ಜಾರಕಬಂಡೆ ಕಾವಲ್‌ನ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಸಚಿವ ಈಶ್ವರ್‌ ಖಂಡ್ರೆ ಸೂಚನೆ | Eshwar Khandre Orders Reclamation Of 444 Acres Of Forest Land At Jarakabande Kaval

ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್‌ನ ವಾಯುಪಡೆ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.

ಬೆಂಗಳೂರು : ಬೆಂಗಳೂರು ಉತ್ತರ ತಾಲೂಕಿನ ಜಾರಕಬಂಡೆ ಶ್ರೀಗಂಧದ ಕಾವಲ್‌ನ ವಾಯುಪಡೆ ವಶದಲ್ಲಿರುವ 444 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ನೀಡಿದ್ದಾರೆ.

ಲಿಖಿತ ಸೂಚನೆ ನೀಡಿರುವ ಈಶ್ವರ್‌ ಖಂಡ್ರೆ

ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಲಿಖಿತ ಸೂಚನೆ ನೀಡಿರುವ ಈಶ್ವರ್‌ ಖಂಡ್ರೆ, ಜಾರಕಬಂಡೆ ಕಾವಲ್‌ ಅರಣ್ಯ ಪ್ರದೇಶದಲ್ಲಿ ವಾಯುಪಡೆಗೆ ನೀಡಲಾಗಿದ್ದ 452 ಎಕರೆ ಭೂ ಮಂಜೂರಾತಿಯನ್ನು ರಾಜ್ಯ ಸರ್ಕಾರ 2017ರ ಅಕ್ಟೋಬರ್‌ 9ರಂದು ರದ್ದುಗೊಳಿಸಿದೆ. ಅದರಲ್ಲಿ 444.12 ಎಕರೆ ಭೂಮಿ ಅರಣ್ಯ ಪ್ರದೇಶವಾಗಿದ್ದು, ಆ ಭೂಮಿಯನ್ನು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್‌ 64ಎ ಅಡಿ ಭೂಮಿಯನ್ನು ಮರುವಶಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.

ಪರ್ಯಾಯ ಭೂಮಿ ನೀಡುವಂತೆ ಸೂಚಿಸಲಾಗಿತ್ತು

ರಾಷ್ಟ್ರೀಯ ಹಿತ ದೃಷ್ಟಿಯಿಂದ ಭೂ ಮಂಜೂರಾತಿ ರದ್ದು ಪಡಿಸಿದ ನಂತರವೂ ವಾಯುಪಡೆ ಸದರಿ ಭೂಮಿ ಬಳಸಬೇಕೆಂದರೆ ಪರ್ಯಾಯ ಭೂಮಿ ನೀಡುವಂತೆ ಸೂಚಿಸಲಾಗಿತ್ತು. ಆದರೂ, ವಾಯುಪಡೆಯಿಂದ ಪರ್ಯಾಯ ಭೂಮಿ ನೀಡದೇ ನಿಯಮ ಉಲ್ಲಂಘಿಸಲಾಗಿದೆ. ಹೀಗಾಗಿ 64ಎ ಅಡಿಯಲ್ಲಿ ನೋಟಿಸ್‌ ನೀಡಿ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಬೇಕು. ಭೂಮಿ ವಶಕ್ಕೆ ಪಡೆದ ನಂತರ ಅರಣ್ಯ ಭೂಮಿ ಅಭಿವೃದ್ಧಿಗೆ ಹಾಗೂ ನಗರದ ಪರಿಸರ ಸಂರಕ್ಷಗಾಗಿ ಸೂಕ್ತ ಯೋಜನೆ ರೂಪಿಸಬೇಕು ಎಂದು ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *