IPL 2026 ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಡಬಲ್ ಶಾಕ್! ಇಬ್ಬರು ಸ್ಟಾರ್ ಬೌಲರ್‌ಗಳು ಮೊದಲ ಪಂದ್ಯದಿಂದ ಔಟ್

IPL 2026 ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಡಬಲ್ ಶಾಕ್! ಇಬ್ಬರು ಸ್ಟಾರ್ ಬೌಲರ್‌ಗಳು ಮೊದಲ ಪಂದ್ಯದಿಂದ ಔಟ್

IPL 2026 ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಡಬಲ್ ಶಾಕ್! ಇಬ್ಬರು ಸ್ಟಾರ್ ಬೌಲರ್‌ಗಳು ಮೊದಲ ಪಂದ್ಯದಿಂದ ಔಟ್

ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಈ ಪಂದ್ಯ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಬಲ್ ಶಾಕ್ ಎದುರಾಗಿದೆ.

ಐಪಿಎಲ್ 2026ರ ಕ್ರಿಕೆಟ್ ಹಬ್ಬಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ. ಆದರೆ, ಈ ಸೀಸನ್‌ನ ಮೊದಲ ಪಂದ್ಯದಲ್ಲೇ ಸೆಣಸಲಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಅನಿರೀಕ್ಷಿತ ಶಾಕ್ ಎದುರಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ಬೆಂಗಳೂರು ತಂಡದ ಬೌಲಿಂಗ್ ವಿಭಾಗ ಸಂಕಷ್ಟಕ್ಕೆ ಸಿಲುಕಿದೆ. ಇಬ್ಬರು ಪ್ರಮುಖ ವೇಗದ ಬೌಲರ್‌ಗಳು ಹೊರಗುಳಿದಿರುವುದು ನಾಯಕ ರಜತ್ ಪಾಟಿದಾರ್ ಅವರ ತಲೆನೋವನ್ನು ಹೆಚ್ಚಿಸಿದೆ.

ಆರ್‌ಸಿಬಿ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರ ಜೋಶ್ ಹೇಜಲ್‌ವುಡ್. ಈ ಆಸ್ಟ್ರೇಲಿಯಾದ ವೇಗಿ ತಂಡವನ್ನು ಸೇರಿಕೊಂಡಿದ್ದರೂ, ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಹೆಡ್ ಕೋಚ್ ಆಂಡಿ ಫ್ಲವರ್ ಸ್ಪಷ್ಟಪಡಿಸಿದ್ದಾರೆ. ಹೇಜಲ್‌ವುಡ್ ಅಲಭ್ಯತೆ ತಂಡದ ತಂತ್ರಗಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅದರಲ್ಲೂ ಎಂ. ಚಿನ್ನಸ್ವಾಮಿ ಸ್ಟೇಡಿಯಂನಂತಹ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಅವರ ಅನುಪಸ್ಥಿತಿ ಆರ್‌ಸಿಬಿಗೆ ದೊಡ್ಡ ನಷ್ಟವೇ ಸರಿ. ಪ್ರಶಸ್ತಿ ಉಳಿಸಿಕೊಳ್ಳಲು ಅವರು ಶೀಘ್ರದಲ್ಲೇ ತಂಡಕ್ಕೆ ಮರಳಬೇಕೆಂದು ಮ್ಯಾನೇಜ್‌ಮೆಂಟ್ ಬಯಸುತ್ತಿದೆ.

ಹೇಜಲ್‌ವುಡ್ ಅಲಭ್ಯರಾದ ಹಿನ್ನೆಲೆಯಲ್ಲಿ ಆರ್‌ಸಿಬಿ ಶ್ರೀಲಂಕಾದ ವೇಗಿ ನುವಾನ್ ತುಷಾರ ಮೇಲೆ ಭರವಸೆ ಇಟ್ಟಿತ್ತು. ಆದರೆ, ಅಲ್ಲೂ ನಿರಾಸೆ ಎದುರಾಗಿದೆ. ತುಷಾರ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ (SLC) ಅವರಿಗೆ ಇನ್ನೂ ನಿರಾಕ್ಷೇಪಣಾ ಪತ್ರ (NOC) ಸಿಕ್ಕಿಲ್ಲ. ಇದರಿಂದಾಗಿ ಅವರು ಕೂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿಯಬೇಕಾಗಿದೆ. ಕಳೆದ ವರ್ಷ ಯಶ್ ದಯಾಳ್ ಅವರಂತಹ ಬೌಲರ್‌ಗಳು ತಂಡವನ್ನು ತೊರೆದಿದ್ದು, ಈಗಿನ ಪರಿಸ್ಥಿತಿಯಲ್ಲಿ ಆರ್‌ಸಿಬಿ ಬೌಲಿಂಗ್ ಲೈನ್-ಅಪ್ ಸ್ವಲ್ಪ ದುರ್ಬಲವಾಗಿ ಕಾಣುತ್ತಿದೆ.

ಸ್ಟಾರ್ ಬೌಲರ್‌ಗಳು ದೂರವಾದ ಕಾರಣ, ಕಿವೀಸ್ ವೇಗಿ ಜೇಕ್ ಡಫಿ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಡಫಿ ಇದುವರೆಗೆ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಅವರೊಂದಿಗೆ ಮಧ್ಯಪ್ರದೇಶದ ಯುವ ವೇಗಿ ಮಂಗೇಶ್ ಯಾದವ್ ಕೂಡ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಕಳೆದ ಮಿನಿ ಹರಾಜಿನಲ್ಲಿ ಆರ್‌ಸಿಬಿ ಮಂಗೇಶ್ ಅವರನ್ನು 5.20 ಕೋಟಿ ರೂ.ಗೆ ಖರೀದಿಸಿತ್ತು. ದೇಶೀಯ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಾಟಿದಾರ್ ನಾಯಕತ್ವದಲ್ಲಿ ಮಂಗೇಶ್ ಅದ್ಭುತ ಪ್ರದರ್ಶನ ನೀಡಿದ್ದರು. ಎಡಗೈ ವೇಗಿಯಾಗಿರುವುದರಿಂದ, ಅವರು ಯಶ್ ದಯಾಳ್‌ಗೆ ಸರಿಯಾದ ಬದಲಿ ಆಟಗಾರ ಎಂದು ಪರಿಗಣಿಸಲಾಗಿದೆ.

ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಆರ್‌ಸಿಬಿಗೆ ನಾಯಕನಾಗಿ ರಜತ್ ಪಾಟಿದಾರ್‌ಗೆ ಇದು ಮೊದಲ ಸವಾಲಾಗಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಅವರಂತಹ ಸ್ಟಾರ್ ಬ್ಯಾಟರ್‌ಗಳಿದ್ದರೂ, ಅನುಭವವಿಲ್ಲದ ಬೌಲರ್‌ಗಳೊಂದಿಗೆ ಸನ್‌ರೈಸರ್ಸ್‌ನಂತಹ ಬಲಿಷ್ಠ ತಂಡವನ್ನು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಅದರಲ್ಲೂ ಎಸ್‌ಆರ್‌ಎಚ್ ತಂಡದಲ್ಲಿ ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್ ಅವರಂತಹ ಸ್ಫೋಟಕ ಬ್ಯಾಟರ್‌ಗಳಿದ್ದು, ಆರ್‌ಸಿಬಿ ಬೌಲರ್‌ಗಳಿಗೆ ಕಠಿಣ ಪರೀಕ್ಷೆ ಎದುರಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೇಕ್ ಡಫಿ, ಮಂಗೇಶ್ ಯಾದವ್.

ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅನಿಕೇತ್ ವರ್ಮಾ, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್, ಕಮಿಂದು ಮೆಂಡಿಸ್, ಬ್ರೈಡನ್ ಕಾರ್ಸ್, ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ.

ಇಂಪ್ಯಾಕ್ಟ್ ಪ್ಲೇಯರ್: ಶಿವಂ ಮಾವಿ

Source link

Leave a Reply

Your email address will not be published. Required fields are marked *