ಫೋಟೋ ತೆಗ್ದಿಲ್ಲ ಅಂದ್ರೇನೆ ಸಮಸ್ಯೆ; ಅಕ್ಷಯ್ ಕುಮಾರ್ ನೇರ ಮಾತು

ಫೋಟೋ ತೆಗ್ದಿಲ್ಲ ಅಂದ್ರೇನೆ ಸಮಸ್ಯೆ; ಅಕ್ಷಯ್ ಕುಮಾರ್ ನೇರ ಮಾತು


ಫೋಟೋ ತೆಗ್ದಿಲ್ಲ ಅಂದ್ರೇನೆ ಸಮಸ್ಯೆ; ಅಕ್ಷಯ್ ಕುಮಾರ್ ನೇರ ಮಾತು

ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲೂ ಪಾಪರಾಜಿ ಸಂಸ್ಕೃತಿ ಜೋರಾಗಿದೆ. ಸೆಲೆಬ್ರಿಟಿಗಳು ಎಲ್ಲೇ ಕಾಣಿಸಿಕೊಂಡರೂ ಫೋಟೋ ಕ್ಲಿಕ್ಕಿಸುತ್ತಾರೆ, ವಿಡಿಯೋ ಸೆರೆ ಹಿಡಿಯುವುದಿಲ್ಲ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚ ಆಯ್ಕೆ. ಈ ವಿಷಯ ಸಾಕಷ್ಟು ಚರ್ಚೆ ಆಗುತ್ತಿದೆ ಎಂದು ಹೇಳಬಹುದು. ಕೆಲವರು ಇದನ್ನು ವಿರೋಧಿಸಿದರೆ, ಇನ್ನೂ ಕೆಲವರು ಇದನ್ನು ಬೆಂಬಲಿಸುತ್ತಿದ್ದಾರೆ. ಹೀಗಿರುವಾಗಲೇ ಅಕ್ಷಯ್ ಕುಮಾರ್ ಅವರು ಈ ವಿಷಯವಾಗಿ ಮಾತನಾಡಿದ್ದಾರೆ. ಫೋಟೋ ತೆಗೆದಿಲ್ಲ ಅಂದ್ರೇನೆ ಸಮಸ್ಯೆ ಅಂತ ಅವರು ನೇರವಾಗಿ ಹೇಳಿದ್ದಾರೆ.

ಅಲ್ಲಿ ಜಯಾ ಬಚ್ಚನ್ ಸೇರಿದಂತೆ ಅನೇಕರು ಇದ್ದಾರೆ. ಅವರಿಗೆ ಪಾಪರಾಜಿಗಳನ್ನು ಕಂಡರೆ ಸಾಕು ಸಾಕಷ್ಟು ಕೋಪ ಬರುತ್ತದೆ. ಅವರು ಸಿಡಿದೇಳುತ್ತಾರೆ. ಆದರೆ, ಅಕ್ಷಯ್ ಕುಮಾರ್ ಅವರು ಆ ರೀತಿ ಅಲ್ಲ. ತಾವು ಸೆಲೆಬ್ರಿಟಿ ಎಂದು ಒಪ್ಪಿಕೊಂಡಿದ್ದು, ಫೋಟೋ ಕ್ಲಿಕ್ಕಿಸಿದರೆ ಯಾವುದೇ ಸಮಸ್ಯೆ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಾಂಗ್ಲಾ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

‘ನಾನು ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುತ್ತೇನೆ. ಕೆಲವೊಮ್ಮೆ ನನ್ನ ಮಕ್ಕಳು, ಪತ್ನಿ ಕೂಡ ಇರ್ತಾರೆ. ನನ್ನ ಫೋಟೋ ಕ್ಲಿಕ್ಕಿಸಿದ್ರೆ ಅವನಿಗೆ ದುಡ್ಡು ಸಿಗುತ್ತೆ. ಅವನಿಗೆ ದುಡ್ಡು ಸಿಗುತ್ತೆ ಅಂದ್ರೆ ಫೋಟೋ ಕ್ಲಿಕ್ಕಿಸಿಕೊಳ್ಳಲಿ. ತೊಂದರೆ ಏನಿದೆ’ ಎಂದು ಅಕ್ಷಯ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಇಂಡಿಯಾ ಟುಡೇ (@indiatoday) ಹಂಚಿಕೊಂಡ ಪೋಸ್ಟ್

‘ನನ್ನ ಫೋಟೋ ತೆಗೆದರೆ ಅವನ ಮನೆ ನಡೆಯುತ್ತೆ. ಆತ ಖುಷಿ ಪಡುತ್ತಾನೆ. ಖಾಸಗಿ ಅನ್ನೋದು ಎಲ್ಲಿದೆ? ಫೋಟೋ ತೆಗೆದಿಲ್ಲ ಅಂದ್ರೆನೆ ಸಮಸ್ಯೆ. ಆಗ ಯೋಚಿಸಬೇಕು. ಆಗ ಸಮಸ್ಯೆ ಬರುತ್ತದೆ. ನಾನು ಎಲ್ಲಾದರೂ ಬಂದಾಗ ಫೋಟೋ ಕ್ಲಿಕ್ಕಿಸಿ ಜನರೇ ಬಂದಿಲ್ಲ ಎಂದ್ರೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅವರು ಒಂದು ಕಾಲದಲ್ಲಿ ಸಾಕಷ್ಟು ಬೇಡಿಕೆಯ ಹೀರೋ ಆಗಿದ್ದರು. ಆದರೆ, ಇತ್ತೀಚೆಗೆ ಬೇಡಿಕೆ ಕಡಿಮೆಯಾಗಿದೆ. ಅವರ ‘ಭೂತ್ ಬಾಂಗ್ಲಾ 2’ ಸಿನಿಮಾ ರಿಲೀಸ್ ಆಗುವುದರಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *