allahabad high court: ವಿವಾಹಿತ ವ್ಯಕ್ತಿಯ ಲಿವ್ ಇನ್ ಸಂಬಂಧ ಅಕ್ರಮವಲ್ಲ: ಅಲಹಾಬಾದ್‌ ಹೈಕೋರ್ಟ್‌ | Married Person S Live In Relationship Is Not A Crime Says Allahabad High Court Ruling Rav

ವಿವಾಹಿತ ಪುರುಷನೊಂದಿಗೆ ಮಹಿಳೆ ಒಪ್ಪಿತ ಲಿವ್‌-ಇನ್‌ ಸಂಬಂಧದಲ್ಲಿರುವುದು ಕಾನೂನಿನಡಿ ಅಪರಾಧವಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.. ರಕ್ಷಣೆ ಕೋರಿ ಬಂದಿದ್ದ ಜೋಡಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಾಮಾಜಿಕ ನೈತಿಕತೆಯು ವೈಯಕ್ತಿಕ ಹಕ್ಕು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದೆ.

ಪ್ರಯಾಗ್‌ರಾಜ್‌ (ಮಾ.28): ವಿವಾಹಿತ ಪುರುಷನು ಮಹಿಳೆಯೊಬ್ಬಳ ಜೊತೆ ಒಪ್ಪಿತ ಲಿವ್‌-ಇನ್‌ ಸಂಬಂಧದಲ್ಲಿರುವುದು ಕಾನೂನಿನಡಿಯಲ್ಲಿ ಅಪರಾಧವಲ್ಲ. ಸಾಮಾಜಿಕ ನೈತಿಕತೆಯು ವೈಯಕ್ತಿಕ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ವಿವಾಹಿತ ಪುರುಷ ಹಾಗೂ ಮಹಿಳೆ ಲಿವ್‌-ಇನ್‌ ಸಂಬಂಧದಲ್ಲಿದ್ದರು. ಆದರೆ ಮಹಿಳೆಯ ಕುಟುಂಬದಿಂದ ಜೋಡಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿದ್ದವು. ಹಾಗಾಗಿ ರಕ್ಷಣೆ ಕೋರಿ ಕೋರ್ಟ್‌ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜೆ.ಜೆ. ಮುನೀರ್‌ ಹಾಗೂ ನ್ಯಾ. ತರುಣ್‌ ಸಕ್ಸೇನಾ ಅವರಿದ್ದ ವಿಭಾಗೀಯ ಪೀಠ, ‘ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯ ಮೇರೆಗೆ ವಯಸ್ಕ ಮಹಿಳೆಯೊಂದಿಗೆ ಸಹಬಾಳ್ವೆ ನಡೆಸುವುದು ಅಪರಾಧವಲ್ಲ. ನೈತಿಕತೆ ಮತ್ತು ಕಾನೂನು ಎರಡೂ ಬೇರೆ ಬೇರೆ. ನಾಗರಿಕರ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವ ಕೋರ್ಟ್‌ನ ಕ್ರಮವನ್ನು ಸಾಮಾಜಿಕ ಅಭಿಪ್ರಾಯ ಮತ್ತು ನೈತಿಕತೆ ನಿಯಂತ್ರಿಸಲು ಸಾಧ್ಯವಿಲ್ಲ’ ಎಂದಿತು.

ಇದೇ ವೇಳೆ, ‘ಇಂಥ ಜೋಡಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ’ ಎಂದು ಅಭಿಪ್ರಾಯಪಟ್ಟ ಪೀಠ, ರಕ್ಷಣೆಗೆ ಕ್ರಮ ಕೈಗೊಳ್ಳದ ಪೊಲೀಸ್‌ ಮಹಾನಿರ್ದೇಶಕರ ವಿರುದ್ಧ ಗರಂ ಆಯಿತು. ಜೊತೆಗೆ, ಜೋಡಿಗೆ ತಕ್ಷಣ ರಕ್ಷಣೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸ್‌ ಜಾರಿ ಮಾಡಿತು.

Source link

Leave a Reply

Your email address will not be published. Required fields are marked *