
ಮೆಗಾಸ್ಟಾರ್ ಚಿರಂಜೀವಿ (ಚಿರಂಜೀವಿ), ತೆಲುಗು ಚಿತ್ರರಂಗದಲ್ಲಿ, ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಸಹ ಚಿತ್ರರಂಗದಲ್ಲಿ ಬ್ಯೂಸಿ ಮಾಡಿದ್ದಾರೆ. ಚಿರಂಜೀವಿ ಅವರು ಸಿನಿಮಾ ನಟನೆಯ ಜೊತೆಗೆ ತಮ್ಮ ಅಪಾರ ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಸದ್ಯಕ್ಕೆ ಜನರ ಜೀವ ಉಳಿಸಿವೆ. ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಟ ಚಿರಂಜೀವಿ, ಇದೀಗ ತಮ್ಮ ಮಗ, ಸೂಪರ್ ಸ್ಟಾರ್ ಚರಣ್ ಹುಟ್ಟುಹಬ್ಬದಂದು ಹಲವಾರು ಮಂದಿಗೆ ಊಟ ಹಾಕಿದ ಜೊತೆಗೆ ಹತ್ತು ಲಕ್ಷ ರೂಪಾಯಿ ಹಣವನ್ನು ಸಮಾಜ ಸೇವೆಗೆ ಉಚಿತವಾಗಿ ನೀಡಿದರು.
ನಿನ್ನೆಯಷ್ಟೇ ರಾಮ್ ಚರಣ್ ಅವರು ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಂಡರು. ತಮ್ಮ ಪುತ್ರ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸಾಮಾಜಿಕ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಅವರು ಚಿತ್ರರಂಗಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿ ಎನ್ ಟಿಆರ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯ್ತು. ಈ ಪ್ರಶಸ್ತಿಯು, ಫಲಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಹಣವನ್ನು ಸಹ ಒಳಗೊಂಡಿದೆ. ಆ ಹಣವನ್ನು ಚಿರಂಜೀವಿ ಅವರು ವೃದ್ಧಾಶ್ರಮಗಳು, ದೃಷ್ಟಿ ವಿಕಲಚೇತನರ ಸಂಸ್ಥೆಗಳು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಫೌಂಡೇಶನ್ಗಳಿಗೆ ಹಂಚಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ವೈದ್ಯಕೀಯ ವೆಚ್ಚಕ್ಕೂ ಅವರು ಸಹಾಯ ಹಸ್ತ ಚಾಚಿದ್ದಾರೆ.
ಕೇವಲ ದೇಣಿಗೆ ನೀಡುವುದಲ್ಲದೆ, ಚಿರಂಜೀವಿ ಅವರು ವೈಯಕ್ತಿಕವಾಗಿಯೂ ಸಹ ಸೇರಿದ್ದಾರೆ. ಸಂಭ್ರಮಾಚರಣೆಗೆ ವೃದ್ಧರನ್ನು ಆಹ್ವಾನಿಸಿ, ಅವರಿಗೆ ಅನ್ನದಾನ ಮಾಡಿ ಹೊಸ ಬಟ್ಟೆಗಳನ್ನು ವಿತರಿಸಿದರು. ಈ ಮಾನವೀಯ ಕಾರ್ಯವು ಅನೇಕರ ಮೊಗದಲ್ಲಿ ಮಂದಹಾಸ ಮೂಡಿಸಿತು. ಕುಟುಂಬದ ಸಂಭ್ರಮವನ್ನು ಸಮಾಜಸೇವೆಯಾಗಿ ಪರಿವರ್ತಿಸುವ ಮೂಲಕ, ನಿಜವಾದ ಯಶಸ್ಸು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವಲ್ಲಿ ಅಡಗಿದೆ ಎಂದು ಚಿರಂಜೀವಿ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಅವರು ಈ ರೀತಿಯ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಒಂದು ಸಮಯದಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ಅಭಿಮಾನಿಗಳ ಸಂಘಗಳನ್ನು ಹೊಂದಿದ್ದ ನಟ ಮೆಗಾಸ್ಟಾರ್ ಚಿರಂಜೀವಿ. ತಮ್ಮ ಅಭಿಮಾನಿಗಳನ್ನು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಳಸಿಕೊಂಡರು. ಆ ಮೂಲಕ ಇತರ ಸ್ಟಾರ್ ನಟರುಗಳಿಗೆ ಮಾದರಿ ಆದರು. ಚಿರಂಜೀವಿ ಸ್ಥಾಪಿಸಿದ ಬ್ಲಾಡ್ ಬ್ಯಾಂಕ್ ಲಕ್ಷಾಂತರ ಜನರ ಜೀವಗಳನ್ನು ಉಳಿಸಿದೆ. ಚಿರಂಜೀವಿ ಅವರು ಹಲವಾರು ಸಿನಿಮಾ ನಟ-ನಟಿಯರಿಗೆ ಸಹ ಅವರ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆಕ್ಸಿಜನ್ ಬ್ಯಾಂಕ್ ಅನ್ನು ಸಹ ಚಿರಂಜೀವಿ ಮಾಡಿದ್ದರು. ಇದು ಸಹ ಆ ಕಾರ್ಯವನ್ನು ಮುಂದುವರೆಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ