ಮುನ್ಸಿಪಲ್ ಬಾಂಡ್ ಮೂಲಕ ಪೂರ್ವ ಪಾಲಿಕೆಗೆ ₹200 ಕೋಟಿ ಸಂಗ್ರಹ ಗುರಿ- ಕಲ್ಯಾಣ ಕಾರ್ಯಕ್ರಮಗಳು ಯಾವುವು? | Greater Bengaluru East Zone Targets Rs 200 Crore Fundraising Via Municipal Bond

ಮುನ್ಸಿಪಲ್ ಬಾಂಡ್ ಮೂಲಕ ಪೂರ್ವ ಪಾಲಿಕೆಗೆ ₹200 ಕೋಟಿ ಸಂಗ್ರಹ ಗುರಿ- ಕಲ್ಯಾಣ ಕಾರ್ಯಕ್ರಮಗಳು ಯಾವುವು? | Greater Bengaluru East Zone Targets Rs 200 Crore Fundraising Via Municipal Bond



ಮುನ್ಸಿಪಲ್ ಬಾಂಡ್ ಮೂಲಕ ಪೂರ್ವ ಪಾಲಿಕೆಗೆ ₹200 ಕೋಟಿ ಸಂಗ್ರಹ ಗುರಿ- ಕಲ್ಯಾಣ ಕಾರ್ಯಕ್ರಮಗಳು ಯಾವುವು? | Greater Bengaluru East Zone Targets Rs 200 Crore Fundraising Via Municipal Bond

ಪೂರ್ವ ನಗರ ಪಾಲಿಕೆಯು ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ 3,354 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಅನುದಾನಗಳಿಂದ 534 ಕೋಟಿ ರು. ಆದಾಯ ನಿರೀಕ್ಷೆ

ಪೂರ್ವ ನಗರ ಪಾಲಿಕೆಯು ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ 3,354 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಅನುದಾನಗಳಿಂದ 534 ಕೋಟಿ ರು. ಆದಾಯ ನಿರೀಕ್ಷೆ.

ಒಟ್ಟಾರೆ 3,890 ಕೋಟಿ ರು. ಸ್ವೀಕೃತಿ, 3,889.98 ಕೋಟಿ ವೆಚ್ಚವನ್ನು ಪೂರ್ವ ಪಾಲಿಕೆ ಬಜೆಟ್ ಹೊಂದಿದೆ. ಗರಿಷ್ಠ ಆದಾಯ ಒಂದೂವರೆ ಸಾವಿರ ಕೋಟಿ ರು. ಆಸ್ತಿ ತೆರಿಗೆ ಮೂಲಕ ಸಂಗ್ರಹಿಸುವ ಬಹುದೊಡ್ಡ ಗುರಿ.

ಕಲ್ಯಾಣ ಕಾರ್ಯಕ್ರಮಗಳು ಯಾವುವು?

ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಜೆಟ್‌ನ ಶೇ.7ರಷ್ಟು ಅಂದರೆ 221 ಕೋಟಿ ಮೀಸಲು.- ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್,ವಿದೇಶಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ.- ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನೀಡುವ ಯೋಜನೆ ಜಾರಿ.- ವಿಶೇಷಚೇತನರಿಗೆ ಎಲೆಕ್ಟ್ರಿಕ್ ವೀಲ್‌ಚೇರ್ ಮತ್ತು ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ ವಿತರಣೆ.

ನೈರ್ಮಲೀಕರಣ ಮತ್ತು ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ-

ಕಸ ವಿಲೇವಾರಿ, ಸಂಗ್ರಹಣೆ ಮತ್ತು ಸ್ವಚ್ಛತಾ ಅಭಿವೃದ್ಧಿ ಕಾಮಗಾರಿಗಳಿಗೆ 2026-27ನೇ ಸಾಲಿನಲ್ಲಿ 300 ಕೋಟಿ ರು. ಮೀಸಲು. – ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಗ್ಲೌಸ್, ಮಾಸ್ಕ್ ಮತ್ತು ಶೂಗಳಿಗಾಗಿ 1.50 ಕೋಟಿ ರು. ಅನುದಾನ.- ಸ್ವಚ್ಛತಾ ಸಿಬ್ಬಂದಿಗೆ ವಿಶ್ರಾಂತಿ ಮತ್ತು ಸೌಲಭ್ಯ ಕೇಂದ್ರಗಳ ನಿರ್ಮಾಣಕ್ಕೆ 2 ಕೋಟಿ ರು.

ಸಾರ್ವಜನಿಕ ಕಾಮಗಾರಿ

– ಪಾಲಿಕೆ ವ್ಯಾಪ್ತಿಯ 50 ವಾರ್ಡ್‌ಗಳಲ್ಲಿ ರಸ್ತೆ ಮತ್ತು ಚರಂಡಿಗಳ ಸಮಗ್ರ ನಿರ್ವಹಣೆಗಾಗಿ 112.50 ಕೋಟಿ ರು. ಮೀಸಲು.- ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರವರೆಗಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ ಮೊತ್ತದ ಯೋಜನೆ – ಮುನಿಸಿಪಲ್ ಬಾಂಡ್ ಮೂಲಕ 50 ಕೋಟಿ ವೆಚ್ಚದಲ್ಲಿ ಆಲ್ಪೈನ್ ಇಕೋ ರಸ್ತೆ, 150 ಕೋಟಿ ವೆಚ್ಚದಲ್ಲಿ ವರ್ತೂರಿನಿಂದ ಗುಂಜೂರುವರೆಗೆ ಫ್ಲೈಓವರ್ – ಸೋಡಿಯಂ ವೇಪರ್ ದೀಪಗಳನ್ನು ಎಲ್‌ಇಡಿ ದೀಪಗಳಾಗಿ ಪರಿವರ್ತಿಸಲು 38 ಕೋಟಿ ರು. ಮೀಸಲು.

– ಪ್ರಮುಖ ರಸ್ತೆಗಳ ಜಂಕ್ಷನ್, ಸ್ಕೈವಾಕ್ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 50 ಕೋಟಿ ರು.

– ರೈಲ್ವೆ ಮೇಲ್ಸೆತುವೆ ಮತ್ತು ಕೆಳ ಸೇತುವೆ ನಿರ್ಮಾಣಕ್ಕಾಗಿ 25 ಕೋಟಿ ರು. ಮೀಸಲು.

– 100 ಕಿ.ಮೀ ಉದ್ದದ ಫುಟ್ಪಾತ್‌ ಅಭಿವೃದ್ಧಿ ಗುರಿ. ಹೊರವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್ ಉದ್ದಕ್ಕೂ (9 ಕಿ.ಮೀ) 160 ಕೋಟಿ ವೆಚ್ಚದಲ್ಲಿ ಫುಟ್ಪಾತ್‌

– 50 ವಾರ್ಡ್‌ಗಳ ರಸ್ತೆ ಮತ್ತು ಚರಂಡಿಗಳ ಸಮಗ್ರ ನಿರ್ವಹಣೆಗಾಗಿ 112.50 ಕೋಟಿ ರು.

ಕಂದಾಯ ವಿಭಾಗ

-1,500 ಕೋಟಿ ಆದಾಯ ಸಂಗ್ರಹ ಗುರಿ. ಆಸ್ತಿಗಳ ಮೌಲ್ಯಮಾಪನದಿಂದ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿ ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಗುರಿ ಸಾಧನೆ.

– ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ ಅಭಿಯಾನದ ಮೂಲಕ ವರ್ಷಕ್ಕೆ 225 ಕೋಟಿ ರು. ಹೆಚ್ಚುವರಿ ಆದಾಯ ಸಂಗ್ರಹ ಅಂದಾಜು.

– ಜಿ.ಐ.ಎಸ್ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಬೆಸ್ಕಾಂ,ಬಿಡಬ್ಲ್ಯುಎಸ್‌ಎಸ್‌ಬಿ ಸಂಸ್ಥೆಗಳೊಂದಿಗೆ ಏಕೀಕರಿಸಿ, ತೆರಿಗೆ ಪರಿಷ್ಕರಣೆಯಿಂದ ವರ್ಷಕ್ಕೆ 150 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ.

– ಸುಮಾರು 4.50 ಲಕ್ಷ ಕಾಗದದ ಖಾತೆಗಳ ಡಿಜಿಟಲೀಕರಣದಿಂದ ಇ-ಖಾತಾ ವ್ಯವಸ್ಥೆ. 1.30 ಲಕ್ಷ ಇ-ಖಾತೆಗಳು ವಿತರಣೆ. ಬಾಕಿ 3.20 ಲಕ್ಷ ಇ-ಖಾತೆ

ಜಾಹೀರಾತು ವಿಭಾಗ

– ಹಳೆಯ ಜಾಹೀರಾತು, ಎಲ್‌ಇಡಿ ಸ್ಕೈವಾಕ್, ಬಸ್ ಶೆಲ್ಟರ್ ಮತ್ತು ಅಂಡರ್‌ಪಾಸ್‌ ಮೂಲಕ 68 ಕೋಟಿ ಸಂಗ್ರಹ ಗುರಿ.

– ಹೊಸ ಸ್ಕೈವಾಕ್ ಅಭಿವೃದ್ಧಿಯಿಂದ ನೆಲ ಬಾಡಿಗೆ, ಜಾಹೀರಾತು ಶುಲ್ಕದ ರೂಪದಲ್ಲಿ 15 ಕೋಟಿ ಆದಾಯ ಸಂಗ್ರಹ ಗುರಿ.

– ಜಾಹೀರಾತು ಏಜೆನ್ಸಿ ಪರವಾನಗಿ ಮೂಲಕ 2.75 ಕೋಟಿ ರು. ಆದಾಯ ಸಂಗ್ರಹ ನಿರೀಕ್ಷೆ.

ನಗರ ಯೋಜನೆ

– ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್ ಪ್ರಮಾಣಪತ್ರ, ಸ್ವಾಧೀನಾನುಭವ ಪ್ರಮಾಣಪತ್ರ, ವಿವಿಧ ಶುಲ್ಕಗಳಿಂದ 982 ಕೋಟಿ ಆದಾಯ

– ನಂಬಿಕೆ ನಕ್ಷೆ ಯೋಜನೆಯಡಿ 375 ಚ.ಮೀ. ವರೆಗಿನ ವಸತಿ ಕಟ್ಟಡಗಳಿಗೆ 15 ದಿನಗಳಲ್ಲಿ ಸ್ವಯಂಚಾಲಿತ ಮಂಜೂರಾತಿ.- ಖಾಲಿ ನಿವೇಶನಗಳಿಗೂ ಆನ್‌ಲೈನ್ ಸಿಂಗಲ್ ಫ್ಲಾಟ್ ಅನುಮತಿ ವ್ಯವಸ್ಥೆ ಜಾರಿಯಲ್ಲಿದ್ದು, ಇದರಿಂದ 139 ಕೋಟಿ ಹೆಚ್ಚುವರಿ ಆದಾಯದ ಗುರಿ.

ಆಡಳಿತ

– ಪಾರದರ್ಶಕ ಆಡಳಿತಕ್ಕಾಗಿ ಬಿಇಸಿಸಿ ಸಾರ್ವಜನಿಕ ಡ್ಯಾಶ್‌ಬೋರ್ಡ್ ರಚನೆ. ವಾರ್ಡ್ ಮಟ್ಟದ ಯೋಜನೆ ಮಾಹಿತಿ ನಾಗರಿಕರಿಗೆ ಲಭ್ಯ.- ಪಾಲಿಕೆಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಪ್ರಥಮ ಹಂತದಲ್ಲಿ 25 ಕೋಟಿ ರು.

– ಆಡಳಿತ ಚುರುಕುಗೊಳಿಸುವ ತಂತ್ರಾಂಶ ಖರೀದಿಗೆ 6 ಕೋಟಿ, ಕಾನೂನು ವ್ಯವಹಾರಗಳ ನಿರ್ವಹಣೆಗೆ ₹4.50 ಕೋಟಿ ಮೀಸಲು.

ಬೃಹತ್ ನೀರುಗಾಲುವೆ (ರಾಜಕಾಲುವೆ) ಅಭಿವೃದ್ಧಿ

– ಮಹದೇವಪುರ ವಲಯದ 150 ಕಿ.ಮೀ ಕಾಲುವೆಗಳ ಪೈಕಿ 72 ಕಿ.ಮೀ ಮತ್ತು ಕೆ.ಆರ್.ಪುರ ವಲಯದ 75 ಕಿ.ಮೀ ಪೈಕಿ 52 ಕಿ.ಮೀ ಉದ್ದದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಪೂರ್ಣ.- ಒಟ್ಟು 58 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ 38 ಪ್ರದೇಶಗಳಲ್ಲಿ ಸಮಸ್ಯೆ ಪರಿಹಾರ. ಉಳಿದ 20 ಪ್ರದೇಶಗಳನ್ನು ಶೀಘ್ರದಲ್ಲೇ ಪ್ರವಾಹ ಮುಕ್ತಗೊಳಿಸುವ ಗುರಿ.- ಪಣತ್ತೂರು ರಾಜಕಾಲುವೆ ನಿರ್ಮಿಸುವ ಮೂಲಕ ಪ್ರವಾಹ ಸಮಸ್ಯೆ ಪರಿಹಾರ. ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯ.

ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ

– ಒಟ್ಟು 45 ಕೆರೆಗಳ ಪೈಕಿ 40 ಕೆರೆಗಳ ಅಭಿವೃದ್ಧಿ ಪೂರ್ಣ. ಉಳಿದ 5 ಕೆರೆಗಳು ಅಭಿವೃದ್ಧಿ ಗುರಿ.- ಕೆರೆಗಳ ವಾರ್ಷಿಕ ನಿರ್ವಹಣೆಗೆ 28 ಕೋಟಿ ರು., 10 ಕೆರೆಗಳ ಚೈನ್ ಲಿಂಕ್ ಬೇಲಿಗೆ 5 ಕೋಟಿ ರು., 4 ಕೆರೆ ವಿಶೇಷ ಅಭಿವೃದ್ಧಿಗೆ 25 ಕೋಟಿ ರು.

ತೋಟಗಾರಿಕೆ ಮತ್ತು ಹಸಿರು ಬೆಂಗಳೂರು

– ಉದ್ಯಾನವನ ಕಿರುಚಿತ್ರ, ಧಾರಾವಾಹಿ, ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆ ಮೂಲಕ ಬರುವ ಆದಾಯ ಅವುಗಳ ಅಭಿವೃದ್ಧಿಗೆ ಬಳಕೆ

– ಮಹದೇವಪುರ ಮತ್ತು ಕೆ.ಆರ್.ಪುರ ವಲಯದ 54 ಉದ್ಯಾನವನ ನಿರ್ವಹಣೆಗೆ 10 ಕೋಟಿ, ಅಭಿವೃದ್ಧಿಗೆ 17.50 ಕೋಟಿ ಅನುದಾನ.

ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ- ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ 15 ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 10 ನಮ್ಮ ಕ್ಲಿನಿಕ್‌ ಸ್ಥಾಪನೆಗೆ 35 ಕೋಟಿ ಮೀಸಲು.

– ಇಂದಿರಾ ಕ್ಯಾಂಟೀನ್‌ಗಳ ವಾರ್ಷಿಕ ನಿರ್ವಹಣೆಗೆ 5 ಕೋಟಿ ರು.

ಪಶುಪಾಲನೆ ಮತ್ತು ಪ್ರಾಣಿ ಕಲ್ಯಾಣ- ಬೀದಿನಾಯಿಗಳ ಆಶ್ರಯ ಕೇಂದ್ರ, ಆಹಾರ ಮತ್ತು ನಿರ್ವಹಣೆಗೆ 12 ಕೋಟಿ ರು.,ಸಂತಾನಹರಣ ಚಿಕಿತ್ಸೆಗಾಗಿ 6 ಕೋಟಿ ಮೀಸಲು.- ಪ್ರಾಣಿಗಳ ಚಿಕಿತ್ಸೆಗಾಗಿ 2 ಕೋಟಿ ವೆಚ್ಚದಲ್ಲಿ 2 ಪಶು ಆಸ್ಪತ್ರೆ, 50 ಲಕ್ಷ ರು. ವೆಚ್ಚದಲ್ಲಿ ಒಂದು ಸಂಚಾರಿ ಪಶುಚಿಕಿತ್ಸಾ ವಾಹನ ಆರಂಭ.



Source link

Leave a Reply

Your email address will not be published. Required fields are marked *