Headlines

‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ


'ಜನ ನಾಯಕನ್' ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ 'ಟಾಕ್ಸಿಕ್' ಮೇಲೆ

‘ಜನ ನಾಯಕ’ (ಜನ ನಾಯಕ) ಸಿನಿಮಾಕ್ಕೆ ಬಂದಿರುವ ಪರಿಸ್ಥಿತಿ ಬಲು ಶೋಚನೀಯವಾಗಿದೆ, ರಾಜಕೀಯ ಹೇಗಿದೆ ಸಿನಿಮಾರಂಗವನ್ನು, ಸಿನಿಮಾವನ್ನು ನಿಯಂತ್ರಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಒಂದೆಡೆ ಘೋರಾತಿ ಹಿಂಸೆ ಇರುವ ಸಿನಿಮಾಗಳಿಗೆ ಸುಲಭವಾಗಿ ಸೆನ್ಸಾರ್ ಸಿಕ್ಕು ಬಿಡುಗಡೆ ಆಗುತ್ತಿದೆ, ‘ಜನ ನಾಯಕನ್’ ಸಿನಿಮಾದ ತಿಂಗಳುಗಳ ಕಾಲ ಕ್ಷುಲ್ಲಕ ಕಾರಣಗಳನ್ನು ನೀಡಿ ತಡೆ ಹಿಡಿಯಿರಿ. ‘ಜನ ನಾಯಕನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಬಹುದು, ಸಿನಿಮಾ ಬಿಡುಗಡೆ ಆದರೆ ಅವರಿಗೆ ರಾಜಕೀಯವಾಗಿ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಸಿನಿಮಾವನ್ನು ರಾಜಕೀಯವಾಗಿ ಬಳಸಿ ತಡೆ ಹಿಡಿದಿರುವುದು ಸ್ಪಷ್ಟವಾಗಿದೆ. ಆದರೆ ಇದರಿಂದ ಬೇಸತ್ತಿರುವ ನಿರ್ಮಾಣ ಸಂಸ್ಥೆಯಾದ ಕೆವಿಎನ್, ‘ಜನ ನಾಯಕನ್’ ಮೇಲೆ ಆಸೆಯನ್ನೇ ಬಿಟ್ಟಿದೆಯಂತೆ.

ಇದೀಗ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿದ್ದು ಚುನಾವಣೆ ಮುಗಿಯುವವರೆಗೆ ಅಂದರೆ ಮೇ 6ರವರೆಗೆ ಸಿನಿಮಾ ಬಿಡುಗಡೆಯಾಗಿದೆ. ಅದಾದ ಬಳಿಕವಷ್ಟೆ ಸಿನಿಮಾವನ್ನು ಬಿಡುಗಡೆ ಮಾಡಬೇಕಿದೆ. ಆದರೆ ‘ಜನ ನಾಯಕನ್’ ಸುತ್ತುವರೆದಿರುವ ರಾಜಕೀಯದಿಂದ ಬೇಸತ್ತಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಸಿನಿಮಾದ ಮೇಲೆ ಆಸೆಯನ್ನೇ ಕೈಬಿಟ್ಟಿದೆ, ಬದಲಿಗೆ ‘ಟಾಕ್ಸಿಕ್’ ಸಿನಿಮಾ ಮೇಲೆ ಗಮನ ಹರಿಸಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದೆ, ಮೇ 4ಕ್ಕೆ ಫಲಿತಾಂಶ ಮತ್ತು ಮೇ 6ಕ್ಕೆ ಚುನಾವಣಾ ನೀತಿ ಸಂಹಿತೆ ಅಂತ್ಯ. ಏಪ್ರಿಲ್ 23 ರಂದು ಮತದಾನ ಮುಗಿದ ಕೂಡಲೇ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯೂ ಕೆವಿಎನ್‌ಗೆ ಇದೆ. ಒಂದೊಮ್ಮೆ ಫಲಿತಾಂಶ ಬಂದ ಬಳಿಕ ಸಿನಿಮಾ ಬಿಡುಗಡೆ ಮಾಡಿದರೆ, ಫಲಿತಾಂಶದಲ್ಲಿ ವಿಜಯ್ ಪಕ್ಷಕ್ಕೆ ಹಿನ್ನಡೆ ಆಗಿದ್ದರೆ, ಅದರ ಪ್ರಭಾವ ಸಿನಿಮಾದ ಮೇಲೂ ಬೀಳಲಿದೆ. ಯಾವ ಫಲಿತಾಂಶ ಬರುವ ಮೊದಲೇ ಸಿನಿಮಾವನ್ನು ಬಿಡುಗಡೆ ಮಾಡುವುದು ಕೆವಿಎನ್ ನ ಯೋಚನೆ. ಜೊತೆಗೆ, ಇದರಿಂದ ‘ಟಾಕ್ಸಿಕ್’ ಮತ್ತು ‘ಜನ ನಾಯಕನ್’ ಬಿಡುಗಡೆಯ ಮಧ್ಯೆ ತುಸು ಹೆಚ್ಚು ಗ್ಯಾಪ್ ಸಿಕ್ಕಿದೆ.

ಇದನ್ನೂ ಓದಿ;ಮಾರ್ಚ್ 9ಕ್ಕೆ ನಿರ್ಧಾರ ‘ಜನ ನಾಯಕನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

‘ಟಾಕ್ಸಿಕ್’ ಸಿನಿಮಾ ಜೂನ್ 04 ರಂದು ಬಿಡುಗಡೆಯಾಗಲಿದೆ. ‘ಜನ ನಾಯಕ’ಗೆ ‘ಟಾಕ್ಸಿಕ್’ಗೆ ಬ್ಲಾಕ್ ಬಸ್ಟರ್ ಆಗುವ ಸಾಮರ್ಥ್ಯ ಹೆಚ್ಚಿದೆಯಂತೆ. ತನ್ನ ಗಮನವನ್ನು ‘ಜನ ನಾಯಕ’ ಬದಲಿಗೆ ‘ಟಾಕ್ಸಿಕ್’ ಮೇಲೆ ಹರಿಸಲಿದೆ ಕೆವಿಎನ್. ‘ಟಾಕ್ಸಿಕ್’ ಸಿನಿಮಾಕ್ಕೆ ಭರ್ಜರಿ ಪ್ರಚಾರ ನೀಡಿ, ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಕೆವಿಎನ್ ನಿರ್ಮಾಣ ಸಂಸ್ಥೆ ಪ್ರಸ್ತುತ ಮೂರು ದೊಡ್ಡ ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದು, ಮೂರೂ ಸಿನಿಮಾಗಳು ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕಿವೆ. ‘ಜನ ನಾಯಗನ್’ ಸಿನಿಮಾಕ್ಕೆ ರಾಜಕೀಯ ಸಂಕಷ್ಟ ಎದುರಾಗಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಮಸ್ಯೆಯಾಗಿದೆ. ಇನ್ನು ಧ್ರುವ ಸರ್ಜಾ ನಟನೆಯ ‘ಕೇಡಿ’ ಸಿನಿಮಾಕ್ಕೆ ಹಾಡಿನ ಸಂಕಷ್ಟ ಎದುರಾಗಿದೆ. ಅಂದಹಾಗೆ ‘ಕೇಡಿ’ ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *