ಸನ್ನಾ ಬುರ್ಲಿ ಅವರು ಸಮರ್ಥ್ ಚೆನ್ನಗಿರಿ ಜೊತೆ ವಿವಾಹ ಆಗಿದ್ದಾರೆ. ಅವರ ವಿವಾಹದ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿವೆ.
ಸಂಜನಾ ಬುರ್ಲಿ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ‘ಕಲರ್ಸ್ ಕನ್ನಡ’ಕ್ಕೆ ಬಂದರು.
ಸಂಜನಾ ಬುರ್ಲಿ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ವಿವಾಹದ ಕಾರಣದಿಂದ ಅವರು ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು.
ಈಗ ಸಂಜನಾ ಬುರ್ಲಿ ಅವರು ಸಮರ್ಥ ಚೆನ್ನಗಿರಿ ಅವರನ್ನು ಮದುವೆ ಆಗಿದ್ದಾರೆ. ಅವರು ತಾಳಿ ಕಟ್ಟುವ ಸಂದರ್ಭದ ಫೋಟೋಗಳು ಗಮನ ಸೆಳೆದಿವೆ. ನಟಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಸಂಜನಾ ಮದುವೆ ಖಾಸಗಿ ರೆಸಾರ್ಟ್ ಅಲ್ಲಿ ನಡೆದಿದೆ. ವಿವಾಹದ ಸಂದರ್ಭದಲ್ಲಿ ಸಮರ್ಥ್ -ಸಂಜನಾ ಖುಷಿಯಿಂದ ಇಬ್ಬರು.
ವಿವಾಹ ಆದ ಬಳಿಕ ಸಮರ್ಥ್ ಚೆನ್ನಗಿರಿ ಅವರು ಸಂಜನಾ ಬುರ್ಲಿ ಹಣೆಗೆ ತಿಲಕ ಇಟ್ಟರು. ಆ ಸಂದರ್ಭದ ಫೋಟೋ ಇದು.
ಸಂಜನಾ ಅವರಿಗೆ ಸಮರ್ಥ್ ಅವರು ಅರುಂಧತಿ ನಕ್ಷತ್ರ ತೋರಿಸಿದರು. ಈ ಫೋಟೋ ಗಮನ ಸೆಳೆದಿದೆ.






