Headlines

Viral: ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್; ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ

Viral: ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್; ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ


ವೈರಲ್: ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್; ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ

ಮರ್ಯಾದಾ ಪುರುಷ, ಪುರುಷೋತ್ತಮ ಭಗವಾನ್ ಶ್ರೀ ರಾಮನ (ಶ್ರೀ ರಾಮ) ಜನ್ಮದಿನವನ್ನು ದೇಶದೆಲ್ಲೆಡೆ ಶ್ರದ್ಧಾಭಕ್ರಿಯಿಂದ ಆಚರಿಸಲಾಗಿದೆ. ಹಿಂದೂಗಳಿಗೆ ಯುಗಾದಿ (ಯುಗಾದಿ ಹಬ್ಬ) ವರುಷದ ಮೊದಲ ಹಬ್ಬವಾದರೆ, ತದನಂತರ ಬರುವುದೇ ಈ ರಾಮನವಮಿ (ರಾಮ ನವಮಿ). ಈ ಹಬ್ಬದಂದು ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬ ರೈತನು ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ಸಂಭ್ರಮಿಸಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ನಂದಿನಿ ವೆಂಕಟಾದ್ರಿ (ನಂದಿನಿ ವೆಂಕಟಾದ್ರಿ) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಯುವ ರೈತನೊಬ್ಬ ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ವಿಭಿನ್ನವಾಗಿ ಆಚರಿಸುವುದನ್ನು ಕಾಣಬಹುದು. ಹೊಲದಲ್ಲಿ ಹೂಕೋಸಿನ ರಾಶಿಯನ್ನು ಕಾಣಬಹುದು. ಮೂವರು ಮಹಿಳೆಯರು ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಯುವ ರೈತನೊಬ್ಬ ಹೂಕೋಸನ್ನು ಜೋಡಿಸಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿ ಅದರ ಪಕ್ಕ ಕುಳಿತಿರುವುದನ್ನು ನೀವು ನೋಡಬಹುದು.

ಪೋಸ್ಟ್ ವೈರಲ್ ಇಲ್ಲಿದೆ

ಇದನ್ನೂ ಓದಿ: ಮಾಡಿದ್ದುಣ್ಣೋ ಮಹಾರಾಯ, ಹೋಳಿ ಆಚರಿಸುತ್ತಿದ್ದವರ ಮೇಲೆ ಕಸ ಸುರಿಯಲು ಹೋಗಿ ಏನಾಯ್ತು ನೋಡಿ

ಮಾರ್ಚ್ 27 ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ನಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ, ಆದ್ದರಿಂದ ಇದು ನೈಸರ್ಗಿಕ ಹೂವಿನ ಗೌರವವಾದ ಹೂಕೋಸು ಮೂಲಕ ಭಕ್ತಿಯನ್ನು ವ್ಯಕ್ತಪಡಿಸುವ ಅತ್ಯಂತ ವಿಶಿಷ್ಟವಾದ ಮಾರ್ಗವಾಗಿದೆ ಭಾವನೆ. ಇತರರು, ಇದು ತುಂಬಾ ಸುಂದರ ಹಾಗೂ ಹೃದಯ ಸ್ಪರ್ಶಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಜೈ ಶ್ರೀರಾಮ್ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *