Headlines

ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’

ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’


ಹತ್ತೇ ದಿನದಲ್ಲಿ 'ಕೆಜಿಎಫ್ 2' ಲೈಫ್ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ 'ಧುರಂಧರ 2'

‘ಧುರಂಧರ 2’ ಸಿನಿಮಾ (ಧುರಂಧರ 2 ಚಿತ್ರ) ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಸಿನಿಮಾ ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಗಳಿಸಿದೆ. ಇನ್ನು 10 ದಿನಕ್ಕೆ ‘ಕೆಜಿಎಫ್ 2’ ಲೈಫ್ ಟೈಮ್ ದಾಖಲೆಯನ್ನು ಬ್ರೇಕ್ ಮಾಡುವ ಎಲ್ಲಾ ಸೂಚನೆ ಸಿಕ್ಕಿದೆ. ಹೀಗೆಯೇ ಮುಂದುವರಿದರೆ ಸಿನಿಮಾ ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ.

‘ಧುರಂಧರ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್ ಪಾಲ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ 1,128 ಕೋಟಿ ರೂಪಾಯಿ ಗಳಿಸಿದೆ. ಇಂದು ಕಲೆಕ್ಷನ್ 100 ಕೋಟಿ ರೂಪಾಯಿ ದಾಟಲಿದೆ. ಹಾಗಾಗದಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಈ ಸಿನಿಮಾ 10 ದಿನದಲ್ಲಿ ಬ್ರೇಕ್ ಮಾಡಿದಂತೆ ಆಗಲಿದೆ.

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 1200 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಬಾಲಿವುಡ್ ನಲ್ಲೂ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಆ ದಾಖಲೆ ಕೇವಲ 10 ದಿನದಲ್ಲಿ ‘ಧುರಂಧರ 2’ ಉಡೀಸ್ ಮಾಡಿದೆ.

ಇದನ್ನೂ ಓದಿ: ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ

‘ಧುರಂಧರ 2’ ಸಿನಿಮಾ ಇಷ್ಟು ಅಬ್ಬರದ ಕಲೆಕ್ಷನ್ ಮಾಡಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ. ಹೌದು, ಸಿನಿಮಾ ಟಿಕೆಟ್ ದರವನ್ನು ತಂಡದವರು ಬೇಕಾಬಿಟ್ಟಿ ಏರಿಕೆ ಮಾಡಿದ್ದಾರೆ. ಕರ್ನಾಟಕದಲ್ಲಂತೂ ಮಲ್ಟಿಪ್ಲೆಕ್ಸ್‌ಗಳಲ್ಲಿ 400 ರೂಪಾಯಿಯಿಂದ ಟಿಕೆಟ್ ದರ ಆರಂಭಗೊಳ್ಳುತ್ತದೆ. ಇದು ಚಿತ್ರಕ್ಕೆ ಲಾಭ ತಂದಿದೆ. ಈ ಸಿನಿಮಾದಿಂದ ಜಿಯೋ ಪ್ರೊಡಕ್ಷನ್ಸ್ ದೊಡ್ಡ ಲಾಭ ಕಾಣುತ್ತಿದೆ. ಈ ಗಳಿಗೆ ಇನ್ನೂ ಕೆಲವು ವಾರ ಮುಂದುವರಿಯುವ ನಿರೀಕ್ಷೆ ಇದೆ. ಈ ಒಟ್ಟಾರೆ ಚಿತ್ರದ ಕಲೆಕ್ಷನ್ 2000 ಸಾವಿರ ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *