೆ ಹೇಗೋ ಸಾವರಿಸಿಕೊಂಡು ಮತ್ತೆ ನಕ್ಕಳು. ಆದರೆ ಇದರ ವಿಡಿಯೋ ಮಾತ್ರ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಿದಾಡಿದ್ದು, ನೋಡುಗರು ಮಾತ್ರ ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ.

Source link

Leave a Reply

Your email address will not be published. Required fields are marked *