Headlines

Bagalkote Bypolls: ಮೇಟಿ ಸಾಹೇಬರ ಜನಪರ ಕಾರ್ಯ ನೋಡಿ ಮತ ಕೊಡಿ: ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ | Bagalkot By Election Massive Campaign For Congress Candidate Umesh Meti Rav

Bagalkote Bypolls: ಮೇಟಿ ಸಾಹೇಬರ ಜನಪರ ಕಾರ್ಯ ನೋಡಿ ಮತ ಕೊಡಿ: ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ | Bagalkot By Election Massive Campaign For Congress Candidate Umesh Meti Rav



Bagalkote Bypolls: ಮೇಟಿ ಸಾಹೇಬರ ಜನಪರ ಕಾರ್ಯ ನೋಡಿ ಮತ ಕೊಡಿ: ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ | Bagalkot By Election Massive Campaign For Congress Candidate Umesh Meti Rav

ಬಾಗಲಕೋಟೆಯ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಭರ್ಜರಿ ಪ್ರಚಾರ ನಡೆಸಲಾಯಿತು. ಮಾಜಿ ಸಚಿವ ಅಜಯಕುಮಾರ್ ಸರನಾಯಕ ಹಾಗೂ ಸಚಿವ ಆರ್.ಬಿ. ತಿಮ್ಮಾಪೂರ ಸರ್ಕಾರದ ಗ್ಯಾರಂಟಿ ಯೋಜನೆ ಮುಂದಿಟ್ಟು ಮತಯಾಚಿಸಿದರು. ಈ ಸಂದರ್ಭ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಾಗಲಕೋಟೆ (ಮಾ.28): ಬಾಗಲಕೋಟೆ ನಗರದ ಅಂಬೇಡ್ಕರ್ ನಗರ, ಜಾಡಗೇರ ಗಲ್ಲಿ, ಹಳಪೇಟೆ, ವಿದ್ಯಾಗಿರಿ ಹಾಗೂ ನವನಗರದ 2,3, 12ನೇ ಸೆಕ್ಟರ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರ ಪ್ರಚಾರ ಕೈಗೊಳ್ಳಲಾಯಿತು.

ಮಾಜಿ ಸಚಿವ ಅಜಯಕುಮಾರ್ ಸರನಾಯಕ ಮಾತನಾಡಿ, ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶದಲ್ಲೇ ಮಾದರಿಯಾಗಿವೆ. ದಿ.ಎಚ್.ವೈ. ಮೇಟಿ ಅವರ ಜನಪರ ಕಾರ್ಯಗಳನ್ನು ಗಮನಿಸಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ ಹದ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಮತಯಾಚಿಸಿದರು.

ಸಂತೋಷ ಹೊಕ್ರಾಣಿ, ಶಿವಕುಮಾರ ನಂದಿಕೋಲಮಠ, ಅಬ್ದುಲ್‌ರಜಾಕ್ ಬೇನೂರ, ಅಕ್ಬರ್ ಮುಲ್ಲಾ, ಜಾಫರ್ ಬೇಪಾರಿ, ಪ್ರೇಮಾಗರಸಂಗಿ, ಇಬ್ರಾಹಿಂ ಕಲಾದಗಿ, ಅಯೂಬಖಾನ್ಪುಣೇಕರ್, ಶ್ರೀನಿವಾಸ ಬಳ್ಳಾರಿ, ಗೋವಿಂದ ಬಳ್ಳಾರಿ, ಹಣಮಂತರಾಕುಂಪಿ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಮಮತಾ ಸುತಾರ, ಸುಧಾ ಪಾಟೀಲ, ಭರಮು ಪೂಜಾರಿ, ಭರತ ಈಟಿ, ವೀರೇಶ ಹುಂಡೇಕಾರ, ಖಾಜಿಸಾಬ್ದಂಡೀನ್‌, ಲಕ್ಷ್ಮೀ ಚೌಹಾಣ್, ಚೆನ್ನವೀರ ಅಂಗಡಿ, ಲಕ್ಷ್ಮಣ ಮುಚಖಂಡಿ, ಖಾಜಾಸಾಬ್ ಹೊನ್ಯಾಳ, ವಿಜಯಕಮತಗಿ, ಕಲ್ಪನಾ ಮೇಟಿ, ಅನ್ನಪೂರ್ಣಾ ಗೂಗುಹಾಳ, ಗುಣವಂತಿ ನಿಡೋಣಿ, ನಾಗಮಲ್ಲೇಶ್ವರಿ, ಸಂಜೀವ ವಾಡಕರ, ಬಸವರಾಜ ಅಂಬಿಗೇರ, ಮಂಜು ಮುಚಖಂಡಿ, ಅಭಿಷೇಕ ತಳ್ಳಿಕೇರಿ, ರಮೇಶ ಪಡಸಲಗಿ, ಪ್ರೇಮಾ ರಾಠೋಡ ಇತರರು ಇದ್ದರು.

ಪಕ್ಷ ಸೇರ್ಪಡೆ:

ಬಾಗಲಕೋಟೆ ನಗರದ ಕಿಲ್ಲಾ ಭಾಗದಲ್ಲಿ ಬಸವರಾಜ ಕೆಂಚಣ್ಣವರ, ಬಿಲ್‌ ಕೆರೂರ ಗ್ರಾಮದಲ್ಲಿ ಗಜಾನನ ಯುವಕ ಮಂಡಳಿ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಪಿಕೆಪಿಎಸ್ ಮಾಜಿ ಅಧ್ಯಕ್ಷ ದಾವಲಸಾಬ್ ಹಲಬರ, ಅಮೀನಸಾಬ್ ಹಲಬರ, ಸಾಬಣ್ಣ ನದಾಫ್, ಪೀರ್ಸಾಬ್ ನದಾಫ್, ಹುಸೇನ್‌ ಬಾಷಾ ಶಿರೂರ, ಸೈಯದ್ ಚೊಳಚಗುಡ್ಡ, ರಿಯಾಜ್ ಬಿಲಕೇರಿ, ರಾಜೇಸಾಬ್ ಸಂಗಮದ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು.ಬೆಣ್ಣೂರ ಗ್ರಾಮದಲ್ಲಿ ಆನಂದ ಬೀಳಗಿ, ಈರಣ್ಣ ಬೀಳಗಿ, ಲಕ್ಕಪ್ಪ ಕೋಳಮಲಿ, ಯಲ್ಲಪ್ಪ ಕೋಳಮಲಿ, ಚಂದ್ರಪ್ಪ ಕೋಳಮಲಿ, ಅಲ್ಲಪ್ಪ ತೋಟಗೇರ ಕಾಂಗ್ರೆಸ್ ಸೇರ್ಪಡೆಯಾದರು.\B

ಸ್ಥಳೀಯ ಮುಖಂಡರೊಂದಿಗೆ ಮುಚಖಂಡಿ, ನೀರಲಕೇರಿ, ಬೇವಿನಮಟ್ಟಿ, ಹೊನ್ನಾಕಟ್ಟಿ, ಕಮತಗಿ, ರಾಮತಾಳ, ಅಮೀನಗಡ ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ.ಗ್ಯಾರಂಟಿ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿರುವಗ್ರಾಮಸ್ಥರು ಮತ್ತೊಮ್ಮೆಕಾಂಗ್ರೆಸ್ ಬೆಂಬಲಿಸಲಿದ್ದಾರೆ.

– ರಾಹುಲ್‌ ಸತೀಶ ಜಾರಕಿಹೊಳಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ\B



Source link

Leave a Reply

Your email address will not be published. Required fields are marked *