
ಬೆಂಗಳೂರು, ಮಾರ್ಚ್ 28: ಐಪಿಎಲ್ ಮ್ಯಾಚ್ಗಳ ಟಿಕೆಟ್ (ಐಪಿಎಲ್ ಟಿಕೆಟ್) ವಿಚಾರವಾಗಿ ಸದನದಲ್ಲಿ ನಡೆದ ಚರ್ಚೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮಗೆ ಐಪಿಎಲ್ ಟಿಕೆಟ್‌ಗಳನ್ನು ನೀಡದಕ್ಕೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ, ತಥಾಸ್ತು ಎಂದಿದೆ. ಸದನದಲ್ಲಿ ಚರ್ಚೆಯಾಗಿ ಕೇವಲ 24 ಗಂಟೆಗಳಲ್ಲಿ ಈ ರೀತಿಯ ಸ್ಪಂದನೆ ದೊರೆತಿರುವುದು ವಿವಾದವಾಗಿದೆ. ಆದರೆ ಈ ಎಲ್ಲಾ ಜಟಾಪಟಿ ನಡುವೆ ಎಂಎಲ್ಎ ಸುರೇಶ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಿಕೆಟ್ ನಿರಾಕರಿಸಿದ್ದಾರೆ.
ಟಿಕೆಟ್ ಬೇಡವೆಂದು ಫೆಸ್ಬುಕ್ ಪೋಸ್ಟ್ ಹಂಚಿಕೊಂಡ ಶಾಸಕ
ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ ಐಪಿಎಲ್ ಟಿಕೆಟ್ ಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಕೆಎಸ್‌ಎಸ್‌ಎ ನಿನ್ನೆ (ಮಾರ್ಚ್ 27) ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 2+1 ಒಟ್ಟು 3 ಟಿಕೆಟ್ ನೀಡಿ ಕೆಎಸ್‌ಸಿಎ ಒಪ್ಪಿಕೊಂಡಿದೆ. ಸದ್ಯಕ್ಕೆ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆಎಸ್‌ಸಿಎ, ಮುಂದಿನ ಐಪಿಎಲ್ ಪಂದ್ಯಕ್ಕೆ 5 ಟಿಕೆಟ್ ಬಗ್ಗೆ ಒಬ್ಬ ವ್ಯಕ್ತಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಇದೆಲ್ಲದರ ನಡುವೆ ವಿಜಯೇಂದ್ರ ಟಿಕೆಟ್ ನಿರಾಕರಿಸಿಲ್ಲ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಕೂಡ ತಮ್ಮ ಸಾಮಾಜಿಕ ಜಾಲತಾನದ ಪೋಸ್ಟ್ ಮೂಲಕ ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ 24 ಗಂಟೆಯಲ್ಲೇ ಬಗೆಹರಿದ ಶಾಸಕರ IPL ಟಿಕೆಟ್ ಜ್ವಲಂತ ಸಮಸ್ಯೆ, ಒಬ್ಬರಿಗೆ ಎಷ್ಟು ಗೊತ್ತಾ?
ಪೋಸ್ಟ್ ನಲ್ಲೇನಿದೆ?
ಶಾಸಕರು ಐಪಿಎಲ್ ಟಿಕೆಟ್ ಸ್ವೀಕರಿಸುವುದನ್ನು ಖಂಡಿಸಿರುವ ಸುರೇಶ್ ಕುಮಾರ್ , ಮಾಧ್ಯಮಗಳಲ್ಲಿ ಸುದ್ದಿಯಾಗಿರುವ ಪ್ರತಿಯೊಬ್ಬ ಶಾಸಕರಿಗೆ ಎರಡು ಟಿಕೆಟ್ ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್ ನೀಡುವ ವಿಷಯಕ್ಕೆ ತಮ್ಮ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ ಎಂದ ಶಾಸಕ, ವಿಧಾನಸಭೆಯಲ್ಲಿ ಚರ್ಚೆ 24 ಗಂಟೆಗಳಲ್ಲಿ ಸರ್ಕಾರ ತಕ್ಷಣ ಘೋಷಣೆ ಮಾಡಿರುವುದು ಆಶ್ಚರ್ಯಕರ. ಜನಪ್ರತಿನಿಧಿಗಳ ವಿಷಯ ಬಂದಾಗ ಮಾತ್ರ ಕಾರ್ಯ ಕೈಗೊಳ್ಳುವುದರಿಂದ ಸಾರ್ವಜನಿಕ ನಂಬಿಕೆಗೆ ಹೊಣೆ ಬರುತ್ತದೆ. ಆ ಟಿಕೆಟ್ ಅಥವಾ ಪಾಸ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತೇನೆ. ವಿಐಪಿ ಸಂಸ್ಕೃತಿ ಮುಂದುವರಿದಂತೆ ರಾಜಕಾರಣಿಗಳು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ