ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ: ಮದ್ವೆಯ ಅಪರೂಪದ​ ಫೋಟೋಸ್​ ಇಲ್ಲಿವೆ

ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ:  ಮದ್ವೆಯ ಅಪರೂಪದ​  ಫೋಟೋಸ್​ ಇಲ್ಲಿವೆ

ಡಾಕ್ಟರ್​ ಪತ್ನಿಯಾಗಿ ಸಪ್ತಪದಿ ತುಳಿದ Puttakkana Makkalu ಸಂಜನಾ ಬುರ್ಲಿ:  ಮದ್ವೆಯ ಅಪರೂಪದ​  ಫೋಟೋಸ್​ ಇಲ್ಲಿವೆ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಪತಿ ಹಾಗೂ ವೃತ್ತಿ ಜೀವನದ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್​ ಹಾಗೂ ಗಂಧದ ಗುಡಿ ಸೀರಿಯಲ್​ ಮೂಲಕ ಜನಮನ ಗೆದ್ದ ನಟಿ ಸಂಜನಾ ಬುರ್ಲಿ ಇಂದು ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಅವರು ಇಂದು ಶ್ರೀಮತಿಯಾಗಿದ್ದಾರೆ.

ಮದುವೆಯ ಸುಂದರ ವಿಡಿಯೋಗಳು ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ತಮ್ಮ ಮದುವೆಯ ಹಲವಾರು ವಿಡಿಯೋ ಮತ್ತು ಫೋಟೋಗಳನ್ನು ಖುದ್ದು ನಟಿ ಸಂಜನಾ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗಿದ್ದಾರೆ. ಮದುವೆಗೂ ಮುನ್ನ ವಿವಾಹ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು, ಅವುಗಳ ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದರು. ಇದೀಗ ಮದುವೆಯ ಫೋಟೋಗಳೂ ಶೇರ್​ ಆಗಿವೆ.

ಸಂಜನಾ ಅವರ ಭಾವಿ ಪತಿ ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ನಟಿ ಹೇಳಿದ್ದರು. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿತ್ತು. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು.

Source link

Leave a Reply

Your email address will not be published. Required fields are marked *