Daily Walking: ದಿನಕ್ಕೆ 1 ಕಿ.ಮೀ. ನಡೆದರೆ ಸಾಕು, ನಿಮ್ಮ ದೇಹದಲ್ಲಿ ಆಗುತ್ತೆ ಈ ಅದ್ಭುತ ಬದಲಾವಣೆ! | Health Benefits Of Walking 1 Km Daily Expert Explains Gvd

Daily Walking: ದಿನಕ್ಕೆ 1 ಕಿ.ಮೀ. ನಡೆದರೆ ಸಾಕು, ನಿಮ್ಮ ದೇಹದಲ್ಲಿ ಆಗುತ್ತೆ ಈ ಅದ್ಭುತ ಬದಲಾವಣೆ! | Health Benefits Of Walking 1 Km Daily Expert Explains Gvd



Daily Walking: ದಿನಕ್ಕೆ 1 ಕಿ.ಮೀ. ನಡೆದರೆ ಸಾಕು, ನಿಮ್ಮ ದೇಹದಲ್ಲಿ ಆಗುತ್ತೆ ಈ ಅದ್ಭುತ ಬದಲಾವಣೆ! | Health Benefits Of Walking 1 Km Daily Expert Explains Gvd

ಪ್ರತಿದಿನ ಒಂದು ಕಿಲೋಮೀಟರ್ ನಡೆಯುವುದು ಚಿಕ್ಕ ಅಭ್ಯಾಸದಂತೆ ಕಂಡರೂ, ಇದು ದೇಹದ ಚಲನೆಯನ್ನು ಉತ್ತೇಜಿಸಿ ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ಆಗುವ ಬದಲಾವಣೆಗಳೇನು ಎಂಬುದನ್ನು ಇಲ್ಲಿ ನೋಡೋಣ.

ಇಂದಿನ ವೇಗದ ಜೀವನದಲ್ಲಿ ವ್ಯಾಯಾಮಕ್ಕೆ ಸಮಯ ಮೀಸಲಿಡುವುದು ಹಲವರಿಗೆ ಕಷ್ಟ. ಇದರಿಂದಾಗಿ, ಚಿಕ್ಕ ವಯಸ್ಸಿನಲ್ಲೇ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇದನ್ನು ನಿಭಾಯಿಸಲು ದೊಡ್ಡ ವ್ಯಾಯಾಮವೇ ಬೇಕಿಲ್ಲ. ಪ್ರತಿದಿನ ಸ್ವಲ್ಪ ದೂರ ನಡೆಯುವುದು ದೇಹ ಮತ್ತು ಮನಸ್ಸಿಗೆ ಉತ್ತಮ ಆರಂಭ ನೀಡುತ್ತದೆ.

ಅನೇಕರಿಗೆ ವಾಕಿಂಗ್ ಬಗ್ಗೆ ಗೊಂದಲಗಳಿವೆ. ಬೆಳಿಗ್ಗೆ ನಡೆಯಬೇಕಾ, ಸಂಜೆ ನಡೆಯಬೇಕಾ, ಎಷ್ಟು ದೂರ ನಡೆಯಬೇಕು ಎಂಬ ಪ್ರಶ್ನೆಗಳು ಮೂಡುತ್ತವೆ. ಆದರೆ ತಜ್ಞರ ಪ್ರಕಾರ, ಯಾವುದೇ ಸಮಯವಾದರೂ ಸರಿ, ಪ್ರತಿದಿನ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಮುಖ್ಯ.

ಒಂದು ಕಿಲೋಮೀಟರ್ ನಡಿಗೆ ಚಿಕ್ಕದೆಂದು ಅನಿಸಿದರೂ, ಇದು ದೇಹಕ್ಕೆ ಬೇಕಾದ ಮೂಲಭೂತ ಚಲನೆಯನ್ನು ನೀಡುತ್ತದೆ. ದೀರ್ಘಕಾಲ ಕುಳಿತುಕೊಳ್ಳುವ ಜೀವನಶೈಲಿಯಲ್ಲಿ, ಈ ಸಣ್ಣ ನಡಿಗೆಯು ದೇಹದ ಚಯಾಪಚಯವನ್ನು ಉತ್ತೇಜಿಸಿ, ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಇದರಿಂದ ದೇಹದಲ್ಲಿನ ಜಡತ್ವ ಕಡಿಮೆಯಾಗಿ, ಚುರುಕುತನ ಹೆಚ್ಚುತ್ತದೆ.

ನಡಿಗೆಯು ಮಾನಸಿಕ ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನ ನೀಡುತ್ತದೆ. ಪ್ರತಿದಿನ ಸ್ವಲ್ಪ ಹೊತ್ತು ನಡೆದರೆ, ಮಾನಸಿಕ ಒತ್ತಡ ಕಡಿಮೆಯಾಗಿ, ಮನಸ್ಥಿತಿ ಸುಧಾರಿಸುತ್ತದೆ. ದೇಹದಲ್ಲಿ ಎಂಡಾರ್ಫಿನ್‌ಗಳಂತಹ ಹಾರ್ಮೋನುಗಳು ಬಿಡುಗಡೆಯಾಗಿ, ಮನಸ್ಸು ಉಲ್ಲಾಸಗೊಳ್ಳುತ್ತದೆ. ಕೆಲಸದ ಒತ್ತಡದಲ್ಲಿರುವವರಿಗೆ ಇದು ಉತ್ತಮ ಪರಿಹಾರ.

ಹೃದಯದ ಆರೋಗ್ಯ ಸುಧಾರಣೆ

ತೂಕ ಇಳಿಸಲು ಬಯಸುವವರಿಗೆ ಒಂದು ಕಿಲೋಮೀಟರ್ ನಡಿಗೆ ಸಾಕಾಗುವುದಿಲ್ಲ. ಇದು ಸುಮಾರು 40-60 ಕ್ಯಾಲೊರಿಗಳನ್ನು ಮಾತ್ರ ಬರ್ನ್ ಮಾಡುತ್ತದೆ. ಆದರೆ ಇದನ್ನು ಅಭ್ಯಾಸ ಮಾಡಿಕೊಂಡು, ದೂರ ಮತ್ತು ಸಮಯವನ್ನು ಹೆಚ್ಚಿಸಿದರೆ ಹೃದಯದ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ, ಆರಂಭದಲ್ಲಿ 1 ಕಿ.ಮೀ. ನಡಿಗೆಯಿಂದ ಪ್ರಾರಂಭಿಸಿ, ನಂತರ ನಿಧಾನವಾಗಿ ಅದನ್ನು ಹೆಚ್ಚಿಸುವುದೇ ಉತ್ತಮ ವಿಧಾನ.



Source link

Leave a Reply

Your email address will not be published. Required fields are marked *