Video: ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಉದುರಿಬಿತ್ತು ಸುಂದರಿಯ ಹಲ್ಲು; ವಿಡಿಯೋ ವೈರಲ್​

Video: ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಉದುರಿಬಿತ್ತು ಸುಂದರಿಯ ಹಲ್ಲು; ವಿಡಿಯೋ ವೈರಲ್​


Video: ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಉದುರಿಬಿತ್ತು ಸುಂದರಿಯ ಹಲ್ಲು; ವಿಡಿಯೋ ವೈರಲ್

ಬ್ಯಾಂಕಾಕ್: ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ಕೇವಲ ರೂಪವಷ್ಟೇ ಅಲ್ಲ, ಸಮಯ ಮತ್ತು ಆತ್ಮವಿಶ್ವಾಸವೂ ಅತಿ ಮುಖ್ಯ. ಆದರೆ ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ‘ಮಿಸ್ ಗ್ರ್ಯಾಂಡ್ ಥೈಲ್ಯಾಂಡ್’ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರ (ಲೈವ್ ರೌಂಡ್) ಸುಂದರಿಒಬ್ಬಳ ಹಲ್ಲುಗಳು ಕಳಚಿ ಬಿದ್ದ ಅಪರೂಪದ ಮತ್ತು ಮುಜುಗರದ ಪ್ರಸಂಗವೊಂದು ನಡೆಯುತ್ತದೆ.

ಘಟನೆಯ ವಿವರ ಹೀಗಿದೆ, ಕಮಲವಾನ್ ಚನಾಗೋ ಎಂಬ ಸುಂದರಿ ತೀರ್ಪುಗಾರರ ಮುಂದೆ ನಿಂತು, ಆತ್ಮವಿಶ್ವಾಸದಿಂದ ಮಾತನಾಡಲು ಬಾಯಿ ತೆರೆದಿದ್ದಾರೆ. ಆದರೆ ಅವಳ ಬಾಯಲ್ಲಿದ್ದ ಹಲ್ಲುಗಳು ವೇದಿಕೆಯ ಮೇಲೆ ಉದುರಿ ಬಿದ್ದಿವೆ. ಈ ದೃಶ್ಯವನ್ನು ಕಂಡು ಮತ್ತು ತೀರ್ಪುಗಾರರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಇಪ್ಪತ್ತರ ಹರೆಯದ ಈ ಸುಂದರಿ ಆಗಲೇ ಹಲ್ಲುಸೆಟ್ಟು (ಡೆಂಚರ್ಸ್) ಹಾಕಿಸಿಕೊಂಡಿದ್ದಾಳೆ ಎಂದು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಆದರೆ ಅಸಲಿ ವಿಷಯವೇನೆಂದರೆ, ಸೌಂದರ್ಯ ಹೆಚ್ಚಿಸಿಕೊಳ್ಳಲು ಅವರು ತಮ್ಮ ಹಲ್ಲುಗಳಿಗೆ ‘ವೆನಿಯರ್ಸ್’ (Veneers) ಎಂಬ ಕೃತಕ ಹಲ್ಲಿನ ಕವಚವನ್ನು ಅಳವಡಿಸಿಕೊಂಡಿದ್ದಾರೆ. ಸರಿಯಾಗಿ ಫಿಕ್ಸ್ ಆಗದ ಕಾರಣ, ಆಕೆ ಮಾತನಾಡಲು ಹೋದಾಗ ಆ ಕವಚಗಳು ಕೆಳಗೆ ಬಿದ್ದಿದೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *