ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

ಕಣ್ಣಿನ ದೃಷ್ಟಿ ಹೆಚ್ಚಿಸಲು ಸರಳ ಮನೆಮದ್ದು: ರಾತ್ರಿ ಒಂದು ಚಮಚ ಈ ಪುಡಿ ಸೇವಿಸಿ!

Natural Vision Booster: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಅತಿಯಾದ ಬಳಕೆಯಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ದೃಷ್ಟಿ ಸುಧಾರಿಸಲು ದುಬಾರಿ ಚಿಕಿತ್ಸೆಗಳ ಬದಲಿಗೆ ನಮ್ಮ ಅಡುಗೆಮನೆಯ ಪದಾರ್ಥಗಳಲ್ಲೇ ಅದ್ಭುತ ಪರಿಹಾರವಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಅತಿಯಾದ ಸ್ಕ್ರೀನ್ ಟೈಮ್ (ಮೊಬೈಲ್, ಕಂಪ್ಯೂಟರ್ ಬಳಕೆ) ಮತ್ತು ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಕನ್ನಡಕ ಅವಲಂಬಿಸುವಂತಾಗಿದೆ. ಈ ಸಮಸ್ಯೆಗೆ ದುಬಾರಿ ಚಿಕಿತ್ಸೆ ಅಥವಾ ಸರ್ಜರಿಗಳ ಮೊರೆ ಹೋಗುವ ಮೊದಲು ಪ್ರಸಿದ್ಧ ವೈದ್ಯರಾದ ಡಾ. ಸಲೀಂ ಜೈದಿ ಅವರು ಸೂಚಿಸಿರುವ ಈ ನೈಸರ್ಗಿಕ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಿ. ಇದು ಯಾವುದೇ ಅಡ್ಡಪರಿಣಾಮವಿಲ್ಲದೆ ದೃಷ್ಟಿ ಸುಧಾರಿಸಲು ನೆರವಾಗುತ್ತದೆ.

ಸೋಂಪು: 100 ಗ್ರಾಂಬಾದಾಮಿ: 100 ಗ್ರಾಂಕಾಳು ಮೆಣಸು (ಕಪ್ಪು ಮೆಣಸು): ಅಲ್ಪ ಪ್ರಮಾಣಕಲ್ಲು ಸಕ್ಕರೆ : ರುಚಿಗೆ ತಕ್ಕಷ್ಟು

*ಮೊದಲು 100 ಗ್ರಾಂ ಸೋಂಪನ್ನು ಬಾಣಲೆಯಲ್ಲಿ ಹಾಕಿ ಹದವಾಗಿ ಹುರಿದುಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ.*ಸೋಂಪು ರೀತಿಯಲ್ಲೇ ಬಾದಾಮಿಯನ್ನು ಕೂಡ ಸ್ವಲ್ಪ ಹುರಿದುಕೊಳ್ಳಿ.*ಮೊದಲು ಮಿಕ್ಸಿಯಲ್ಲಿ ಸೋಂಪನ್ನು ಚೆನ್ನಾಗಿ ಪುಡಿ ಮಾಡಿ. ನಂತರ ಬಾದಾಮಿಯನ್ನು ಪುಡಿ ಮಾಡಿಕೊಳ್ಳಿ.*ಕಲ್ಲು ಸಕ್ಕರೆಯನ್ನು ಮೊದಲು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ಈಗ ಪುಡಿ ಮಾಡಿದ ಸೋಂಪು, ಬಾದಾಮಿ, ಕಾಳು ಮೆಣಸು ಮತ್ತು ಕಲ್ಲು ಸಕ್ಕರೆಯನ್ನು ಒಟ್ಟಿಗೆ ಸೇರಿಸಿ ಮತ್ತೊಮ್ಮೆ ಮಿಕ್ಸಿಯಲ್ಲಿ ನುಣ್ಣಗೆ ಗ್ರೈಂಡ್ ಮಾಡಿ.*ಸಿದ್ಧವಾದ ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ (Air-tight container) ಶೇಖರಿಸಿಡಿ.

ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಚಮಚ ಈ ಪುಡಿಯನ್ನು ಉಗುರುಬೆಚ್ಚಗಿನ ನೀರು ಅಥವಾ ಬಿಸಿ ಹಾಲಿನೊಂದಿಗೆ ಸೇವಿಸಿ.

ಕೇವಲ ಮನೆಮದ್ದು ಮಾತ್ರವಲ್ಲದೆ, ದಿನನಿತ್ಯ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ*ಪ್ರತಿ ಅರ್ಧ ಗಂಟೆಗೊಮ್ಮೆ ಸ್ಕ್ರೀನ್‌ನಿಂದ ಕಣ್ಣುಗಳನ್ನು ದೂರ ಸರಿಸಿ ವಿಶ್ರಾಂತಿ ನೀಡಿ.*ಆಗಾಗ ಕಣ್ಣುಗಳನ್ನು ತಣ್ಣೀರಿನಿಂದ ತೊಳೆಯುತ್ತಿರಿ.

ಕಣ್ಣಿನ ಆಯಾಸ ಕಡಿಮೆ ಮಾಡಲು ನೈಸರ್ಗಿಕ ರೋಸ್ ವಾಟರ್ (Rose water) ಅನ್ನು ಬಳಸಬಹುದು.

ಪ್ರತಿ ಅರ್ಧ ಗಂಟೆಗೊಮ್ಮೆ ನಿಮ್ಮ ಎರಡು ಹಸ್ತಗಳನ್ನು ಪರಸ್ಪರ ಉಜ್ಜಿ, ಆ ಉಷ್ಣತೆಯನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ಆರಾಮ ಸಿಗುತ್ತದೆ.

Source link

Leave a Reply

Your email address will not be published. Required fields are marked *