Police death ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್ | Mystery Behind Police Officer Father Death Finally Solved After 3 Years Mumbai

Police death ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್ | Mystery Behind Police Officer Father Death Finally Solved After 3 Years Mumbai



Police death ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್ | Mystery Behind Police Officer Father Death Finally Solved After 3 Years Mumbai

ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್, ಇಬ್ಬರು ಪೊಲೀಸರ ಬುದ್ಧಿಯಾದ ಕಾರಣ ಪ್ರಕರಣ ಗೊತ್ತೇ ಆಗಲಿಲ್ಲ. 3 ವರ್ಷ ಬಳಿಕ ಈ ಕೇಸ್ ಬಹಿರಂಗವಾಗಿದ್ದೇ ರೋಚಕ.

ಮುಂಬೈ (ಮಾ.27) ಅಪ್ಪ ಪೊಲೀಸ್, ಮಗಳು ಪೊಲೀಸ್, ಇಬ್ಬರು ಕರ್ತವ್ಯದಲ್ಲಿದ್ದರು. ಅಪ್ಪ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಹಜ ಸಾವು ಕಂಡ ಪೊಲೀಸ್ ಅಪ್ಪನ ಅಂತ್ಯಸಂಸ್ಕಾರ ನಡೆದಿತ್ತು. ಬಳಿಕ ಎಲ್ಲವೂ ನಾರ್ಮಲ್ ಆಗಿತ್ತು. ಇದು ನಡೆದಿದ್ದು 3 ವರ್ಷಗಳ ಹಿಂದೆ. ಆದರೆ ಇದೀಗ ಅಂದು ಮೃತಪಟ್ಟ ಪೊಲೀಸ್ ಅಪ್ಪನ ಸಾವು ಸಹಜ ಸಾವಲ್ಲ ಅದು ಕೊಲೆ ಅನ್ನೋದು ಬಯಲಾಗಿದೆ. ಈ ಸಂಬಂಧ ನಾಲ್ವರು ಅರೆಸ್ಟ ಆದ ಘಟನೆ ಮಹಾರಾಷ್ಟ್ರದ ಚಂದ್ರಾಪುರ್‌ನಲ್ಲಿ ನಡೆದಿದೆ.

ಸಿನಿಮಾಗೂ ಕಡಿಮೆ ಇಲ್ಲ ಈ ಪ್ರಕರಣ

ಎಪ್ರಿಲ್ 25, 2023ರಲ್ಲಿ ಪೊಲೀಸ್ ಅಧಿಕಾರಿ ಜಯಂತ್ ಬಲ್ಲವಾರ್ ಎಂದಿನಂತೆ ಜಿಲ್ಲಾಧಿಕಾರಿ ಕಚೇರಿಗೆ ಹಾಜರಾಗಿದ್ದರು. ಜಯಂತ್ ಬಲ್ಲವಾರ ಮಗಳು ಆರ್ಯ ಬಲ್ಲವಾರ್ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು. ಕರ್ತವ್ಯಕ್ಕೆ ಹಾಜರಾದ 45 ವರ್ಷದ ಜಯಂತ್ ಕೆಲ ಹೊತ್ತಿನ ಬಳಿಕ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದರು. ಕರ್ತವ್ಯಕ್ಕೆ ಹಾಜರಾಗಿ ಗಂಟೆಗಳ ಬಳಿಕ ಈ ದುರಂತ ನಡೆದಿತ್ತು. ಸಹಜ ಸಾವು ಕಂಡ ಜಯಂತ್ ಬಲ್ಲವಾರ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿತ್ತು. ಗೌರವುಯತವಾಗಿ ಅಂತ್ಯಸಂಸ್ಕಾರ ನಡೆದಿತ್ತು.

ಎಲ್ಲೂ ಕೂಡ ಜಯಂತ್ ಬಲ್ಲವಾರ್ ಸಾವಿನ ಹಿಂದೆ ಷಡ್ಯಂತ್ರ ಅಡಗಿತ್ತು ಅನ್ನೋ ಅನುಮಾನ ಪೊಲೀಸ್‌ನವರಿಗೆ ಸೇರಿದಂತೆ ಯಾರಿಗೂ ಇರಲಿಲ್ಲ. ಆದರೆ ಈ ಜಯಂತ ಬಲ್ಲವಾರ್ ಸಾವು ಸಹಜ ಸಾವಲ್ಲ , ಅದು ವ್ಯವಸ್ಥಿತ ಕೊಲೆಯಾಗಿತ್ತು. ಈ ಕೊಲೆ ಮಾಡಿದ್ದು ಸ್ವಂತ ಮಗಳು ಪೊಲೀಸ್ ಅಧಿಕಾರಿ ಆರ್ಯ ಬಲ್ಲವಾರ್. ಇದಕ್ಕೆ ನೆರವು ನೀಡಿದ್ದು ಇದೇ ಆರ್ಯ ಬಲ್ಲವರ್ ಗೆಳೆಯ, ಪೊಲೀಸ್ ಆಶಿಶ್ ಶೆಡ‌ಮಕೆ.

ಕೊಲೆ ಮಾಡಿದ್ದು ಹೇಗೆ?

ಜಯಂತ್ ಬಲ್ಲವಾರ್ ಬೆಳಗ್ಗೆ ರೆಡಿಯಾಗಿ ಪೊಲೀಸ್ ಜೀಪ್ ಹತ್ತಿ ಕರ್ತವ್ಯಕ್ಕೆ ತೆರಳುವ ಮೊದಲು ಮಗಳು ಆರ್ಯ ಬಲ್ಲವರ್ ಮಿಲ್ಕ್ ಶೇಕ್ ಜ್ಯೂಸ್ ಮಾಡಿ ಕೊಟ್ಟಿದ್ದಾಳೆ. ಈ ಜ್ಯೂಸ್ ಕುಡಿದು ಅಪ್ಪ ಜಯಂತ್ ಬಲ್ಲವರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಜ್ಯೂಸ್‌ನಲ್ಲಿ ಮಗಳು ಆರ್ಯ ಬಲ್ಲವರ್ ಪಾಯ್ಸನ್ ಮಿಕ್ಸ್ ಮಾಡಿದ್ದಳು. ಅದು ಕೂಡ ನಿರ್ದಿಷ್ಟ ಪ್ರಮಾಣದಲ್ಲಿ ಹಾಕಿದ್ದಳು. ಈ ಮೂಲಕ ತಂದೆ ಕುಡಿದ ಕೆಲವೇ ಕ್ಷಣದಲ್ಲಿ ಸಾಯದಂತೆ ನೋಡಿಕೊಂಡಿದ್ದಳು. ಕರ್ತವ್ಯಕ್ಕೆ ಹಾಜರಾದ ಜಯಂತ ಬಲ್ಲವರ್‌ಗೆ ಅಸ್ವಸ್ಥತೆ ಕಂಡರೂ ಗಂಭೀರತೆ ಇಲ್ಲ ಎಂದುಕೊಂಡಿದ್ದರು. ಆದರೆ ಕೆಲ ಗಂಟೆಗಳ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದರು. ಕೋವಿಡ್ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಿದ್ದ ಕಾರಣ ಜೊತೆಗೆ ಕರ್ತವ್ಯಕ್ಕೆ ಹಾಜರಾದ ಕೆಲ ಗಂಟೆಗಳ ಬಳಿಕ ಸಾವು ಕಂಡಿದ್ದರು. ಹೀಗಾಗಿ ಪೊಲೀಸರು ಸಹಜ ಸಾವು ದಾಖಲಿಸಿದ್ದರು. ಯಾವುದೇ ಪ್ರಕರಣ ದಾಖಲಾಗಲಿಲ್ಲ.

ತಂದೆಯನ್ನು ಮಗಳು ಕೊಲೆ ಮಾಡಿದ್ದು ಯಾಕೆ

ಆರ್ಯ ಬಲ್ಲವರ್‌ಗೆ ಪೊಲೀಸ್ ಅಧಿಕಾರಿಯಾಗಿದ್ದ ಅಶಿಶ್ ಶೆಡಮಕೆ ಜೊತೆ ಪ್ರೀತಿ ಶುರುವಾಗಿತ್ತು. ಈ ಮದುವೆಗೆ ತಂದೆ ಜಯಂತ್ ಬಲ್ಲವರ್ ವಿರೋಧ ವ್ಯಕ್ತಪಡಿಸಿದ್ದರು. ನಾನು ಬದುಕಿರುವವರೆಗೆ ಈ ಮದುವೆಗೆ ಒಪ್ಪಲ್ಲ ಎಂದಿದ್ದರು. ಆಶಿಶ್ ಒಳ್ಳೆ ವ್ಯಕ್ತಿಯಲ್ಲ ಎಂದು ಬುದ್ಧಿ ಹೇಳಿದ್ದರು. ತನ್ನ ಪ್ರೀತಿ ಹಾಗೂ ಮದುವೆಗೆ ಅಡ್ಡಿಯಾದ ತಂದೆಯನ್ನು ಮುಗಿಸಲು ಮಗಳು ಪ್ಲಾನ್ ಮಾಡಿ ಗೆಳೆಯ ಆಶಿಶ್ ಸಹಾಯ ಪಡೆದಿದದರು. ಬಳಿಕ ಪ್ಲಾನ್ ಪ್ರಕಾರ ಕೊಲೆ ಮಾಡಿದ್ದಳು.

ಮೂರು ವರ್ಷ ಬಳಿಕ ಬಯಲಾಗಿದ್ದು ಹೇಗೆ

ಅಪ್ಪನ ಸಾವಿನ ಬಳಿಕ ಆರ್ಯ ಬಲ್ಲವರ್ ಹಾಗೂ ಆಶಿಶ್ ಮದುವೆ ನಡೆದಿತ್ತು. ಪೊಲೀಸ್ ಜೋಡಿಗಳ ಅದ್ಧೂರಿ ಮದುಗೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಮದುವೆಯಾಗಿ ವರ್ಷವಾಗುತ್ತಿದ್ದಂತೆ ಈ ದಾಂಪತ್ಯದಲ್ಲಿ ಜಗಳ ಶುರುವಾಗಿದೆ. ಇತ್ತ ಅಶಿಸ್ತು, ಕೆಟ್ಟ ನಡವಳಿಕೆ ಸೇರಿದಂತೆ ಹಲವು ಕಾರಣಗಳಿಂದ ಅಶಿಶ್ ಪೊಲೀಸ್ ಸ್ಥಾನದಿಂದ ಅಮಾನತುಗೊಂಡಿದ್ದಾರೆ. ಇತ್ತ ಮನೆಯಲ್ಲಿ ಜಗಳವಾಗಿ ಇಬ್ಬುರ ಬೇರೆಯಾಗಿದ್ದಾರೆ. ಆರ್ಯ ತನ್ನ ತವರು ಮನಗೆ ಬಂದಿದ್ದಾಳೆ. ಆದರೆ ಡಿವೋರ್ಸ್ ನೀಡಿದರೆ ಸಮಸ್ಯೆಯಾಗಲಿದೆ ಎಂದು ಮೌನವಾಗಿದ್ದಳು. ಇದೇ ವಿಚಾರವಾಗಿ ಇವರಿಬ್ಬರಿಗೂ ಹಲವು ಬಾರಿ ಜಗಳವಾಗಿದೆ. ತನ್ನ ಮನೆಗೆ ಬರುವಂತೆ ಆಶಿಶ್ ಸೂಚಿಸಿದರೂ ಇದಕ್ಕೆ ಆರ್ಯ ಒಪ್ಪಿಲ್ಲ.

ಇದರ ನಡುವೆ ಕಳೆದ ವಾರ ಪೊಲೀಸ್ ಠಾಣೆಗೆ ಆಗಮಿಸಿದ ಆಶಿಶ್, ಮೂರ ವರ್ಷಗಳ ಹಿಂದೆ ನಡೆದ ಜಯಂತ್ ಬಲ್ಲವರ್ ಸಾವಿನ ಹಿಂದಿನ ಷಡ್ಯಂತ್ರ ಬಹಿರಂಗಪಡಿಸಿದ್ದಾನೆ. ಆಘಾತಗೊಂಡ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರ್ಯ ಬಲ್ಲವರ್, ಪಾಯ್ಸನ್ ತರಿಸಿಕೊಂಡ ತನ್ನ ಸಂಬಂಧಿ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *