
ವಯಾಗ್ರಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಇದನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ಇದು ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾಗುವ ಮಾತ್ರೆಗಳಲ್ಲಿ ಒಂದು. ಆದರೆ, ಈ ವಯಾಗ್ರಾವನ್ನು ಮೂಲತಃ ಯಾವ ಉದ್ದೇಶಕ್ಕಾಗಿ ಕಂಡುಹಿಡಿಯಲಾಗಿತ್ತು ಗೊತ್ತಾ?<img>ಅಂದುಕೊಂಡಿದ್ದು ಒಂದು, ಆಗಿದ್ದೇ ಇನ್ನೊಂದು. ವಯಾಗ್ರಾ ಮಾತ್ರೆಯನ್ನು ಮೊದಲು ಬೇರೆಯೇ ಉದ್ದೇಶಕ್ಕೆ ತಯಾರಿಸಲಾಗಿತ್ತು, ಆದರೆ ಈಗ ಅದು ಪುರುಷರ ಲೈಂಗಿಕ ಸಾಮರ್ಥ್ಯಕ್ಕಾಗಿ ಬಳಕೆಯಾಗುತ್ತಿದೆ. ಇದರ ಹೆಸರು ಹೇಳಲು ಅನೇಕರು ನಾಚಿಕೆಪಡುತ್ತಾರೆ. ಆದರೆ, ದೊಡ್ಡ ಅಡ್ಡಪರಿಣಾಮಗಳು ಇಲ್ಲದ ಕಾರಣ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಅಂತಿಮವಾಗಿ ಇದು ಲೈಂಗಿಕ ಸಮಸ್ಯೆಗಳ ನಿವಾರಣೆಗೆ ನೆರವಾಗಿ, ಒಂದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಯಿತು. ಅಸಲಿಗೆ ಇದನ್ನು ಯಾವ ಕಾರಣಕ್ಕೆ ಕಂಡುಹಿಡಿದರು ಗೊತ್ತಾ?<img>1980ರ ದಶಕದ ಕೊನೆಯಲ್ಲಿ, ಫೈಝರ್ (Pfizer) ಎಂಬ ಫಾರ್ಮಾ ಕಂಪನಿಯ ವಿಜ್ಞಾನಿಗಳು ‘ಸಿಲ್ಡೆನಾಫಿಲ್’ (Sildenafil) ಎಂಬ ಹೊಸ ರಾಸಾಯನಿಕವನ್ನು ಕಂಡುಹಿಡಿದರು. ಇದನ್ನು ಮೂಲತಃ ‘ಆಂಜೈನಾ’ (Angina) ಎಂಬ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿತ್ತು. ಆಂಜೈನಾ ಎಂದರೆ, ಹೃದಯಕ್ಕೆ ರಕ್ತ ಸಂಚಾರ ಸರಿಯಾಗಿ ಆಗದ ಕಾರಣ ಬರುವ ತೀವ್ರ ಎದೆನೋವು. ಈ ಮಾತ್ರೆಯ ಉದ್ದೇಶ ರಕ್ತನಾಳಗಳನ್ನು ಹಿಗ್ಗಿಸಿ, ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುವುದಾಗಿತ್ತು. ಆದರೆ 1990ರ ದಶಕದ ಆರಂಭದಲ್ಲಿ ಬ್ರಿಟನ್‌ನ ಸ್ವಾನ್ಸೀ ಆಸ್ಪತ್ರೆಯಲ್ಲಿ (Swansea Hospital) ಇದರ ಕ್ಲಿನಿಕಲ್ ಟ್ರಯಲ್ಸ್ ನಡೆಸಲಾಯಿತು. ಆದರೆ, ವಿಜ್ಞಾನಿಗಳು ನಿರೀಕ್ಷಿಸಿದ ಮಟ್ಟದಲ್ಲಿ ಈ ಮಾತ್ರೆ ಹೃದಯದ ಕಾಯಿಲೆಗಳ ಮೇಲೆ ಪ್ರಭಾವ ಬೀರಲಿಲ್ಲ. ಅಂದರೆ, ಪ್ರಯೋಗ ವಿಫಲವಾಯಿತು.<img>ಪ್ರಯೋಗದಲ್ಲಿ ಭಾಗವಹಿಸಿದ್ದ ಪುರುಷರಲ್ಲಿ ಒಂದು ವಿಚಿತ್ರ ಬದಲಾವಣೆ ಕಂಡುಬಂತು. ಈ ಮಾತ್ರೆ ತೆಗೆದುಕೊಂಡ ನಂತರ ಅವರಲ್ಲಿ ಲೈಂಗಿಕ ಸಾಮರ್ಥ್ಯ ಅನಿರೀಕ್ಷಿತವಾಗಿ ಹೆಚ್ಚಾಯಿತು. ಅಷ್ಟೇ ಅಲ್ಲದೆ, ನಿಮಿರುವಿಕೆಯ ದೌರ್ಬಲ್ಯದ ಸಮಸ್ಯೆಗಳು ಕಡಿಮೆಯಾಗುವುದನ್ನು ಅವರು ಗಮನಿಸಿದರು. ವಿಜ್ಞಾನಿಗಳು ಮೊದಲು ಇದನ್ನು ಕೇವಲ ಒಂದು ಅಡ್ಡಪರಿಣಾಮ ಎಂದು ಭಾವಿಸಿದ್ದರು. ಆದರೆ ಇದೇ ಅಡ್ಡಪರಿಣಾಮ ಒಂದು ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.<img>ಕೊನೆಗೆ ವಿಜ್ಞಾನಿಗಳು ತಮ್ಮ ಸಂಶೋಧನೆಯ ದಿಕ್ಕನ್ನೇ ಬದಲಾಯಿಸಿದರು. ಹೃದಯದ ಕಾಯಿಲೆಗೆ ವಿಫಲವಾದ ಈ ಮಾತ್ರೆ, ನಿಮಿರುವಿಕೆಯ ದೌರ್ಬಲ್ಯದ ಸಮಸ್ಯೆಗೆ ಪರಿಹಾರ ಎಂಬುದನ್ನು ಅವರು ಕಂಡುಕೊಂಡರು. ಇದು ಜನನಾಂಗಗಳ ಬಳಿ ರಕ್ತ ಸಂಚಾರವನ್ನು ವಿಪರೀತವಾಗಿ ಹೆಚ್ಚಿಸಿತು. ಇದರ ಪರಿಣಾಮವಾಗಿ, 1998ರಲ್ಲಿ ಅಮೆರಿಕದ ಎಫ್‌ಡಿಎ (Food and Drug Administration) ಇದನ್ನು ಲೈಂಗಿಕ ಸಮಸ್ಯೆಗಳ ಚಿಕಿತ್ಸೆಯ ಔಷಧಿಯಾಗಿ ಅನುಮೋದಿಸಿತು.<img>ಈ ವಯಾಗ್ರಾ ಕೇವಲ ಪುರುಷರಿಗೆ ಮಾತ್ರವಲ್ಲ, ಶ್ವಾಸಕೋಶದ ಅಧಿಕ ರಕ್ತದೊತ್ತಡದ (Pulmonary Hypertension) ಚಿಕಿತ್ಸೆಯಲ್ಲೂ ಇದನ್ನು ಬಳಸುತ್ತಾರೆ. ಆದರೆ, ಮಹಿಳೆಯರ ಮೇಲೆ ಇದರ ಪರಿಣಾಮದ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ವೈದ್ಯರ ಸಲಹೆ ಇಲ್ಲದೆ ಇದನ್ನು ಬಳಸುವುದು ಅತ್ಯಂತ ಅಪಾಯಕಾರಿ. ಅದರಲ್ಲೂ ಹೃದಯದ ಕಾಯಿಲೆ ಇರುವವರು ಮತ್ತು ರಕ್ತದೊತ್ತಡಕ್ಕೆ (BP) ಮಾತ್ರೆ ತೆಗೆದುಕೊಳ್ಳುವವರು ಇದರಿಂದ ದೂರವಿರಬೇಕು.
Source link
Viagra History: ವಯಾಗ್ರಾವನ್ನು ಕಂಡುಹಿಡಿದಿದ್ದು ಯಾವುದಕ್ಕೆ ಗೊತ್ತಾ? ಅಸಲಿ ಕಥೆ ಬೇರೇನೇ ಇದೆ!